ಟಿಬಿ ಡ್ಯಾಂನಿಂದ ತುಂಗಭದ್ರಾ ನದಿಗೆ ನೀರು ಬಿಡುಗಡೆ, ಮುಳುಗಡೆ ಭೀತಿಯಲ್ಲಿ ಕಂಪ್ಲಿ-ಗಂಗಾವತಿ ಸೇತುವೆ
ತುಂಗಭದ್ರಾ ನದಿ ತುಂಬಿ ಹರಿಯುತ್ತಿರುವುದರಿಂದ ಗಂಗಾವತಿಯ ಆನೆಗೊಂದಿಯಲ್ಲಿರುವ ಶ್ರೀಕೃಷ್ಣದೇವರಾಯ ಸಮಾಧಿ ಮುಳುಗಡೆಯಾಗಿದೆ. ಟಿಬಿ ಡ್ಯಾಂ ಗೇಟ್ ನಂಬರ್ 26ರಿಂದ ನದಿಗೆ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ನಮ್ಮ ವರದಿಗಾರ ಮಾಹಿತಿ ನೀಡಿದ್ದಾರೆ. ಉತ್ತರ ಮತ್ತು ಕಿತ್ತೂರು ಕರ್ನಾಟಕ ಹಲವಾರು ಭಾಗಗಳಲ್ಲಿ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ನದಿ ಮತ್ತು ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ.
ಕೊಪ್ಪಳ, ಜುಲೈ 28: ಕೊಪ್ಪಳ ಜಿಲ್ಲೆ ಮುನಿರಾಬಾದ್ ಬಳಿ ಕಟ್ಟಿರುವ ತುಂಗಭದ್ರಾ ಜಲಾಶಯದಲ್ಲಿ ಒಳಹರಿವು ಹೆಚ್ಚುತ್ತಲೇ ಇರೋದ್ರಿಂದ ನೀರನ್ನು ನದಿಗೆ ಬಿಡುಗಡೆ ಮಾಡುವುದು ಅನಿವಾರ್ಯವಾಗುತ್ತಿದೆ. ನಾವು ಈಗಾಗಲೇ ವರದಿ ಮಾಡಿರುವ ಹಾಗೆ ಟಿಬಿ ಡ್ಯಾಂ ಕೆಲ ಕ್ರಸ್ಟ್ ಗೇಟ್ಗಳು (crest gate) ಅದರಲ್ಲೂ ವಿಶೇಷವಾಗಿ ಗೇಟ್ ನಂಬರ್ 19 ನಾಜೂಕು ಸ್ಥಿತಿಯಲ್ಲಿರುವುದರಿಂದ 130 ಟಿಎಂಸಿ ಸಾಮರ್ಥ್ಯ ಇರೋ ಜಲಾಶಯದಲ್ಲಿ ಈಗ ಕೇವಲ 90ಟಿಎಂಸಿ ನೀರನ್ನು ಮಾತ್ರ ಶೇಖರಿಸಬಹುದು. ಹಾಗಾಗಿ ನೀರನ್ನು ನದಿಗೆ ಹರಿಬಿಡುವ ಕೆಲಸ ಮಾಡಲೇಬೇಕಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ. ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರುವುದರಿಂದ ಕಂಪ್ಲಿ-ಗಂಗಾವತಿ ಸಂಪರ್ಕ ಸೇತುವೆ ಮುಳುಗಡೆ ಆಗುವ ಸ್ಥಿತಿಯಲ್ಲಿದ್ದು ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ: ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಇನ್ನೂ ರಿಪೇರಿಯಾಗಿಲ್ಲ, ಸರ್ಕಾರದ ವಿರುದ್ಧ ಕಿಡಿಕಾರಿದ ಬಿಜೆಪಿ ನಾಯಕರು
ವಿಡಿಯೋ ಸುದ್ದಿಗಳಿಗಾಗೊ ಕ್ಲಿಕ್ ಮಾಡಿ

