ಕರ್ನಾಟಕ ಸುವರ್ಣ ಸಂಭ್ರಮ 50: 100 ಜನ ಸಾಧಕರಿಗೆ ವಿಶೇಷ ಪ್ರಶಸ್ತಿ
ರಾಜ್ಯ ಸರ್ಕಾರ ಈ ವರ್ಷ ಕರ್ನಾಟಕ ನಾಮಕರಣ ಸುವರ್ಣ ಮಹೋತ್ಸವ ಆಚರಿಸುತ್ತಿದೆ. ಹೀಗಾಗಿ ಸರ್ಕಾರ 100 ಜನ ಸಾಧಕರಿಗೆ ವಿಶೇಷ ಪ್ರಶಸ್ತಿ ನೀಡಲು ನಿರ್ಧರಿಸಿದೆ. 50 ಜನ ಮಹಿಳಾ ಸಾಧಕಿಯರು ಮತ್ತು 50 ಜನ ಪುರುಷ ಸಾಧಕರು ವಿಶೇಷ ಪ್ರಶಸ್ತಿಗೆ ಭಾಜನರಾಗಲಿದ್ದಾರೆ.
ಬೆಂಗಳೂರು, ಅಕ್ಟೋಬರ್ 30: ಕರ್ನಾಟಕ ಸುವರ್ಣ ಸಂಭ್ರಮ -50ರ (Karnataka Suvarna Sambrama-50) ಸಂಭ್ರಮದಲ್ಲಿ 100 ಜನ ಸಾಧರಿಗೆ ಸುವರ್ಣ ಸಂಭ್ರಮ (Suvarna Sambrama) ಎಂಬ ವಿಶೇಷ ಪ್ರಶಸ್ತಿ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. 50 ಸಾಧಕ ಪುರುಷರಿಗೆ ಮತ್ತು 50 ಸಾಧಕ ಮಹಿಳೆಯರಿಗೆ ಸುವರ್ಣ ಸಂಭ್ರಮ ಪ್ರಶಸ್ತಿ ನೀಡಲಾಗುತ್ತದೆ.
ಈ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಮಾತನಾಡಿ, ಕರ್ನಾಟಕ ಎಂದು ನಾಮಕರಣ ಮಾಡಿ 50 ವರ್ಷ ಆಗಿರುವುದರಿಂದ ವಿಶೇಷ ವರ್ಷ ಎಂದು ಪರಿಗಣಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸುವರ್ಣ ಸಂಭ್ರಮ-50ರ ಸಂಭ್ರಮದಲ್ಲಿ ಸುವರ್ಣ ಮಹೋತ್ಸವ ಎಂಬ ವಿಶೇಷ ಪ್ರಶಸ್ತಿಯನ್ನು ನೀಡುತ್ತಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ: ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ: 69 ಜನರ ಪಟ್ಟಿ ಇಲ್ಲಿದೆ
ಅಭಿನಂದನೆ ತಿಳಿಸಿದ ಸಿದ್ದರಾಮಯ್ಯ
ಕರ್ನಾಟಕ ಸಂಭ್ರಮ -೫೦ರ ಸವಿನೆನಪಿನಲ್ಲಿ ಕೊಡಮಾಡುತ್ತಿರುವ 2024ನೇ ಸಾಲಿನ ಸುವರ್ಣ ಮಹೋತ್ಸವ ಪ್ರಶಸ್ತಿಗೆ ಭಾಜನರಾಗಿರುವ ಎಲ್ಲಾ ಸಾಧಕರಿಗೆ ಅಭಿನಂದನೆಗಳು.
ಪ್ರಶಸ್ತಿ ವಿಜೇತ ಗಣ್ಯರ ಸೇವೆ – ಸಾಧನೆ ಸಮಾಜಕ್ಕೆ ಸ್ಪೂರ್ತಿಯಾಗಲಿ ಎಂದು ಆಶಿಸುತ್ತೇನೆ.#ಸುವರ್ಣಸಂಭ್ರಮ pic.twitter.com/yt5WAhm7wh
— Siddaramaiah (@siddaramaiah) October 30, 2024
ಸುವರ್ಣ ಸಂಭ್ರಮ ಪ್ರಶಸ್ತಿಗೆ ಭಾಜನರಾಗಿರುವ ಸಾಧಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿನಂದನೆ ತಿಳಿಸಿದ್ದಾರೆ. “ಕರ್ನಾಟಕ ಸಂಭ್ರಮ -೫೦ರ ಸವಿನೆನಪಿನಲ್ಲಿ ಕೊಡಮಾಡುತ್ತಿರುವ 2024ನೇ ಸಾಲಿನ ಸುವರ್ಣ ಮಹೋತ್ಸವ ಪ್ರಶಸ್ತಿಗೆ ಭಾಜನರಾಗಿರುವ ಎಲ್ಲಾ ಸಾಧಕರಿಗೆ ಅಭಿನಂದನೆಗಳು. ಪ್ರಶಸ್ತಿ ವಿಜೇತ ಗಣ್ಯರ ಸೇವೆ – ಸಾಧನೆ ಸಮಾಜಕ್ಕೆ ಸ್ಪೂರ್ತಿಯಾಗಲಿ ಎಂದು ಆಶಿಸುತ್ತೇನೆ.” ಎಂದು ಟ್ವೀಟ್ ಮಾಡಿದ್ದಾರೆ.
ಕರ್ನಾಟಕ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:51 pm, Wed, 30 October 24