ಹೋಲಿಕೆ ಮಾಡಿದ ವಿಚಾರದಲ್ಲಿ ಕ್ಷಮೆ ಕೇಳೋದು ಬಿಡೋದು ಯತೀಂದ್ರ ವಿವೇಚನೆಗೆ ಬಿಟ್ಟ ವಿಚಾರ: ಯದುವೀರ್
ನಾಲ್ವಡಿ ಕೃಷ್ಣರಾಜ್ ಒಡೆಯರ್ ಅವರೊಂದಿಗೆ ಸಿದ್ದರಾಮಯ್ಯರನ್ನು ಹೋಲಿಸಿದ್ದಕ್ಕೆ ಕ್ಷಮೆಯಾಚಿಸುವುದು ಬಿಡೋದು ಯತೀಂದ್ರ ಅವರ ವಿವೇಚನೆಗೆ ಬಿಟ್ಟ ವಿಚಾರ, ಅವರಿಗೆ ತಮ್ಮ ತಪ್ಪಿನ ಅರಿವಾಗಿದ್ದರೆ ಕ್ಷಮೆ ಕೇಳಲಿ, ಯಾವುದನ್ನೂ ತಾನು ಹೇಳಲಾಗಲ್ಲ, ಅವರೇ ನಿರ್ಧರಿಸಬೇಕು, ಅವರ ಮನಸ್ಸಿನಲ್ಲಿ ಏನಿದೆ ಅಂತ ತಾನು ಹೇಗೆ ಹೇಳಬಹುದು ಎಂದು ಯದುವೀರ್ ಕೇಳಿದರು.
ಮೈಸೂರು, ಜುಲೈ 28: ಮೈಸೂರು ಸಂಸದ ಮತ್ತು ಹಿಂದಿನ ಒಡೆಯರ್ ಅರಸೊತ್ತಿಗೆಯ ಪ್ರತಿನಿಧಿ ಯದುವೀರ್ ಕೃಷ್ಣದತ್ ಒಡೆಯರ್ ತಮ್ಮ ಘನತೆಗೆ ತಕ್ಕಂತೆ ಮಾತಾಡುತ್ತಾರೆ. ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ತಮ್ಮ ತಂದೆ, ನಾಲ್ವಡಿ ಕೃಷ್ಣರಾಜ್ ಒಡೆಯರ್ ಅವರಿಗಿಂತ ಹೆಚ್ಚು ಅಭಿವೃದ್ಧಿ ಕೆಲಸ ಮಾಡಿದ್ದಾರೆ ಅಂತ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಜನಸಾಮಾನ್ಯರು ಮತ್ತು ನಾಯಕರು ಈಗಾಗಲೇ ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ, ಜನರಿಗೆ ಇದು ಭಾವನಾತ್ಮಕ ವಿಷಯ, ತಾನೂ ಏನೂ ಹೇಳಲ್ಲ, ಅವರಿಗೆ ಜನ ನಾಯಕತ್ವ ನೀಡಿದ್ದಾರೆ, ಒಳ್ಳೆಯ ಕೆಲಸಗಳನ್ನು ಮಾಡಲಿ, ಹೋಲಿಕೆ ಮಾಡುತ್ತ ಕಾಲಹರಣ ಮಾಡೋದು ಬೇಡ ಎಂದರು. ಜನಪ್ರತಿನಿಧಿಯಾಗಿ ತಾನು ಮತ್ತು ಕೇಂದ್ರ ಸರ್ಕಾರ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವತ್ತ ಮಾತ್ರ ಗಮನ ಹರಿಸುತ್ತೇನೆ, ತನಗಿಂತ ಮೊದಲಿನ ಸಂಸದರಿಗಿಂತ ಜಾಸ್ತಿ ಕೆಲಸ ಮಾಡಿದೆ, ಕಡಿಮೆ ಮಾಡಿದೆ ಅಂತ ಹೇಳುತ್ತ ಕೂರಲ್ಲ ಎಂದು ಯದುವೀರ್ ಹೇಳಿದರು.
ಇದನ್ನೂ ಓದಿ: ಕರ್ನಾಟಕದ ಜನರೇ ಕಮಲ್ ಹಾಸನ್ಗೆ ಪಾಠ ಕಲಿಸಬೇಕು: ಯದುವೀರ್ ಒಡೆಯರ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

