ದೇವರು ಈಶ್ವರಪ್ಪ ಮತ್ತು ನನಗೆ ಒಳ್ಳೆಯ ಸಂತಾನವನ್ನು ದಯಪಾಲಿಸಿದ್ದಾನೆ: ಬಸನಗೌಡ ಪಾಟೀಲ್ ಯತ್ನಾಳ್
ಡಾ ಬಿಅರ್ ಅಂಬೇಡ್ಕರ್ ಅವರ ಪ್ರಯತ್ನಗಳ ಫಲವಾಗಿಯೇ ದಲಿತರಿಗೆ, ಮತ್ತು ಮಹಿಳೆಯರಿಗೆ ಮೀಸಲಾತಿ ಸಿಕ್ಕಿದೆ, ದಿನಕ್ಕೆ ಎಂಟು ತಾಸು ದುಡಿಯಬೇಕು ಎಂದು ಹೇಳಿದ್ದೇ ಅವರು, ಇವತ್ತು ಹಾಲು ಮತಕ್ಕೆ ಸೇರಿದ ಯುವಕನೊಬ್ಬ ಐಪಿಎಸ್ ಪಾಸು ಮಾಡಿದ್ದು ನೋಡಿ ಬಹಳ ಸಂತೋಷವಾಗುತ್ತದೆ, ಯುಪಿಎಸ್ಸಿ ಪರೀಕ್ಷೆ ಫಲಿತಾಂಶ ಬಂದ ಬಳಿಕ ಅವನ ಮುಖದಲ್ಲಿ ಅದೇನು ಕಳೆ ಎಂದು ಯತ್ನಾಳ್ ಹೇಳಿದರು.
ದಾವಣಗೆರೆ, ಮೇ 17: ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಕೆಎಸ್ ಈಶ್ವರಪ್ಪ (KS Eshwarappa) ಸಮಾನ ದುಃಖಿಗಳು, ಒಂದೇ ಬಳ್ಳಿಯ ಹೂಗಳು ಮತ್ತು ಒಂದೇ ದೋಣಿಯ ಪಯಣಿಗರು! ಯಾಕೆ ಅಂತ ಕನ್ನಡಿಗರಿಗೆ ಚೆನ್ನಾಗಿ ಗೊತ್ತು. ದಾವಣಗೆರೆಯಲ್ಲಿ ನಿನ್ನೆ ನಡೆದ ಸಮಾರಂಭವೊಂದರಲ್ಲಿ ಅವರು ಜೊತೆಗೂಡಿದ್ದರು. ತಮ್ಮ ಭಾಷಣದಲ್ಲಿ ಯತ್ನಾಳ್, ಈಶ್ವರಪ್ಪರನ್ನು ಹೊಗಳಿದರು ಮತ್ತು ತನಗೆ ಮತ್ತು ಈಶ್ವರಪ್ಪನವರಿಗೆ ದೇವರು ಒಳ್ಳೆಯ ಸಂತಾನ ದಯಪಾಲಿಸಿದ್ದಾನೆ ಅಂತ ಹೇಳಿ ಖುಷಿಪಟ್ಟರು. ಬೇರೆ ಕೆಲ ರಾಜಕಾರಣಿಗಳ ಮಕ್ಕಳು ಡ್ರಗ್ಸ್ ತೆಗೆದುಕೊಂಡು ರಾತ್ರಿ ಎಲ್ಲೋ ಬಿದ್ದುಕೊಂಡಿರುತ್ತಾರೆ ಎಂದು ಹೇಳಿದ ಯತ್ನಾಳ್ ದಾವಣಗೆರೆ ಜಿಲ್ಲೆಯಲ್ಲೂ ಒಂದಿಬ್ಬರು ರಾಜಕಾರಣಿಗಳ ಮಕ್ಕಳು ಆ ಕೆಟೆಗಿರಿಗೆ ಸೇರುತ್ತಾರೆ ಎಂದು ಹೇಳಿದರು.
ಇದನ್ನೂ ಓದಿ: ಸಹಾಯ ಕೇಳಿ ಯಾರಲ್ಲೂ ಹೋಗಿಲ್ಲ, ಪಕ್ಷದ ವರಿಷ್ಠರು ನನ್ನ ಜೊತೆ ಸಂಪರ್ಕದಲ್ಲಿದ್ದಾರೆ: ಬಸನಗೌಡ ಯತ್ನಾಳ್
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ

