ದರ್ಶನ್ ಬಿಡುಗಡೆ ಕೋರಿ ವಿಜಯಲಕ್ಷ್ಮಿ ಸುತ್ತಿದ ದೇವಾಲಯಗಳು ಯಾವುವು ಗೊತ್ತೆ?

ಮಧ್ಯಂತರ ಜಾಮೀನು ಸಿಕ್ಕಿರುವುದು ದರ್ಶನ್ ಗೆಲುವಾಗಲಿ, ಅವರ ಅಭಿಮಾನಿಗಳ ಗೆಲುವಾಗಲಿ ಅಲ್ಲ ಬದಲಿಗೆ ಅದರ ಪೂರ್ಣ ಶ್ರೇಯ ಹೋಗಬೇಕಿರುವುದು ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರಿಗೆ. ತಾಳ್ಮೆಯಿಂದ ಎಲ್ಲವನ್ನೂ ನಿರ್ವಹಿಸಿ, ವಕೀಲರನ್ನು ಭೇಟಿ ಮಾಡಿ, ರಾಜಕಾರಣಿಗಳನ್ನು ಭೇಟಿ ಮಾಡಿ ತಮ್ಮ ಶಕ್ತಿಮೀರಿ ಹೋರಾಡಿ ಕೊನೆಗೂ ಪತಿ ಜೈಲಿನಿಂದ ಹೊರಬರಲು ಕಾರಣವಾಗಿದ್ದಾರೆ. ಅಂದಹಾಗೆ ಈ 131 ದಿನಗಳಲ್ಲಿ ವಿಜಯಲಕ್ಷ್ಮಿ ಎಷ್ಟು ದೇವಾಲಯಗಳಿಗೆ ಭೇಟಿ ನೀಡಿದ್ದಾರೆ ಗೊತ್ತೆ?

ದರ್ಶನ್ ಬಿಡುಗಡೆ ಕೋರಿ ವಿಜಯಲಕ್ಷ್ಮಿ ಸುತ್ತಿದ ದೇವಾಲಯಗಳು ಯಾವುವು ಗೊತ್ತೆ?
Follow us
ಮಂಜುನಾಥ ಸಿ.
|

Updated on: Oct 30, 2024 | 6:42 PM

131 ದಿನಗಳ ಸೆರೆವಾಸದ ಬಳಿಕ ಕೊನೆಗೂ ದರ್ಶನ್ ಹೊರಬರುತ್ತಿದ್ದಾರೆ. ಇದು ದರ್ಶನ್ ಅಥವಾ ಅಭಿಮಾನಿಗಳಿಗೆ ಸಿಕ್ಕಿದ ಗೆಲುವಲ್ಲ ಬದಲಿಗೆ ವಿಜಯಲಕ್ಷ್ಮಿಯ ಪ್ರಯತ್ನಕ್ಕೆ, ಹೋರಾಟಕ್ಕೆ ನಂಬಿಕೆಗೆ, ತ್ಯಾಗಕ್ಕೆ ಸಿಕ್ಕ ಗೆಲುವು. ತಾಳಿಕಟ್ಟಿದ ಪತಿ ಮತ್ತೊಬ್ಬ ಮಹಿಳೆಯ ಕಾರಣಕ್ಕೆ ವ್ಯಕ್ತಿಯೊಬ್ಬನ ಕೊಲೆಯಲ್ಲಿ ಪಾತ್ರವಹಿಸಿರುವ ಆರೋಪ ಹೊತ್ತಿದ್ದರೂ ಸಹ ಸತತ ಹೋರಾಟ ಮಾಡಿ, ವಕೀಲರ ನೆರವು ಪಡೆದು ದರ್ಶನ್​ಗೆ ಮಧ್ಯಂತರ ಜಾಮೀನು ಕೊಡಿಸಲು ಕಾರಣವಾಗಿದ್ದಾರೆ. ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಬಳ್ಳಾರಿ-ಬೆಂಗಳೂರಿಗೆ ಅದೆಷ್ಟೋ ಬಾರಿ ಸುತ್ತಿದ್ದಾರೆ. ಅದಕ್ಕೂ ಹೆಚ್ಚಾಗಿ ಕಂಡ-ಕಂಡ ದೇವಾಲಯಗಳಿಗೆ ಹೋಗಿ ಹರಕೆಗಳನ್ನು ಹೊತ್ತಿದ್ದಾರೆ. ದೇವರ ಮುಂದೆ ಪತಿಗಾಗಿ ಅಂಗಲಾಚಿದ್ದಾರೆ ವಿಜಯಲಕ್ಷ್ಮಿ. ಅಂದಹಾಗೆ ದರ್ಶನ್, ಕೊಲೆ ಆರೋಪದ ಮೇಲೆ ಜೈಲು ಸೇರಿದ ಬಳಿಕ ವಿಜಯಲಕ್ಷ್ಮಿ ಸುತ್ತಿರುವ ದೇವಾಲಯಗಳು ಯಾವುವು? ಇಲ್ಲಿದೆ ಮಾಹಿತಿ.

ವಿಜಯಲಕ್ಷ್ಮಿ ಸ್ವಭಾವತಃ ದೇವರ ಭಕ್ತೆ. ರೇಣುಕಾ ಸ್ವಾಮಿ ಕೊಲೆಯಾದ ಮರುದಿನ ಇದ್ಯಾವುದರ ಅರಿವೂ ಇಲ್ಲದ ವಿಜಯಲಕ್ಷ್ಮಿ ಪತಿ ಹಾಗೂ ಮಗನ ಏಳಿಗೆಗಾಗಿ ತಮ್ಮ ಮನೆಯಲ್ಲಿ ಹೋಮ ಆಯೋಜಿಸಿದ್ದರು. ಆ ಹೋಮದಲ್ಲಿ ದರ್ಶನ್ ಭಾಗಿಯಾಗಿದ್ದರು. ಹೋಮದ ಕುಂಡಕ್ಕೆ ತುಪ್ಪ ಸುರಿಯುವ ಹೊತ್ತಿದೆ ದರ್ಶನ್ ಕೈಗೆ ರಕ್ತ ಅಂಟಿ ಆಗಿತ್ತು. ದರ್ಶನ್ ಜೈಲಿಗೆ ಸೇರಿದ ಬಳಿಕ ಆಘಾತಕ್ಕೊಳಗಾಗಿದ್ದ ವಿಜಯಲಕ್ಷ್ಮಿ, ಪರಿಸ್ಥಿತಿಯನ್ನು ಅರಿತುಕೊಂಡು ಆಘಾತದಿಂದ ಸಾವರಿಸಿಕೊಂಡು ಕಷ್ಟದಲ್ಲಿರುವ ಪತಿಯ ಸಹಾಯಕ್ಕೆ ನೋವಿನಲ್ಲಿಯೇ ಧಾವಿಸಿದ್ದರು. ಠಾಣೆಗೆ ಭೇಟಿ ನೀಡಿ, ಪೊಲೀಸರ ತನಿಖೆಗೆ ಸಹಕರಿಸಿ, ಆ ನಂತರ ವಕೀಲರ ಭೇಟಿಯಾಗಿ ರಾಜ್ಯದ ನಂಬರ್ 1 ವಕೀಲರನ್ನು ನೇಮಿಸಿ ಕಾನೂನು ಹೋರಾಟ ಪ್ರಾರಂಭಿಸಿದರು. ಆ ಬಳಿಕ ವಿಜಯಲಕ್ಷ್ಮಿ ಹೋಗಿದ್ದು ದೇವರ ಮೊರೆಗೆ.

ದರ್ಶನ್ ಜೈಲಿನಲ್ಲಿದ್ದ ಈ 131 ದಿನಗಳಲ್ಲಿ ವಿಜಯಲಕ್ಷ್ಮಿ ರಾಜ್ಯದ ಹಾಗೂ ಹೊರರಾಜ್ಯದ ಸುಮಾರು 15ಕ್ಕೂ ಹೆಚ್ಚು ದೇವಾಲಯಗಳನ್ನು ಸುತ್ತಿದ್ದಾರೆ. ಉಪವಾಸ ಆಚರಿಸಿ ಗಂಟೆಗಟ್ಟಲೆ ಹೋಮಗಳಲ್ಲಿ ಕೂತಿದ್ದಾರೆ. ಧೀನರಾಗಿ ದೇವರಿಗೆ ಕೈಮುಗಿದಿದ್ದಾರೆ. ಪ್ರತಿ ಬಾರಿ ದೇವಾಲಯಕ್ಕೆ ಹೋದಾಗಲೂ ಪತಿಯ ಬಿಡುಗಡೆಗೆ ಕೋರಿ, ಪ್ರಸಾದವನ್ನು ಜೈಲಿಗೆ ತಂದುಕೊಟ್ಟಿದ್ದಾರೆ.

ಇದನ್ನೂ ಓದಿ:ದೇವಸ್ಥಾನಕ್ಕೆ ಬಂದ ದರ್ಶನ್ ಪತ್ನಿಯನ್ನು ಸುತ್ತುವರಿದು ಕೇಕೆ ಹಾಕುವುದು ಅಭಿಮಾನವಲ್ಲ

ದರ್ಶನ್ ಹೊರಗಡೆ ಇದ್ದಾಗ ಆಗಾಗ್ಗೆ ಚಾಮುಂಡೇಶ್ವರಿ ದೇವಾಲಯಕ್ಕೆ ಹೋಗಿ ನಾಡದೇವತೆಯ ದರ್ಶನ ಮಾಡುತ್ತಿದ್ದರು. ಆದರೆ ಈ ಬಾರಿ ಜೈಲಿನಲ್ಲಿದ್ದ ಕಾರಣ ಹೋಗಲಾಗಿರಲಿಲ್ಲ. ಆದರೆ ವಿಜಯಲಕ್ಷ್ಮಿ ಅವರು ಚಾಮುಂಡೇಶ್ವರಿ ದೇವಾಲಯಕ್ಕೆ ಹೋಗಿ ವಿಶೇಷ ಪೂಜೆ ಮಾಡಿಸಿ ದರ್ಶನ್​ಗೆ ಪ್ರಸಾದ ತಂದುಕೊಟ್ಟಿದ್ದರು. ಅದಾದ ಬಳಿಕ ಜುಲೈ ತಿಂಗಳ 25 ರಂದು ಕೊಲ್ಲೂರಿನ ಮೂಕಾಂಬಿಕಾ ದೇವಾಲಯಕ್ಕೆ ಹೋಗಿ ನವಚಂಡಿಕಾ ಹೋಮವನ್ನು ಮಾಡಿಸಿದರು. ಬಳಿಕ ಆಗಸ್ಟ್ ತಿಂಗಳಲ್ಲಿ ಭೀಮನ ಅಮವಾಸ್ಯೆ ದಿನದಂದು ಬನಶಂಕರಿ ದೇವಾಲಯಕ್ಕೆ ತೆರಳಿ ಪತಿಯ ಬಿಡುಗಡೆ ಮತ್ತು ಆಯುಷ್ಯಕ್ಕಾಗಿ ವಿಶೇಷ ಪೂಜೆ ಮಾಡಿಸಿದ್ದರು.

ಮಂತ್ರಲಾಯಕ್ಕೆ ತೆರಳಿ ಶ್ರೀ ರಾಘವೇಂದ್ರ ಸ್ವಾಮಿಗಳಿಗೆ ವಿಶೇಷ ಪೂಜೆಯನ್ನು ಮಾಡಿಸಿದ್ದರು. ಅದಾದ ಬಳಿಕ ಸೆಪ್ಟೆಂಬರ್ ತಿಂಗಳಲ್ಲಿ ಅಸ್ಸಾಂನ ಕಾಮಾಕ್ಯ ದೇವಾಲಯಕ್ಕೆ ತೆರಳಿ ಅಲ್ಲಿ ವಿಶೇಷ ಪೂಜೆಯಲ್ಲಿ ವಿಜಯಲಕ್ಷ್ಮಿ ಭಾಗಿಯಾಗಿದ್ದರು. ಈ ದೇವರನ್ನು ಬಹಳ ನಂಬುವ ವಿಜಯಲಕ್ಷ್ಮಿಯವರು. ಇಂದು ದರ್ಶನ್​ಗೆ ಮಧ್ಯಂತರ ಜಾಮೀನು ಮಂಜೂರಾದ ಬಳಿಕ ಇನ್​ಸ್ಟಾಗ್ರಾಂನಲ್ಲಿ ಕಾಮಾಕ್ಯ ದೇವಾಲಯದ ಚಿತ್ರವನ್ನು ಹಂಚಿಕೊಂಡು ಧನ್ಯವಾದ ಅರ್ಪಿಸಿದ್ದರು. ಈ ದೇವಾಲಯ ಭಾರತದ 51 ಶಕ್ತಿಪೀಠಗಳಲ್ಲಿ ಒಂದಾಗಿದೆ.

ಬೆಂಗಳೂರಿನ ಬಂಡೆ ಮಹಾಕಾಳಿ ದೇವಾಲಯ ಸೇರಿದಂತೆ ಬೆಂಗಳೂರಿನ ಇನ್ನೂ ಕೆಲವು ದೇವಾಲಯಗಳಿಗೆ ವಿಜಯಲಕ್ಷ್ಮಿ ಭೇಟಿ ನೀಡಿ ವಿಶೇಷ ಪೂಜೆಗಳನ್ನು ಮಾಡಿಸಿದ್ದರು. ದರ್ಶನ್​ಗೆ ಜಾಮೀನು ಸಿಕ್ಕ ಬಳಿಕವೂ ಸಹ ವಿಜಯಲಕ್ಷ್ಮಿ ಅವರು ನೇರವಾಗಿ ಜೈಲಿಗೆ ತೆರಳಿ ಅಲ್ಲಿಂದ ಬಳ್ಳಾರಿಯ ದುರ್ಗಾದೇವಿ ದೇವಾಲಯಕ್ಕೆ ತೆರಳಿ ನಮಿಸಿದ್ದಾರೆ. ದರ್ಶನ್, ಜೈಲಿನಲ್ಲಿದ್ದಾಗಲೂ ಸಹ ಮನೆಯಲ್ಲಿ ಕೆಲವು ಹೋಮಗಳನ್ನು, ವಿಶೇಷ ಪೂಜೆಗಳನ್ನು ಸಹ ವಿಜಯಲಕ್ಷ್ಮಿ ಅವರು ಮಾಡಿಸಿದ್ದಾರೆ ಎನ್ನಲಾಗುತ್ತಿದೆ. ಇನ್ನು ದರ್ಶನ್ ಹೊರಬಂದ ಬಳಿಕವೂ ಸಹ ವಿಜಯಲಕ್ಷ್ಮಿ ಅವರು ಕೆಲವು ದೇವಾಲಯಗಳ ಭೇಟಿ ಮಾಡಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್