ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಇನ್ನೂ ರಿಪೇರಿಯಾಗಿಲ್ಲ, ಸರ್ಕಾರದ ವಿರುದ್ಧ ಕಿಡಿಕಾರಿದ ಬಿಜೆಪಿ ನಾಯಕರು
ಬಿಜೆಪಿ ನಿಯೋಗವೊಂದು ಇಂದು ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ನಮ್ಮ ವರದಿಗಾರನೊಂದಿಗೆ ಮಾತಾಡಿರುವ ಕೆಲ ನಾಯಕರು ಸರ್ಕಾರದ ಬೇಜವಾಬ್ದಾರಿತನವನ್ನು ಖಂಡಿಸಿದರು. ಜಲಾಶಯದ ಸಾಮರ್ಥ್ಯ 130 ಟಿಎಂಸಿ ಇದ್ದರೂ ಹೂಳನ್ನು ಎತ್ತದ ಕಾರಣ ಸಾಮರ್ಥ್ಯ 100 ಟಿಎಂಸಿ ಆಗಿದೆ. ಗೇಟನ್ನು ದುರಸ್ತಿ ಮಾಡದೆಹೋದರೆ, ಜಲಾಶಯದಲ್ಲಿ 80 ಟಿಎಂಸಿಯಷ್ಟು ನೀರು ಸಂಗ್ರಹಗೊಂಡರೂ ಉಳಿದ ಕ್ರಸ್ಟ್ ಗೇಟುಗಳಿಗೆ ಅಪಾಯವಿದೆ ಎಂದು ತಜ್ಞರು ಹೇಳಿದ್ದಾರೆ.
ಕೊಪ್ಪಳ, ಮೇ 26: ಜಿಲ್ಲೆಯ ಮುನಿರಾಬಾದ್ ಬಳಿಯಿರುವ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಕಳೆದ ವರ್ಷ ಆಗಸ್ಟ್ ನಲ್ಲಿ ಮುರಿದು ರಾಷ್ಟ್ರಮಟ್ಟದ ಸುದ್ದಿಯಾಗಿತ್ತು. ಮುಖ್ಯಮಂತ್ರಿ, ಡಿಸಿಎಂ ಆದಿಯಾಗಿ ಮಂತ್ರಿಗಳ ಗುಂಪು ಕೊಪ್ಪಳದಲ್ಲಿ ಶಿಬಿರ ಹೂಡಿ ದುರಸ್ತಿಗೆ ಮುಂದಾಗಿದ್ದರು ಮತ್ತು ಇಂಜಿನೀಯರ್ಗಳ ಮುಖಾಂತರ ಗೇಟನ್ನು ರಿಪ್ಲೇಸ್ ಕೂಡ ಮಾಡಿಸಿದ್ದರು. ಆದರೆ, ಸ್ಥಳೀಯ ಬಿಜೆಪಿ ನಾಯಕರು (BJP leaders) ಮತ್ತು ನಮ್ಮ ಕೊಪ್ಪಳ ವರದಿಗಾರ ಹೇಳುವ ಪ್ರಕಾರ ಕ್ರಸ್ಟ್ ಗೇಟ್ ಇನ್ನೂ ರಿಪೇರಿಯಾಗಿಲ್ಲ. ಆಗ ನಡೆಸಿದ ದುರಸ್ತಿ ಕಾರ್ಯ ಸರಿಯಾಗಿ ನಡೆದಿಲ್ಲ, ಅಥವಾ ಕೆಲಸವನ್ನು ತರಾತುರಿಯಲ್ಲಿ ಮುಗಿಸಿದ ಕಾರಣ, ಜಲಾಶಯ ಮತ್ತು ಅದನ್ನು ನಂಬಿಕೊಂಡಿರುವ ರೈತರು ಅಪಾಯದಲ್ಲಿರುವರೆಂದು ವರದಿಗಾರ ಹೇಳುತ್ತಾರೆ.
ಇದನ್ನೂ ಓದಿ: ತುಂಗಭದ್ರಾ ಕಾಪಾಡಿದ ಕನ್ನಯ್ಯ ನಾಯ್ಡುಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಋಣ ತೀರಿಸಿದ ಸರ್ಕಾರ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

