ತುಂಗಭದ್ರಾ ಕಾಪಾಡಿದ ಕನ್ನಯ್ಯ ನಾಯ್ಡುಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಋಣ ತೀರಿಸಿದ ಸರ್ಕಾರ

ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್​ ಗೇಟ್​​ನ ಚೈನ್​ ತುಂಡಾಗಿ ಸಾಕಷ್ಟು ನೀರು ಪೋಲಾಗುತ್ತಿದ್ದರಿಂದ ರೈತರನ್ನ ಆತಂಕಕ್ಕೆ ಗುರಿ ಮಾಡಿತ್ತು. ಬಳಿಕ ಕ್ರಸ್ಟ್ ಗೇಟ್ ತಜ್ಞ ಕನ್ಹಯ್ಯ ನಾಯ್ಡು ಅವರ ತಂಡ ಆಗಮಿಸಿ ಕ್ರಸ್ಟ್ ಗೇಟ್ ಜಾಗಕ್ಕೆ ಸ್ಟಾಪ್ ಲಾಗ್ ಗೇಟ್ ಅಳವಡಿಸಿದೆ. ಈ ಮೂಲಕ ತುಂಗಾಭದ್ರಾ ಜಲಾಶಯವನ್ನು ಕಾಪಾಡುವುದರ ಜೊತೆಗೆ ಈ ಡ್ಯಾಂನ ನೀರನ್ನೇ ನಂಬಿದ್ದ ರೈತರ ಬಾಳಿಗೆ ಬೆಳಕಾಗಿದ್ದಾರೆ. ಇದೀಗ ಇವರ ಕಾರ್ಯಕ್ಕೆ ಸಿದ್ದರಾಮಯ್ಯ ಸರ್ಕಾರ 2024ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ತನ್ನ ಋಣ ತೀರಿಸಿದೆ.

ತುಂಗಭದ್ರಾ ಕಾಪಾಡಿದ ಕನ್ನಯ್ಯ ನಾಯ್ಡುಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಋಣ ತೀರಿಸಿದ ಸರ್ಕಾರ
ಕನ್ನಯ್ಯ ನಾಯ್ಡುಗೆ ರಾಜ್ಯೋತ್ಸವ ಪ್ರಶಸ್ತಿ
Follow us
| Updated By: ರಮೇಶ್ ಬಿ. ಜವಳಗೇರಾ

Updated on: Oct 30, 2024 | 6:41 PM

ಕೊಪ್ಪಳ/ಬೆಂಗಳೂರು, (ಅಕ್ಟೋಬರ್ 30): 2024ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಇಂದು (ಅಕ್ಟೋಬರ್ 30) ಸುದ್ದಿಗೋಷ್ಠಿ ನಡೆಸಿ ಪ್ರಶಸ್ತಿಗೆ ಆಯ್ಕೆಯಾದ ಒಟ್ಟು 69 ಜನರ ಹೆಸರನ್ನು ಪ್ರಕಟಿಸಿದರು. ಇದರಲ್ಲಿ ಮುಖ್ಯವಾಗಿ ತುಂಗಭದ್ರಾ ಜಲಾಶಯವನ್ನು ಕಾಪಾಡಿದ ಕನ್ನಯ್ಯ ನಾಯ್ಡುಗೆ ಹೊರದೇಶ, ಹೊರನಾಡು ವಿಭಾಗದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಮೂಲಕ ಕನ್ನಯ್ಯ ನಾಯ್ಡು ಅವರ ಕೆಲಸಕ್ಕೆ ರಾಜ್ಯ ಸರ್ಕಾರ ಋಣ ತೀರಿಸಿದೆ.

ಕನ್ನಯ್ಯ ನಾಯ್ಡು ಅವರು ಕರ್ನಾಟಕದಲ್ಲದವರಾಗಿದ್ದರೂ ಸಹ ಹೊರದೇಶ, ಹೊರನಾಡು ವಿಭಾಗದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.  ಆಗಸ್ಟ್‌ 10ರ ರಾತ್ರಿ ತುಂಗಭದ್ರಾ ಜಲಾಶಯದ ಗೇಟ್‌ ಕೊಚ್ಚಿ ಹೋಗಿತ್ತು. ಗೇಟ್‌ ಅಳವಡಿಕೆ ಕಾರ್ಯಕ್ಕೆ ನಿರ್ಣಾಯಕ ನಿವೃತ್ತ ಇಂಜಿನಿಯರ್ ಮತ್ತು ಡ್ಯಾಮ್ ಗೇಟ್ ನಿರ್ಮಾಣ ಮತ್ತು ಸುರಕ್ಷತಾ ತಜ್ಞ ಕನ್ನಯ್ಯ ನಾಯ್ಡು ಅವರನ್ನು ಭೇಟಿ ಮಾಡಲಾಯಿತು. ನಾಯ್ಡು ಅವರ ತಂಡ ಕೂಡಲೇ ಕಾರ್ಯಪ್ರವೃತ್ತರಾಗಿ ಸ್ಟಾಪ್‌ ಲಾಗ್‌ ಅಳವಡಿಕೆ ಕಾರ್ಯ ಕ್ಷಿಪ್ರವಾಗಿ ಮುಗಿಸಿತ್ತು. ಕೊಚ್ಚಿಹೋಗಿದ್ದ ಸ್ಪಿಲ್‌ವೇ ಗೇಟ್‌ ನಂ.19ರ ಬದಲಿಗೆ ಐದು ಸ್ಟಾಪ್‌ಲಾಗ್‌ಗಳನ್ನು ಯಶಸ್ವಿಯಾಗಿ ಅಳವಡಿಕೆ ಮಾಡಲಾಯ್ತು. ಈ ಮೂಲಕ ಕರುನಾಡಿನ ಜನತೆ ಡ್ಯಾಂ ತಜ್ಞ ಕನ್ನಯ್ಯ ಅವರನ್ನು ಕಲ್ಯಾಣ ಕರ್ನಾಟಕದ ಭಗೀರಥ ಎಂದು ಕರೆದಿದ್ದಾರೆ.

ಇದನ್ನೂ ಓದಿ: Rajyotsava Award 2024: ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ: 69 ಜನರ ಪಟ್ಟಿ ಇಲ್ಲಿದೆ

ಕನ್ನಯ್ಯ ನಾಯ್ಡು ಸಂಕ್ಷಿಪ್ತ ಪರಿಚಯ

ಡ್ಯಾಂ ತಜ್ಞ ಕನ್ನಯ್ಯ ನಾಯ್ಡು ಅವರ ಪೂರ್ಣ ಹೆಸರು ನಾಗಿಂಡಯ್ಯ ಕನ್ನಯ್ಯ ನಾಯ್ಡು. ಇವರು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಗುಡಿಪಾಲ ಮಂಡಲ್​ನ ದಾಸನಪಲ್ಲಿ ಗ್ರಾಮದಲ್ಲಿ 1947 ಆಗಸ್ಟ್​ 27 ರಂದು ಜನಿಸಿದ್ದಾರೆ. ಇವರು ಕುಟುಂಬ ಮೂಲತಃ ಕೃಷಿ ಕುಟುಂಬವಾಗಿತ್ತು. ಬಡತನದಲ್ಲೇ ಓದು ಮುಂದುವರೆಸಿದ ಇವರು ಪ್ರಾಥಮಿಕ, ಪ್ರೌಢ ಶಾಲಾ ವಿದ್ಯಾಭ್ಯಾಸ ಮುಗಿಸಿದರು. ಬಳಿಕ ಕಾಲೇಜಿಗೆ ಸೇರಿಕೊಂಡರು. ತಿರುಪತಿಯಲ್ಲಿನ ವೆಂಕಟೇಶ್ವರ ಇಂಜಿನಿಯರಿಂಗ್​ ಕಾಲೇಜಿನಲ್ಲಿ ತಮ್ಮ ಮೆಕ್ಯಾನಿಕಲ್​ ಇಂಜಿನಿಯರಿಂಗ್​ ಅನ್ನು ಕಂಪ್ಲೀಟ್ ಮಾಡಿದರು. ಆಗಿನ ಕಾಲದಲ್ಲೇ ಇಂಜಿನಿಯರಿಂಗ್ ಮುಗಿಸಿದ್ದರೂ ಸಹ ಇವರಿಗೆ ಉದ್ಯೋಗ ಸಿಗಲಿಲ್ಲ. ಕಾರಣ ಇವರು ಬೆಲೆಟೇರಿಯಲ್​ ಪ್ರದೇಶದಲ್ಲಿ ಇದ್ದಿದ್ದರಿಂದ ಇವರಿಗೆ ಆಗಿನ ಸರ್ಕಾರಗಳು ಕೆಲಸ ಕೊಡಲಿಲ್ಲ.

ದಿವಾನ್ ಸಿ. ರಂಗಚಾರಿ ಅವರು ತಿರುವಂಗಳರ್ ಜೊತೆ ಕೆಲಸ ಮಾಡಿದ್ದಾರೆ. ಈಗಿರುವ ವಿಶ್ವೇಶ್ವರಯ್ಯ ಮ್ಯೂಸಿಯಂನಲ್ಲಿ ಸಿ. ರಂಗಚಾರಿ ಹೆಸರು ಕೂಡ ಇದೆ. ಇವರ ಬಳಿ 5 ವರ್ಷ ತರಬೇತಿ ಪಡೆದಿದ್ದರು. ಈ ತರಬೇತಿ ಪಡೆಯುವ ವೇಳೆಯೇ ನೀವು ರೈತರಿಗೆ ಸಹಾಯ ಮಾಡಬೇಕೆಂದರೆ ತುಂಗಭದ್ರಾ ಸ್ಟೇಟ್ ಫಾರೆಸ್ಟ್​ನಲ್ಲಿ ಕೆಲಸ ಪಡೆಯಬೇಕು. ರಾಷ್ಟ್ರಾದ್ಯಾಂತ ನೀವು ಕೆಲಸ ಮಾಡಬಹುದು ಎಂದು ಸಿ. ರಂಗಚಾರಿ ಹೇಳಿದ್ದರು. ಅದರಂತೆ ಡ್ಯಾಂ ತಜ್ಞ ಕನ್ನಯ್ಯ ನಾಯ್ಡುಗೆ ತುಂಗಭದ್ರಾ ಸ್ಟೇಟ್ ಫಾರೆಸ್ಟ್​ನಿಂದ ಇಂಟರ್​​ವ್ಯೂವ್​ಗೆ ಕರೆ ಬಂತು. ಆ ಸಂದರ್ಶನದಲ್ಲಿ ಕನ್ನಯ್ಯ ನಾಯ್ಡು ಅವರು ಆಯ್ಕೆಯಾಗಿದ್ದರು.

ಮುಂದೆ 1976 ಜನವರಿ 16ರಂದು ತುಂಗಭದ್ರಾ ಪ್ರಾಜೆಕ್ಟ್​ಗೆ ಕೆಲಸ ಮಾಡಲು ಬಂದರು. ಅಂದಿನಿಂದ ಇಂಜಿನಿಯರಿಂಗ್ ಕೆಲಸ ಮಾಡಿ 2002 ಮಾರ್ಚ್​ವರೆಗೆ ವಿಆರ್​ಎಸ್​ (ಸ್ವಯಂ ನಿವೃತ್ತಿ) ತೆಗೆದುಕೊಂಡರು. 2005ರಲ್ಲಿ ಹೊಸಪೇಟೆಯಲ್ಲಿ ಇದ್ದರು. ಡ್ಯಾಂಗೆ ಬೇಕಾಗಿದ್ದ ಕ್ರಸ್ಟ್​ ಗೇಟ್​, ಪವರ್​ ಜನರೇಷನ್ ಗೇಟ್​, ರೈತರಿಗೆ ಬೇಕಾಗಿದ್ದ ರೆಗುಲೇಟರ್ಸ್​ ಎಲ್ಲವನ್ನು ಕನ್ನಯ್ಯ ಅವರೇ ಮಾಡಿದರು. ಡ್ಯಾಂ ತಜ್ಞ ಕನ್ನಯ್ಯ ಅವರು ಆಂಧ್ರಪ್ರದೇಶದಲ್ಲಿ ಹುಟ್ಟಿದರೂ ತಮಿಳುನಾಡಿನಲ್ಲಿ ಕೆಲ ವರ್ಷ ಕಾರ್ಯನಿರ್ವಹಿಸಿದ್ದಾರೆ. ಆದರೆ ಅವರ ಜೀವನದ ಅತಿ ಹೆಚ್ಚು ಕಾಲ ಕರ್ನಾಟಕದಲ್ಲಿ ಕೆಲಸ ಮಾಡಿದ್ದು ಅವರಿಗೆ ಈಗಲೂ ಹೆಮ್ಮೆ ಇದೆ ಎಂದು ಹೇಳಿಕೊಳ್ಳುತ್ತಾರೆ.

ಕರ್ನಾಟಕ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಮಹಾರಾಷ್ಟ್ರದ ಸಮುದ್ರದಲ್ಲಿ ಮೀನುಗಾರರನ್ನು ಕೊಂದು, ಬೋಟ್​ಗೆ ಬೆಂಕಿ
ಮಹಾರಾಷ್ಟ್ರದ ಸಮುದ್ರದಲ್ಲಿ ಮೀನುಗಾರರನ್ನು ಕೊಂದು, ಬೋಟ್​ಗೆ ಬೆಂಕಿ
ದರ್ಶನ್ ಜಾಮೀನು ಪಡೆದ ಬಳಿಕ ಬಳ್ಳಾರಿ ದುರ್ಗಾದೇವಿಗೆ ವಿಜಯಲಕ್ಷ್ಮಿ ಪೂಜೆ
ದರ್ಶನ್ ಜಾಮೀನು ಪಡೆದ ಬಳಿಕ ಬಳ್ಳಾರಿ ದುರ್ಗಾದೇವಿಗೆ ವಿಜಯಲಕ್ಷ್ಮಿ ಪೂಜೆ
ಬೆಂಗಳೂರು ನಗರದ ಹಲವೆಡೆ ಮತ್ತೆ ಧಾರಾಕಾರ ಮಳೆ, ಟ್ರಾಫಿಕ್​ ಜಾಮ್​
ಬೆಂಗಳೂರು ನಗರದ ಹಲವೆಡೆ ಮತ್ತೆ ಧಾರಾಕಾರ ಮಳೆ, ಟ್ರಾಫಿಕ್​ ಜಾಮ್​
ಜೈಲು ರಸ್ತೆಯನ್ನು ಮುಂಜಾಗ್ರತಾ ಕ್ರಮವಾಗಿ ಬ್ಯಾರಿಕೇಡಿಂಗ್ ಮಾಡಿದ ಪೊಲೀಸ್
ಜೈಲು ರಸ್ತೆಯನ್ನು ಮುಂಜಾಗ್ರತಾ ಕ್ರಮವಾಗಿ ಬ್ಯಾರಿಕೇಡಿಂಗ್ ಮಾಡಿದ ಪೊಲೀಸ್
ದರ್ಶನ್ ಮಿತ್ರನಾದರೂ ಜಾಮೀನು ಸಿಕ್ಕಿರುವುದಕ್ಕೆ ಪ್ರತಿಕ್ರಿಯಿಸಲೊಲ್ಲದ ಜಮೀರ್
ದರ್ಶನ್ ಮಿತ್ರನಾದರೂ ಜಾಮೀನು ಸಿಕ್ಕಿರುವುದಕ್ಕೆ ಪ್ರತಿಕ್ರಿಯಿಸಲೊಲ್ಲದ ಜಮೀರ್
ಚಾಮರಾಜನಗರ: ಸಾಲ ತೀರಿಸದ ರೈತರ ವಿರುದ್ಧ ದೂರು ದಾಖಲಿಸಲು ಮುಂದಾದ ಸರ್ಕಾರ
ಚಾಮರಾಜನಗರ: ಸಾಲ ತೀರಿಸದ ರೈತರ ವಿರುದ್ಧ ದೂರು ದಾಖಲಿಸಲು ಮುಂದಾದ ಸರ್ಕಾರ
ನನ್ನ ಕೆಲಸಗಳ ಆಧಾರದಲ್ಲಿ ಚನ್ನಪಟ್ಟಣ ಜನರ ಮತ ಯಾಚಿಸುವೆ: ಕುಮಾರಸ್ವಾಮಿ
ನನ್ನ ಕೆಲಸಗಳ ಆಧಾರದಲ್ಲಿ ಚನ್ನಪಟ್ಟಣ ಜನರ ಮತ ಯಾಚಿಸುವೆ: ಕುಮಾರಸ್ವಾಮಿ
ದರ್ಶನ್​ಗೆ ಜಾಮೀನು ನೀಡಿರುವುದನ್ನು ಸರ್ಕಾರ ಸ್ವಾಗತಿಸುತ್ತದೆ: ಶಿವಕುಮಾರ್
ದರ್ಶನ್​ಗೆ ಜಾಮೀನು ನೀಡಿರುವುದನ್ನು ಸರ್ಕಾರ ಸ್ವಾಗತಿಸುತ್ತದೆ: ಶಿವಕುಮಾರ್
‘ದರ್ಶನ್​​ಗೆ ಬೆನ್ನು ನೋವು ಬಂದಿದ್ದು ಇಂದು ನಿನ್ನೆಯಲ್ಲ’; ವಕೀಲರ ಸ್ಪಷ್ಟನೆ
‘ದರ್ಶನ್​​ಗೆ ಬೆನ್ನು ನೋವು ಬಂದಿದ್ದು ಇಂದು ನಿನ್ನೆಯಲ್ಲ’; ವಕೀಲರ ಸ್ಪಷ್ಟನೆ
‘ಟಾಕ್ಸಿಕ್’ ಸೆಟ್​ ಹಾಕಿರುವ ಸ್ಥಳ ಈಗ ಹೇಗಿದೆ? ವಿವರ ನೋಡಿ ವಿಡಿಯೋದೊಂದಿಗೆ
‘ಟಾಕ್ಸಿಕ್’ ಸೆಟ್​ ಹಾಕಿರುವ ಸ್ಥಳ ಈಗ ಹೇಗಿದೆ? ವಿವರ ನೋಡಿ ವಿಡಿಯೋದೊಂದಿಗೆ