ಪತ್ನಿ ವಿಜಯಲಕ್ಷ್ಮೀ ಮನೆಯಲ್ಲಿ ರಿಲ್ಯಾಕ್ಸ್ ಆದ ದರ್ಶನ್; ಮಗನ ಬರ್ತ್​ಡೇ ಆಚರಣೆ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ವಾಸ ಅನುಭವಿಸುತ್ತಿದ್ದ ನಟ ದರ್ಶನ್ ಅವರಿಗೆ ಮಧ್ಯಂತರ ಜಾಮೀನು ದೊರೆತಿರುವುದು ಸುದ್ದಿ ಮಾಡಿದೆ. ಬೆನ್ನು ನೋವಿಗೆ ಚಿಕಿತ್ಸೆ ಪಡೆಯಲು ಅವರಿಗೆ ಅವಕಾಶ ನೀಡಲಾಗಿದೆ. ಜೈಲಿನಿಂದ ಬಿಡುಗಡೆಯಾದ ದರ್ಶನ್ ಅವರು ಮಗನ ಹುಟ್ಟುಹಬ್ಬ ಆಚರಿಸಿದ್ದಾರೆ. ಆದಾಗ್ಯೂ, ಆರು ವಾರಗಳ ಬಳಿಕ ಅವರು ಮತ್ತೆ ಜೈಲಿಗೆ ಹಾಜರಾಗಬೇಕಿದೆ.

ಪತ್ನಿ ವಿಜಯಲಕ್ಷ್ಮೀ ಮನೆಯಲ್ಲಿ ರಿಲ್ಯಾಕ್ಸ್ ಆದ ದರ್ಶನ್; ಮಗನ ಬರ್ತ್​ಡೇ ಆಚರಣೆ
ಕುಟುಂಬದ ಜೊತೆ ದರ್ಶನ್
Follow us
| Updated By: ರಾಜೇಶ್ ದುಗ್ಗುಮನೆ

Updated on: Oct 31, 2024 | 6:58 AM

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಜೈಲು ಸೇರಿದ್ದ ದರ್ಶನ್​ಗೆ ಮಧ್ಯಂತರ ಜಾಮೀನು ಸಿಕ್ಕಿದೆ. ಬೆನ್ನು ನೋವಿಗೆ ಚಿಕಿತ್ಸೆ ಪಡೆಯಲು ಅವರಿಗೆ ಅವಕಾಶ ಮಾಡಿಕೊಡಲಾಗಿದೆ. ಈಗ ಜೈಲಿನಿಂದ ಹೊರ ಬಂದಿರೋ ಅವರು ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿರುವ ಪತ್ನಿ ವಿಜಯಲಕ್ಷ್ಮೀ ನಿವಾಸಕ್ಕೆ ತೆರಳಿದ್ದಾರೆ. ರಾತ್ರಿ ಅಲ್ಲಿಯೇ ವಾಸ್ತವ್ಯ ಹೂಡಿದ್ದಾರೆ. ಇಂದು (ಅಕ್ಟೋಬರ್ 31) ಮಗ ವಿನೀಶ್ ಜನ್ಮದಿನ. ಈ ವಿಶೇಷ ದಿನಕ್ಕೆ ಸರಿಯಾಗಿ ಅವರು ಮನೆಗೆ ಬಂದಿದ್ದಾರೆ.

ಬಳ್ಳಾರಿಯಿಂದ ಕಾರಿನಲ್ಲಿ ಪತ್ನಿ ಜೊತೆ ಹೊಸಕೆರೆಹಳ್ಳಿ ನಿವಾಸಕ್ಕೆ ದರ್ಶನ್ ಆಗಮಿಸಿದ್ದಾರೆ. ದರ್ಶನ್ ಅವರನ್ನು ನೋಡಲು ಫ್ಯಾನ್ಸ್ ನೆರೆದಿದ್ದರು. ಅವರಿಂದ ತಪ್ಪಿಸಿಕೊಂಡು ದರ್ಶನ್ ಮನೆ ಸೇರಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯಬಾರದು ಎನ್ನುವ ಕಾರಣಕ್ಕೆ ದರ್ಶನ್​ ಮನೆಗೆ ಪೊಲೀಸ್ ಬಿಗಿ ಭದ್ರತೆ ನೀಡಲಾಗಿದೆ.

ಬರ್ತ್​ಡೇ ಆಚರಣೆ

ಮಗ ವಿನೀಶ್​ಗೆ ಇಂದು ಜನ್ಮದಿನ. ಹೀಗಾಗಿ, ರಾತ್ರಿ ಕೇಕ್ ಕತ್ತರಿಸಿ ಸಂಭ್ರಮಿಸಲಾಗಿದೆ. ಮಗನ ಜೊತೆಯೇ ಅವರು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಆ ಬಳಿಕ ಊಟ ಮಾಡಿ ವಿಶ್ರಾಂತಿ ಪಡೆದಿದ್ದಾರೆ. ಹಲವು ತಿಂಗಳ ಬಳಿಕ ಬೆಡ್​ನಲ್ಲಿ ಅವರು ಹಾಯಾಗಿ ನಿದ್ರಿಸಿದ್ದಾರೆ. ಈ ದಿನಕ್ಕಾಗಿ ಅವರು ಕಳೆದ ನಾಲ್ಕೂವರೆ ತಿಂಗಳಿಂದ ಕಾಯುತ್ತಿದ್ದರು.

ಇದನ್ನೂ ಓದಿ: ಜಾಮೀನು ಪಡೆದು ಬಳ್ಳಾರಿಯಿಂದ ಹೊರಟ ದರ್ಶನ್ ಕಾರಿಗೆ ಮುಗಿಬಿದ್ದ ಅಭಿಮಾನಿಗಳು

ಆಸ್ಪತ್ರೆಗೆ

ದರ್ಶನ್ ಅವರು ಜೈಲಿನಿಂದ ಹೊರ ಬಂದಿದ್ದು ವೈದ್ಯಕೀಯ ಚಿಕಿತ್ಸೆಗಾಗಿ. ಹೀಗಾಗಿ, ಅವರು ಆದಷ್ಟು ಬೇಗ ಆಸ್ಪತ್ರೆಗೆ ತೆರಳಬೇಕಿದೆ. ಇಂದು (ಅಕ್ಟೋಬರ್ 31) ಮಧ್ಯಾಹ್ನ ಅವರು ಆಸ್ಪತ್ರೆಗೆ ಶಿಫ್ಟ್ ಆಗೋ ಸಾಧ್ಯತೆ ಇದೆ. ಆ ಬಳಿಕ ಅವರು ವೈದ್ಯರ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಅವರು ಎಲ್ಲಿ ಬೇಕಿದ್ದರೂ ಚಿಕಿತ್ಸೆ ಪಡೆಯಲು ಅವಕಾಶ ಇದೆ.

ಸೆಲೆಬ್ರೇಷನ್

ದರ್ಶನ್ ಹೊರ ಬರುತ್ತಿದ್ದಂತೆ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಕೆಲವು ಕಡೆಗಳಲ್ಲಿ ಪಟಾಕಿ ಕೂಡ ಸಿಡಿಸಲಾಗಿದೆ. ಸದ್ಯದ ಮಟ್ಟಿಗೆ ಇದು ಮಧ್ಯಂತರ ಜಾಮೀನು. ಅವರು ಆರು ವಾರಗಳ ಬಳಿಕ ಮತ್ತೆ ಜೈಲು ಸೇರಬೇಕಿದೆ. ಅಲ್ಲಿಯವರೆಗೆ ಅವರ ಆರೋಗ್ಯ ಯಾವ ರೀತಿಯಲ್ಲಿ ಚೇತರಿಕೆ ಕಾಣುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಅಯೋಧ್ಯೆಯ ಸರಯೂ ನದಿ ದಡದಲ್ಲಿ ಪ್ರಜ್ವಲಿಸಿದ ಲಕ್ಷಾಂತರ ದೀಪಗಳು
ಅಯೋಧ್ಯೆಯ ಸರಯೂ ನದಿ ದಡದಲ್ಲಿ ಪ್ರಜ್ವಲಿಸಿದ ಲಕ್ಷಾಂತರ ದೀಪಗಳು
ಯಶ್-ರಾಧಿಕಾ ದಂಪತಿಯ ಪುತ್ರ ಯಥರ್ವ್​ಗೆ 5ನೇ ವರ್ಷದ ಹುಟ್ಟುಹಬ್ಬ
ಯಶ್-ರಾಧಿಕಾ ದಂಪತಿಯ ಪುತ್ರ ಯಥರ್ವ್​ಗೆ 5ನೇ ವರ್ಷದ ಹುಟ್ಟುಹಬ್ಬ
ದರ್ಶನ್ ನಿಜವಾದ ಅಭಿಮಾನಿಗಳು ಜೈಲು ಮುಂದೆ ನೆರೆದು ನಟನಿಗಾಗಿ ಕಾಯ್ತಿದ್ದಾರೆ
ದರ್ಶನ್ ನಿಜವಾದ ಅಭಿಮಾನಿಗಳು ಜೈಲು ಮುಂದೆ ನೆರೆದು ನಟನಿಗಾಗಿ ಕಾಯ್ತಿದ್ದಾರೆ
ಮಹಾರಾಷ್ಟ್ರದ ಸಮುದ್ರದಲ್ಲಿ ಮೀನುಗಾರರನ್ನು ಕೊಂದು, ಬೋಟ್​ಗೆ ಬೆಂಕಿ
ಮಹಾರಾಷ್ಟ್ರದ ಸಮುದ್ರದಲ್ಲಿ ಮೀನುಗಾರರನ್ನು ಕೊಂದು, ಬೋಟ್​ಗೆ ಬೆಂಕಿ
ದರ್ಶನ್ ಜಾಮೀನು ಪಡೆದ ಬಳಿಕ ಬಳ್ಳಾರಿ ದುರ್ಗಾದೇವಿಗೆ ವಿಜಯಲಕ್ಷ್ಮಿ ಪೂಜೆ
ದರ್ಶನ್ ಜಾಮೀನು ಪಡೆದ ಬಳಿಕ ಬಳ್ಳಾರಿ ದುರ್ಗಾದೇವಿಗೆ ವಿಜಯಲಕ್ಷ್ಮಿ ಪೂಜೆ
ಬೆಂಗಳೂರು ನಗರದ ಹಲವೆಡೆ ಮತ್ತೆ ಧಾರಾಕಾರ ಮಳೆ, ಟ್ರಾಫಿಕ್​ ಜಾಮ್​
ಬೆಂಗಳೂರು ನಗರದ ಹಲವೆಡೆ ಮತ್ತೆ ಧಾರಾಕಾರ ಮಳೆ, ಟ್ರಾಫಿಕ್​ ಜಾಮ್​
ಜೈಲು ರಸ್ತೆಯನ್ನು ಮುಂಜಾಗ್ರತಾ ಕ್ರಮವಾಗಿ ಬ್ಯಾರಿಕೇಡಿಂಗ್ ಮಾಡಿದ ಪೊಲೀಸ್
ಜೈಲು ರಸ್ತೆಯನ್ನು ಮುಂಜಾಗ್ರತಾ ಕ್ರಮವಾಗಿ ಬ್ಯಾರಿಕೇಡಿಂಗ್ ಮಾಡಿದ ಪೊಲೀಸ್
ದರ್ಶನ್ ಮಿತ್ರನಾದರೂ ಜಾಮೀನು ಸಿಕ್ಕಿರುವುದಕ್ಕೆ ಪ್ರತಿಕ್ರಿಯಿಸಲೊಲ್ಲದ ಜಮೀರ್
ದರ್ಶನ್ ಮಿತ್ರನಾದರೂ ಜಾಮೀನು ಸಿಕ್ಕಿರುವುದಕ್ಕೆ ಪ್ರತಿಕ್ರಿಯಿಸಲೊಲ್ಲದ ಜಮೀರ್
ಚಾಮರಾಜನಗರ: ಸಾಲ ತೀರಿಸದ ರೈತರ ವಿರುದ್ಧ ದೂರು ದಾಖಲಿಸಲು ಮುಂದಾದ ಸರ್ಕಾರ
ಚಾಮರಾಜನಗರ: ಸಾಲ ತೀರಿಸದ ರೈತರ ವಿರುದ್ಧ ದೂರು ದಾಖಲಿಸಲು ಮುಂದಾದ ಸರ್ಕಾರ
ನನ್ನ ಕೆಲಸಗಳ ಆಧಾರದಲ್ಲಿ ಚನ್ನಪಟ್ಟಣ ಜನರ ಮತ ಯಾಚಿಸುವೆ: ಕುಮಾರಸ್ವಾಮಿ
ನನ್ನ ಕೆಲಸಗಳ ಆಧಾರದಲ್ಲಿ ಚನ್ನಪಟ್ಟಣ ಜನರ ಮತ ಯಾಚಿಸುವೆ: ಕುಮಾರಸ್ವಾಮಿ