ಮಸ್ಕಿ ಬಳಿ ತುಂಗಭದ್ರಾ ಎಡದಂಡೆ ಕಾಲುವೆ ಮೇಲ್ಭಾಗ ತೊಳೆಯಲು ನಿಲ್ಲಿಸಿದ್ದ ಕಾರು ಉರುಳಿ ನಾಲೆಗೆ, ಪ್ರಾಣಾಪಾಯವಿಲ್ಲ
ದಂಡೆಯ ಮೇಲೆ ನಿಂತು ನೋಡುವಾಗ ಕಾಲುವೆಗಳಲ್ಲಿ (ಡಿಸ್ಟ್ರಿಬ್ಯೂಟರಿ) ನೀರು ನಿಶ್ಚಲವಾಗಿ ಕಾಣುತ್ತದೆ, ಆದರೆ ಅಂಡರ್ ಕರೆಂಟ್ ಜೋರಾಗಿರುತ್ತದೆ. ಪರಿಣಿತ ಈಜುಗಾರರಷ್ಟೇ ಕಾಲುಗಳಲ್ಲಿ ಈಜಬಹುದು, ಮಿಕ್ಕವರು ಈಜಲಾರರು. ನೀರಿನ ರಭಸ ಅವರನ್ನು ತಳ್ಳಿಕೊಂಡು ಹೋಗುತ್ತದೆ. ಅದೃಷ್ಟವಶಾತ್ ಕಾರು ಕಾಲುವೆಗೆ ಜಾರಿದಾಗ ಅದರೊಳಗೆ ಯಾರು ಇರಲಿಲ್ಲ ಹಾಗಾಗಿ ಭಾರೀ ಅನಾಹುತವೊಂದು ತಪ್ಪಿದೆ.
ರಾಯಚೂರು, ಜುಲೈ 28: ನೀರಿನ ಬಳಿ ಅದರಲ್ಲೂ ಹೆಚ್ಚಾಗಿ ಎಡದಂಡೆ ಮತ್ತು ಬಲದಂಡೆ ಕಾಲುವೆಗಳಲ್ಲಿ (LBC and RBC ) ಸ್ನಾನಕ್ಕಿಳಿಯುವಾಗ, ಬಟ್ಟೆ ಅಥವಾ ವಾಹನಗಳನ್ನು ತೊಳೆಯುವಾಗ ಎಚ್ಚರಿಕೆಯಿಂದ ಇರಬೇಕು. ಜಿಲ್ಲೆಯ ಮಸ್ಕಿ ಪಟ್ಟಣದ ಬಳಿ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಯಾರೋ ಒಬ್ಬರು ತಮ್ಮ ಕಾರನ್ನು ತೊಳೆಯಲು ಹೋಗಿ ಅನಾಹುತ ಮಾಡಿಕೊಂಡಿದ್ದಾರೆ. ಕಾರು ಮುಳುಗುತ್ತಾ ಮುಂದೆ ಚಲಿಸುವುದನ್ನು ಮತ್ತು ಸೇತುವೆ ಕೆಳಭಾಗದಲ್ಲಿರುವ ತಡೆಗೋಡೆ ಬಳಿ ಸಿಲುಕಿಕೊಳ್ಳುವುದನ್ನು ದೃಶ್ಯಗಳಲ್ಲಿ ನೋಡಬಹುದು. ಒಂದಿಬ್ಬರು ಸ್ಥಳೀಯರು ಈಜುತ್ತಾ ಕಾರಿನ ಬಳಿ ಹೋಗುತ್ತಾರೆ ಅವರಿಂದ ಏನೂ ಮಾಡಲು ಸಾಧ್ಯವಾಗಲ್ಲ. ಜೆಸಿಬಿಯೊಂದರ ಮೂಲಕ ಕಾರನ್ನು ಮೇಲೆತ್ತುವ ಪ್ರಯತ್ನ ಮಾಡಲಾಗುತ್ತಿದೆ. ಕಾರನ್ನು ಗೇರಲ್ಲಿಡದೆ ಇಲ್ಲವೇ ಹ್ಯಾಂಡ್ಬ್ರೇಕ್ ಹಾಕಿಡದ ಕಾರಣ ಕಾರು ಜಾರಿ ಕಾಲುವೆಗೆ ಉರುಳಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಈಜಲು ತುಂಗಭದ್ರಾ ಎಡದಂಡೆ ಕಾಲುವೆಗೆ ಇಳಿದಿದ್ದ ಯುವಕರು ಮತ್ತೆ ಬರಲೇ ಇಲ್ಲ
ವಿಡಿಯೋ ಸುದ್ದಿಗಳಿಗಾಗೊ ಕ್ಲಿಕ್ ಮಾಡಿ

