‘ನನಗೆ ಮಾಹಿತಿ ಇಲ್ಲ’: ಯುವ ರಾಜ್​ಕುಮಾರ್ ಡಿವೋರ್ಸ್ ಬಗ್ಗೆ ಶಿವಣ್ಣ ಮೊದಲ ಪ್ರತಿಕ್ರಿಯೆ

‘ಯುವ ಡಿವೋರ್ಸ್​ ವಿಚಾರದ ಬಗ್ಗೆ ನನಗೆ ಮಾಹಿತಿ ಇಲ್ಲ. ಹಾಗಾಗಿ, ಮಾಹಿತಿ ಇಲ್ಲದೇ ಮಾತನಾಡೋದು ಸರಿಯಿಲ್ಲ. ಈ ಬಗ್ಗೆ ಮೊಬೈಲ್​ನಲ್ಲಿ ನೋಡಿ ತಿಳಿದುಕೊಂಡೆ. ಆ ರೀತಿ ಏನಾದರೂ ಆಗಿದ್ದರೆ ಮನಸ್ಸಿಗೆ ಬೇಜಾರಾಗುತ್ತದೆ’ ಎಂದು ಶಿವರಾಜ್​ಕುಮಾರ್​ ಅವರು ಹೇಳಿದ್ದಾರೆ. ಡಾ. ರಾಜ್​ಕುಮಾರ್​ ಕುಟುಂಬದಲ್ಲಿ ಇದೇ ಮೊದಲ ಬಾರಿಗೆ ವಿಚ್ಛೇದನ ನಡೆಯುತ್ತಿದೆ. ಆದ್ದರಿಂದ ಅಭಿಮಾನಿಗಳಿಗೆ ಶಾಕ್​ ಆಗಿದೆ.

‘ನನಗೆ ಮಾಹಿತಿ ಇಲ್ಲ’: ಯುವ ರಾಜ್​ಕುಮಾರ್ ಡಿವೋರ್ಸ್ ಬಗ್ಗೆ ಶಿವಣ್ಣ ಮೊದಲ ಪ್ರತಿಕ್ರಿಯೆ
ಶಿವರಾಜ್​ಕುಮಾರ್​, ಶ್ರೀದೇವಿ, ಯುವ ರಾಜ್​ಕುಮಾರ್
Follow us
Basavaraj Yaraganavi
| Updated By: ಮದನ್​ ಕುಮಾರ್​

Updated on: Jun 10, 2024 | 3:29 PM

ಡಾ. ರಾಜ್​ಕುಮಾರ್​ ಅವರ ಮೊಮ್ಮಗ ಯುವ ರಾಜ್​ಕುಮಾರ್ (Yuva Rajkumar)​ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಪತ್ನಿ ಶ್ರೀದೇವಿ ಭರಪ್ಪ ಅವರಿಂದ ಡಿವೋರ್ಸ್​ ಪಡೆಯಲು ಮುಂದಾಗಿದ್ದಾರೆ. ಸದ್ಯ ಅಮೆರಿಕದಲ್ಲಿ ಇರುವ ಶ್ರೀದೇವಿ (Sridevi) ಅವರು ಡಿವೋರ್ಸ್​​ ನೋಟಿಸ್​ಗೆ ಪ್ರತಿಕ್ರಿಯಿಸಿದ್ದು, ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ. ಈ ಎಲ್ಲ ಬೆಳೆವಣಿಗೆಗಳ ಕುರಿತಂತೆ ಅಣ್ಣಾವ್ರ ಕುಟುಂಬದ ಹಿರಿಯರಾದ ಶಿವರಾಜ್​ಕುಮಾರ್​ (Shivarajkumar) ಅವರು ಶಿವಮೊಗ್ಗದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಯುವ ರಾಜ್​ಕುಮಾರ್​ ಮತ್ತು ಶ್ರೀದೇವಿ ಅವರ ವಿಚ್ಛೇದನದ (Yuva Rajkumar Sridevi Divorce) ಬಗ್ಗೆ ತಮಗೆ ಯಾವುದೇ ಮಾಹಿತಿ ಸದ್ಯಕ್ಕೆ ಇಲ್ಲ ಎಂದು ಶಿವಣ್ಣ ಹೇಳಿದ್ದಾರೆ.

‘ಯುವ ಡಿವೋರ್ಸ್​ ವಿಚಾರದ ಬಗ್ಗೆ ನನಗೆ ಮಾಹಿತಿ ಇಲ್ಲ. ಹಾಗಾಗಿ, ಮಾಹಿತಿ ಇಲ್ಲದೇ ಮಾತನಾಡೋದು ಸರಿಯಿಲ್ಲ. ಈ ಬಗ್ಗೆ ಮೊಬೈಲ್​ನಲ್ಲಿ ನೋಡಿ ತಿಳಿದುಕೊಂಡೆ. ಆ ರೀತಿ ಏನಾದರೂ ಆಗಿದ್ದರೆ ಮನಸ್ಸಿಗೆ ಬೇಜಾರಾಗುತ್ತದೆ’ ಎಂದು ಶಿವರಾಜ್​ಕುಮಾರ್​ ಅವರು ಹೇಳಿದ್ದಾರೆ. ಡಾ. ರಾಜ್​ಕುಮಾರ್​ ಕುಟುಂಬದಲ್ಲಿ ಇದೇ ಮೊದಲ ಬಾರಿಗೆ ವಿಚ್ಛೇದನ ನಡೆಯುತ್ತಿದೆ. ಆದ್ದರಿಂದ ಅಭಿಮಾನಿಗಳಿಗೆ ಶಾಕ್​ ಆಗಿದೆ.

ಇದನ್ನೂ ಓದಿ: ಖ್ಯಾತ ನಟಿ ಜೊತೆ ಹೆಚ್ಚಿತಾ ಆಪ್ತತೆ? ಯುವ ರಾಜ್​ಕುಮಾರ್​ ವಿಚ್ಛೇದನಕ್ಕೆ ಇದೇ ಕಾರಣ ಆಯ್ತಾ?

2018ರ ಜುಲೈ 5ರಂದು ಮೈಸೂರಿನಲ್ಲಿ ನಿಶ್ಚಿತಾರ್ಥ ಮಾಡಲಾಗಿತ್ತು. 2019ರ ಮೇ 26ರಂದು ಯುವ ರಾಜ್​ಕುಮಾರ್​ ಮತ್ತು ಶ್ರೀದೇವಿ ಭೈರಪ್ಪ ಅವರ ವಿವಾಹ ನೆರವೇರಿತ್ತು. ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್‌ನಲ್ಲಿ ಅದ್ದೂರಿ ವಿವಾಹ ಸಮಾರಂಭ ನಡೆದಿತ್ತು. ಅದರಲ್ಲಿ ಚಿರಂಜೀವಿ, ಉಪೇಂದ್ರ, ಯಶ್, ರವಿಚಂದ್ರನ್, ದ್ವಾರಕೀಶ್​, ರಚಿತಾ ರಾಮ್, ಚಿರಂಜೀವಿ ಸರ್ಜಾ, ರಶ್ಮಿಕಾ ಮಂದಣ್ಣ, ಸಿದ್ದರಾಮಯ್ಯ ಮುಂತಾದವರು ಭಾಗಿ ಆಗಿದ್ದರು. ಆದರೆ ಈಗ ಈ ಮದುವೆ ಮುರಿದು ಬಿದ್ದಿದೆ.

ಶ್ರೀದೇವಿ ಭೈರಪ್ಪ ಅವರು ಮೈಸೂರಿನಲ್ಲಿ ಹುಟ್ಟಿ ಬೆಳೆದು ಉನ್ನತ ಶಿಕ್ಷಣ ಪಡೆದಿದ್ದಾರೆ. ‘ಡಾ. ರಾಜ್ ಕುಮಾರ್ ಸಿವಿಲ್ ಸರ್ವೀಸ್ ಅಕಾಡೆಮಿ’ ಜವಾಬ್ದಾರಿಯನ್ನು ಅವರು ನಿಭಾಯಿಸುತ್ತಿದ್ದರು. ಅಕಾಡೆಮಿ ರೂವಾರಿ ಶ್ರೀದೇವಿ ಅವರೇ ಆಗಿದ್ದರು. ಅವರ ಜೊತೆ ಯುವ ರಾಜ್​ಕುಮಾರ್​ ಸುಮಾರು 7 ವರ್ಷ ಪ್ರೀತಿಯಲ್ಲಿದ್ದರು ಎಂದು ಹೇಳಲಾಗುತ್ತಿದೆ. ಆದರೆ ಈಗ ಕಳೆದ ಆರೇಳು ತಿಂಗಳಿಂದ ಯುವರಾಜ್-ಶ್ರೀದೇವಿ ಒಟ್ಟಿಗೆ ವಾಸಿಸುತ್ತಿಲ್ಲ. ವಿಚ್ಛೇದನದ ಬಗ್ಗೆ ಶ್ರೀದೇವಿ ಅವರು ಸಾರ್ವಜನಿಕವಾಗಿ ಮಾತನಾಡುವುದು ಬಾಕಿ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.