AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐದು ತಿಂಗಳು ಸೆರೆವಾಸದ ಬಳಿಕ ಕುಂಟುತ್ತಾ ಬಳ್ಳಾರಿ ಜೈಲಿನಿಂದ ಹೊರಬಿದ್ದ ದರ್ಶನ್

ಐದು ತಿಂಗಳು ಸೆರೆವಾಸದ ಬಳಿಕ ಕುಂಟುತ್ತಾ ಬಳ್ಳಾರಿ ಜೈಲಿನಿಂದ ಹೊರಬಿದ್ದ ದರ್ಶನ್

ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on: Oct 30, 2024 | 7:16 PM

Share

ಬೆನ್ನುನೋವು ನಿವಾರಣೆಗೆ ದರ್ಶನ್ ಆಪರೇಶನ್ ಮಾಡಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಇದೆ. ಬೆನ್ನುನೋವಿನ ಕಾರಣಕ್ಕಾಗೇ ಅವರಿಗೆ ಬಳ್ಳಾರಿ ಜೈಲಿನಲ್ಲಿ ವೆಸ್ಟರ್ನ್ ಮತ್ತು ವಿಶಿಷ್ಟ ವಿನ್ಯಾಸದ ಕಮೋಡನ್ನು ಒದಗಿಸಲಾಗಿತ್ತು. ತಮ್ಮಿಷ್ಟದ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಅವಕಾಶವನ್ನು ನ್ಯಾಯಾಲಯವು ದರ್ಶನ್​ಗೆ ಕಲ್ಪಿಸಿದೆ.

ಬಳ್ಳಾರಿ: ಸುಮಾರು ಐದು ತಿಂಗಳು ಕಾಲ ಜೈಲಲ್ಲಿದ್ದ ನಟ ದರ್ಶನ್ ಇಂದು ರಾಜ್ಯ ಉಚ್ಛ ನ್ಯಾಯಾಲಯದಿಂದ ಜಾಮೀನು ಪಡೆದು ಬಳ್ಳಾರಿ ಕೇಂದ್ರೀಯ ಕಾರಾಗೃಹದಿಂದ ಹೊರಬಿದ್ದರು. ಅವರನ್ನಿಟ್ಟಿದ್ದ ಸೆಲ್​ನಿಂದ ನಟ ಕುಂಟುತ್ತಾ ನಡೆದು ಬರುತ್ತಿರುವ ಎಕ್ಸ್​ಕ್ಲ್ಯೂಸಿವ್ ಫುಟೇಜ್ ನಮಗೆ ಸಿಕ್ಕಿದೆ. ಅವರು ಎಡಗಾಲನ್ನು ಎತ್ತಿ ಹಾಕುತ್ತಿದ್ದಾರೆ. ಬೆನ್ನುನೋವು ಹೆಚ್ಚಾಗಿರೋದು ನಡಿಗೆಯಲ್ಲಿ ಗೊತ್ತಾಗುತ್ತದೆ. ಟಿವಿ9 ಸಿಕ್ಕಿರುವ ಮಾಹಿತಿ ಪ್ರಕಾರ ದರ್ಶನ್ ಮತ್ತು ಅವರ ಕುಟುಂಬ ಪ್ರಯಾಣಿಸುತ್ತಿರುವ ಕಾರು ಚಳ್ಳಕೆರೆ-ಹಿರಿಯೂರು-ಶಿರಾ-ತುಮಕೂರು-ನೆಲಮಂಗಲ ಮಾರ್ಗವಾಗಿ ಬೆಂಗಳೂರು ತಲುಪಲಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ದರ್ಶನ್ ಬಿಡುಗಡೆ ಕೋರಿ ವಿಜಯಲಕ್ಷ್ಮಿ ಸುತ್ತಿದ ದೇವಾಲಯಗಳು ಯಾವುವು ಗೊತ್ತೆ?

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.