AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Plane Crash: ಅಹಮದಾಬಾದ್ ವಿಮಾನ ಅಪಘಾತದ ವೇಳೆ ಹಾಸ್ಟೆಲ್​ನಿಂದ ಹಾರಿದ ವೈದ್ಯಕೀಯ ವಿದ್ಯಾರ್ಥಿಗಳು; ಹೊಸ ವಿಡಿಯೋ ಇಲ್ಲಿದೆ

Plane Crash: ಅಹಮದಾಬಾದ್ ವಿಮಾನ ಅಪಘಾತದ ವೇಳೆ ಹಾಸ್ಟೆಲ್​ನಿಂದ ಹಾರಿದ ವೈದ್ಯಕೀಯ ವಿದ್ಯಾರ್ಥಿಗಳು; ಹೊಸ ವಿಡಿಯೋ ಇಲ್ಲಿದೆ

ಸುಷ್ಮಾ ಚಕ್ರೆ
|

Updated on: Jun 17, 2025 | 4:28 PM

Share

ಅಹಮದಾಬಾದ್​ನಲ್ಲಿನ ಬಿಜೆ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳು ಉರಿಯುತ್ತಿರುವ ಹಾಸ್ಟೆಲ್‌ನಿಂದ ಕೆಳಗೆ ಹಾರುತ್ತಿರುವುದನ್ನು ಹೊಸ ವಿಡಿಯೋದಲ್ಲಿ ನೋಡಬಹುದು. ಜೂನ್ 12ರಂದು ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ಅಪಘಾತದ ಹೊಸ ವಿಡಿಯೋದಲ್ಲಿ ವಿಮಾನ ಡಿಕ್ಕಿ ಹೊಡೆದ ನಂತರ ಬಿಜೆ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಉರಿಯುತ್ತಿರುವ ಹಾಸ್ಟೆಲ್ ಕಟ್ಟಡದಿಂದ ಜಿಗಿಯುವುದನ್ನು ನೋಡಬಹುದು. ಅಪಘಾತದ ಸ್ಥಳದಿಂದ ದಟ್ಟವಾದ ಹೊಗೆ ಆವರಿಸುತ್ತಿದ್ದಂತೆ ವಿದ್ಯಾರ್ಥಿಗಳು ಹಗ್ಗಗಳನ್ನು ಬಳಸಿ ಪರಸ್ಪರ ತಪ್ಪಿಸಿಕೊಳ್ಳಲು ಸಹಾಯ ಮಾಡುತ್ತಿರುವುದನ್ನು ವೀಡಿಯೊದಲ್ಲಿ ಸೆರೆಹಿಡಿಯಲಾಗಿದೆ.

ಅಹಮದಾಬಾದ್, ಜೂನ್ 17: ಜೂನ್ 12ರಂದು ಅಹಮದಾಬಾದ್‌ನಲ್ಲಿ (Ahmedabad Plane Crash) ನಡೆದ ಏರ್ ಇಂಡಿಯಾ ವಿಮಾನದ ಅಪಘಾತದ (Air India Plane Crash) ಸ್ಥಳದಿಂದ ಆತಂಕಕಾರಿಯಾದ ಹೊಸ ವಿಡಿಯೋವೊಂದು ಹೊರಬಿದ್ದಿದೆ. ವಿಮಾನ ಡಿಕ್ಕಿ ಹೊಡೆದಿದ್ದರಿಂದ ಉಂಟಾದ ಬೆಂಕಿ ಮತ್ತು ಹೊಗೆಯಿಂದ ತಪ್ಪಿಸಿಕೊಳ್ಳಲು ಬಿಜೆ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಹಾಸ್ಟೆಲ್ ಕಟ್ಟಡದಿಂದ ಹೊರಗೆ ಹಾರುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು. 230 ಪ್ರಯಾಣಿಕರು ಮತ್ತು 12 ಸಿಬ್ಬಂದಿಯನ್ನು ಹೊತ್ತು ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ AI-171, ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಅಪಘಾತಕ್ಕೀಡಾಗಿತ್ತು. ವಿಮಾನವು ಟೇಕ್ ಆಫ್ ಆದ 50 ಸೆಕೆಂಡುಗಳಲ್ಲಿ ವಿಮಾನ ಮೇಘನಿನಗರ ಪ್ರದೇಶದ ಬಿ.ಜೆ ವೈದ್ಯಕೀಯ ಕಾಲೇಜು ಆವರಣಕ್ಕೆ ಡಿಕ್ಕಿ ಹೊಡೆದಿದ್ದು, ಭಾರಿ ಬೆಂಕಿಯ ಉಂಡೆ ಮತ್ತು ದಟ್ಟವಾದ ಹೊಗೆ ಹಾಸ್ಟೆಲ್ ಸಂಕೀರ್ಣವನ್ನು ಆವರಿಸಿತ್ತು.

ಇದರಿಂದ ಭಯಭೀತರಾದ ವಿದ್ಯಾರ್ಥಿಗಳು ಬೆಂಕಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ತೋರಿಸುತ್ತವೆ. ಹಾಸ್ಟೆಲ್ ಕಟ್ಟಡದ ಪಕ್ಕದಲ್ಲಿ ಕಪ್ಪು ಹೊಗೆಯ ದಟ್ಟವಾದ ಹೊಗೆ ಆವರಿಸಿಕೊಂಡಿದ್ದು, ವಿದ್ಯಾರ್ಥಿಗಳು ಕಿಟಕಿಗಳಿಂದ ಹೊರಗೆ ಹತ್ತುವುದನ್ನು, ಬಟ್ಟೆಯ ಹಗ್ಗಗಳನ್ನು ಬಳಸಿ ಕೆಳಕ್ಕೆ ಇಳಿಯುವುದನ್ನು ಕಾಣಬಹುದು. ಈ ಅಪಘಾತದಲ್ಲಿ 274 ಜನರು ಸಾವನ್ನಪ್ಪಿದ್ದಾರೆ ಈ ವಿಮಾನದಲ್ಲಿದ್ದ 241 ಜನರು ಮತ್ತು ಇತರೆ 33 ಜನರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ