ಯುವ ರಾಜ್​ಕುಮಾರ್​ ವಿಚ್ಛೇದನದ ಬಗ್ಗೆ ಸಂಪೂರ್ಣ ವಿವರ ನೀಡಿದ ಶ್ರೀದೇವಿ ತಂದೆ ಭೈರಪ್ಪ

‘ಅವರು ದೊಡ್ಮನೆ ಅಂತ ಹೇಳಿಕೊಳ್ಳಬಾರದು. ಇದನ್ನು ನಾವು ನಿರೀಕ್ಷಿಸಿರಲಿಲ್ಲ. ಅವರ ಟಾರ್ಚರ್​ಗೆ ಹೆದರಿಕೊಂಡು ನನ್ನ ಮಗಳು ಆಸ್ಪತ್ರೆಗೆ ದಾಖಲಾಗಿದ್ದಳು. ಈಗಲೂ ಅವಳು ಅಲ್ಲಿ ಇರುವುದು ನನಗೆ ಇಷ್ಟ ಇಲ್ಲ’ ಎಂದು ಶ್ರೀದೇವಿ ತಂದೆ ಭೈರಪ್ಪ ಹೇಳಿದ್ದಾರೆ. ಯುವ ರಾಜ್​ಕುಮಾರ್​ ಜೊತೆಗಿನ ಮನಸ್ತಾಪದ ಬಗ್ಗೆ ಅವರು ಮಾತನಾಡಿದ್ದಾರೆ.

ಯುವ ರಾಜ್​ಕುಮಾರ್​ ವಿಚ್ಛೇದನದ ಬಗ್ಗೆ ಸಂಪೂರ್ಣ ವಿವರ ನೀಡಿದ ಶ್ರೀದೇವಿ ತಂದೆ ಭೈರಪ್ಪ
ಶ್ರೀದೇವಿ ತಂದೆ ಭೈರಪ್ಪ
Follow us
| Updated By: ಮದನ್​ ಕುಮಾರ್​

Updated on: Jun 10, 2024 | 11:17 PM

ದೊಡ್ಮನೆ ಕುಡಿಯ ಸಂಸಾರದ ಗಲಾಟೆ ಬಹಿರಂಗ ಆಗಿದೆ. ಯುವ ರಾಜ್​ಕುಮಾರ್ (Yuva Rajkumar)​ ಮತ್ತು ಶ್ರೀದೇವಿ ದಾಂಪತ್ಯದಲ್ಲಿ ಬಿರುಕು ಮೂಡಿದೆ. ವಿಚ್ಛೇದನ ಪಡೆಯಲು ಯುವ ರಾಜ್​ಕುಮಾರ್​ ಮುಂದಾಗಿದ್ದಾರೆ. ಈ ಬಗ್ಗೆ ಶ್ರೀದೇವಿ (Sridevi) ಅವರ ತಂದೆ ಭೈರಪ್ಪ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ಮೊದಲು ನನಗೆ ಇದರ ಬಗ್ಗೆ ಗೊತ್ತಿರಲಿಲ್ಲ. ನನ್ನ ಮಗಳು ನವೆಂಬರ್​ನಲ್ಲಿ ಅಮೆರಿಕದಿಂದ ಬಂದಾಗ ಅವರು ಗಲಾಟೆ ಮಾಡಿದ್ದಾರೆ. ಆಗ ನನ್ನ ಮಗಳು ಅತ್ತುಕೊಂಡು ಫೋನ್​ ಮಾಡಿದ್ದಳು. ಆಗ ಮಾತನಾಡಲು ಅವರ ಮನೆಗೆ ಹೋದಾಗ ಯುವ ಜೊತೆ ಮಾತನಾಡೋಕೆ ಅವರ ತಂದೆ-ತಾಯಿ ನಮ್ಮನ್ನು ಬಿಡಲೇ ಇಲ್ಲ. ಆತ ಕೂಡ ತನಗೆ ಬಿಡುವು ಇಲ್ಲ ಅಂತ ಹೇಳಿ ಹೊರಟುಹೋದ್ರು. ಡಿಸೆಂಬರ್​ನಲ್ಲಿ ಇಲ್ಲಿಗೆ ಬರ್ತೀನಿ ಅಂದ್ರು. ಬಂದು ಸುಮ್ಮನೇ ಕುಳಿತಿದ್ದರು. ಮಗಳ ತಪ್ಪು ಏನು ಅಂತ ನಾನು ಕೇಳಿದ್ದಕ್ಕೂ ಉತ್ತರ ಕೊಡಲಿಲ್ಲ. ನನ್ನ ಮಗಳು ಕಿರುಕುಳ ಮಾಡುತ್ತಾಳೆ ಅಂತ ಆರೋಪ ಹೊರಿಸಿದ್ದಾರೆ. ನನ್ನ ಮಗಳು ಕಿರುಕುಳ ನೀಡುವಂತವಳಲ್ಲ’ ಎಂದು ಭೈರಪ್ಪ (Bhyrappa) ಹೇಳಿದ್ದಾರೆ.

‘ಮೊದಲು ಲವ್​ ಮಾಡಿದ್ದರು. ಆಮೇಲೆ ಅರೇಂಜ್​ ಮ್ಯಾರೇಜ್​ ಆಯಿತು. ಅವರು ಪದೇ ಪದೇ ಬಂದು ಮದುವೆ ಮಾಡಿಕೊಡಿ ಅಂತ ಹಿಂಸೆ ಮಾಡಿದ್ದರು. ತುಂಬ ಒತ್ತಾಯ ಮಾಡಿದರು. ಆಮೇಲೆ ನಾವು ಒಪ್ಪಿಕೊಂಡು ನಿಶ್ಚಿತಾರ್ಥ ಮಾಡಿದೆವು. ಆ ನಂತರವೂ ಬೇಡ ಅನಿಸುತ್ತದೆ ಅಂತ ನಾನು ನನ್ನ ಮಗಳಿಗೆ ಹೇಳಿದ್ದೆ. ಆಮೇಲೆ ನಾನೇ ಮನಸ್ಸು ಸೋತೆ. ದೊಡ್ಮನೆ ಅಂತ ನಾನು ಒಪ್ಪಿಕೊಂಡಿದ್ದಲ್ಲ. ನನ್ನ ಮಗಳು ವಿದ್ಯಾವಂತೆ. ದುಡಿದು ತಿನ್ನುವಂತಹ ಶಕ್ತಿ ಇರುವಂತವಳು. ಆ ಹುಡುಗ ಎಸ್​ಎಸ್​ಎಲ್​ಸಿ. ಆದ್ರೂ ನಾವು ಮದುವೆ ಮಾಡಿದ್ದೇವೆ’ ಎಂದಿದ್ದಾರೆ ಭೈರಪ್ಪ.

‘ತನ್ನ ಬಗ್ಗೆ ಕೆಟ್ಟ ಮಾತು ಆಡುತ್ತಾರೆ ಎಂದು ಮಗಳು ನಮಗೆ ಯಾವತ್ತೂ ಹೇಳಲಿಲ್ಲ. ನವೆಂಬರ್​ನಲ್ಲಿ ಅವರ ಮನೆಯಲ್ಲೇ ಇದ್ದಳು. ಬಳಿಕ ಅಕಾಡೆಮಿಗೆ ಕಳಿಸಿದೆ. ನಂತರ ಫ್ರೆಂಡ್​ ಮನೆಗೆ ಹೋದಳು. ಅಲ್ಲಿಂದ ಅವಳನ್ನು ಕರೆದುಕೊಂಡು ಹೋಟೆಲ್​ಗೆ ಕರೆದುಕೊಂಡು ಹೋಗಿ ಅಲ್ಲಿ ಬಿಟ್ಟ. ಮರುದಿನ ಅವಳು ಅಮೆರಿಕಗೆ ಹೋದಳು. ಮನೆಯಲ್ಲಿ ತುಂಬ ಕೆಟ್ಟ ಮಾತು ಆಡುತ್ತಿದ್ದರು ಅಂತ ನನ್ನ ಮಗಳು ನನಗೆ ಹೇಳಿದ್ದಳು’ ಎಂದು ಭೈರಪ್ಪ ಹೇಳಿದ್ದಾರೆ.

ಇದನ್ನೂ ಓದಿ: ಯುವ ರಾಜ್​ಕುಮಾರ್​ ಡಿವೋರ್ಸ್​ ವಿಚಾರದಲ್ಲಿ ಕೇಳಿಬಂತು ಸಪ್ತಮಿ ಗೌಡ ಹೆಸರು

‘ಯುವರಾಜ್​ ನನ್ನ ಜೊತೆ ತುಂಬ ಚೆನ್ನಾಗಿ ಇದ್ದ. ನನಗೆ ಹುಷಾರಿಲ್ಲ ಎಂದರೆ ಮಗಳು-ಅಳಿಯ ಬರುತ್ತಿದ್ದರು. ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ನನಗೆ ತಿಳಿದ ಮಟ್ಟಿಗೆ ಮನೆಯವರದ್ದೇ ಸಮಸ್ಯೆ. ಮನೆಯವರೇ ಯುವರಾಜ್​ಗೆ ಕೇಳಿಕೊಟ್ಟು ಈ ಥರ ಟಾರ್ಚರ್ ಮಾಡಿಸುತ್ತಾ ಇದ್ದಾರೆ. ಹಣ, ಆಸ್ತಿ ವಿಚಾರಕ್ಕೆ ಮನಸ್ತಾಪ ಆಗಿಲ್ಲ. ಅವರಿಗಿಂತ ಜಾಸ್ತಿ ನಮ್ಮ ಬಳಿಯೇ ಇದೆ. ನಾವು ತೋರಿಸಿಕೊಳ್ಳಲ್ಲ. ಸಿಂಪಲ್​ ಆಗಿ ಇರುವ ಜನ. ಕೃಷಿ ಕುಟುಂಬದಿಂದ ಬಂದವವರು. ಹೇಗೆ ಇರಬೇಕೋ ಹಾಗೆಯೇ ಇದ್ದೇವೆ. ನಮ್ಮ ತಂದೆಯ ಕಾಲದಿಂದಲೂ ನಾವು ಕೋಟ್ಯಾಧಿಪತಿಗಳು’ ಎಂದಿದ್ದಾರೆ ಭೈರಪ್ಪ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್