ಹೇಗಿದೆ ಶ್ರೀಮುರಳಿ ನಟನೆಯ ‘ಬಘೀರ’ ಸಿನಿಮಾದ ಫಸ್ಟ್ ಹಾಫ್? ಇಲ್ಲಿದೆ ರಿಪೋರ್ಟ್

ಶ್ರೀಮುರಳಿ ಅವರು ಆ್ಯಕ್ಷನ್ ಅವತಾರದಲ್ಲಿ ಕಾಣಿಸಿಕೊಂಡಿರುವ ‘ಬಘೀರ’ ಸಿನಿಮಾ ಬಿಡುಗಡೆ ಆಗಿದೆ. ಇಂದು (ಅ.31) ದೀಪಾವಳಿ ಹಬ್ಬದ ಪ್ರಯುಕ್ತ ತೆರೆಕಂಡ ಈ ಸಿನಿಮಾಗೆ ಡಾ. ಸೂರಿ ನಿರ್ದೇಶನ ಮಾಡಿದ್ದು, ‘ಹೊಂಬಾಳೆ ಫಿಲ್ಮ್ಸ್​’ ಮೂಲಕ ವಿಜಯ್ ಕಿರಗಂದೂರು ಅವರು ಬಂಡವಾಳ ಹೂಡಿದ್ದಾರೆ. ಸಿನಿಮಾದ ಫಸ್ಟ್ ಹಾಫ್​ ಬಗ್ಗೆ ಇಲ್ಲಿದೆ ಮಾಹಿತಿ..

ಹೇಗಿದೆ ಶ್ರೀಮುರಳಿ ನಟನೆಯ ‘ಬಘೀರ’ ಸಿನಿಮಾದ ಫಸ್ಟ್ ಹಾಫ್? ಇಲ್ಲಿದೆ ರಿಪೋರ್ಟ್
ಬಘೀರ ಪೋಸ್ಟರ್
Follow us
| Updated By: ಮಂಜುನಾಥ ಸಿ.

Updated on: Oct 31, 2024 | 11:44 AM

ಟ್ರೇಲರ್​ ಮೂಲಕ ‘ಬಘೀರ’ ಸಿನಿಮಾ ಗಮನ ಸೆಳೆದಿದೆ. ಹಾಗಾಗಿ ಈ ಸಿನಿಮಾ ಮೇಲೆ ಶ್ರೀಮುರಳಿ ಅವರ ಅಭಿಮಾನಿಗಳಿಗೆ ಭಾರಿ ನಿರೀಕ್ಷೆ ಇದೆ. ನಾಯಕಿಯಾಗಿ ರುಕ್ಮಿಣಿ ವಸಂತ್ ಅವರು ನಟಿಸಿದ್ದಾರೆ. ಅದ್ದೂರಿಯಾಗಿ ಮೂಡಿಬಂದಿರುವ ಈ ಸಿನಿಮಾದಲ್ಲಿ ಶ್ರೀಮುರಳಿ ಅವರು ಆ್ಯಕ್ಷನ್ ಅವತಾರ ತಾಳಿದ್ದಾರೆ. ಪ್ರಕಾಶ್ ರಾಜ್, ರಂಗಾಯಣ ರಘು, ಅಚ್ಯುತ್ ಕುಮಾರ್​, ಗರುಡ ರಾಮ್ ಮುಂತಾದವರು ಕೂಡ ಪಾತ್ರವರ್ಗದಲ್ಲಿ ಇದ್ದಾರೆ. ಈ ಸಿನಿಮಾಗೆ ಪ್ರಶಾಂತ್ ನೀಲ್ ಕಥೆ ಬರೆದಿದ್ದಾರೆ ಎಂಬುದು ವಿಶೇಷ. ಅಜನೀಶ್ ಲೋಕನಾಥ್ ಅವರು ಸಂಗೀತ ನೀಡಿದ್ದಾರೆ. ‘ಬಘೀರ’ ಸಿನಿಮಾದ ಫಸ್ಟ್ ಹಾಫ್ ಬಗ್ಗೆ ರಿಪೋರ್ಟ್​ ಇಲ್ಲಿದೆ..

  • 2001ರ ಪ್ಲ್ಯಾಶ್‌ಬ್ಯಾಕ್ ಮೂಲಕ ತೆರೆದುಕೊಳ್ಳುತ್ತದೆ ಬಘೀರ ಸಿನಿಮಾ. ಸೂಪರ್ ಹೀರೋ ಆಗಬೇಕು ಎಂಬ ಆಸೆ ಇಟ್ಟುಕೊಂಡ ಬಾಲಕನ ಕಥೆ.
  • ಹೀರೋಗಿಂತ ಮೊದಲು ಅಬ್ಬರಿಸುತ್ತ ಎಂಟ್ರಿ ನೀಡುವ ವಿಲನ್ ಗರುಡ ರಾಮ್. ತುಂಬ ಕ್ರೂರವಾದ ಪಾತ್ರವನ್ನು ಅವರಿಗೆ ನೀಡಲಾಗಿದೆ.
  • ಐಪಿಎಸ್ ಅಧಿಕಾರಿ ವೇದಾಂತ ಎಂಬ ಪಾತ್ರ ಮಾಡಿರುವ ಶ್ರೀಮುರಳಿ. ಸೂಪರ್ ಕಾಪ್ ಆಗಿ ಬಂದರೂ ಕೂಡ ಆರಂಭದಲ್ಲೇ ಆ್ಯಕ್ಷನ್ ಅಬ್ಬರ ಇಲ್ಲ.
  • ಆದರೆ ಸಿನಿಮಾ ಶುರುವಾಗಿ ಅರ್ಧ ಗಂಟೆ ಬಳಿಕ ಖಾಕಿ ಖದರ್ ತೋರಿಸಲು ಶುರು ಮಾಡುವ ಶ್ರೀಮುರಳಿ. ಅಷ್ಟರಲ್ಲೇ ಕಥೆಗೆ ಸಿಗುತ್ತದೆ ಒಂದು ಟ್ವಿಸ್ಟ್.
  • ಖಾಕಿ ಕಳಚಿಟ್ಟು ರಿಯಲ್ ಆ್ಯಕ್ಷನ್ ತೋರಿಸುತ್ತಾರೆ ಶ್ರೀಮುರಳಿ. ಸೂಪರ್ ಕಾಪ್ ಆಗಿ ಮಾಡಲು ಸಾಧ್ಯವಾಗದೇ ಇರೋದನ್ನು ಮಾಡಿ ತೋರಿಸುವ ಸೂಪರ್ ಹೀರೋ ಬಘೀರ.
  • ಫಸ್ಟ್ ಹಾಫ್‌ನಲ್ಲಿ ನಟಿ ರುಕ್ಮಿಣಿ ವಸಂತ್ ಅವರಿಗೆ ಇರುವುದು ಕೆಲವೇ ದೃಶ್ಯಗಳು ಮಾತ್ರ. ಅಷ್ಟರಲ್ಲೇ ಮನ ಮುಟ್ಟುವಂತೆ ಅವರು ನಟಿಸಿದ್ದಾರೆ.
  • ಇಂಟರ್‌ವಲ್ ವೇಳೆಗೆ ಪುನಃ ಗರುಡ ರಾಮ್ ಅಬ್ಬರ ಜಾಸ್ತಿ ಆಗುತ್ತದೆ. ಪ್ರಕಾಶ್ ರಾಜ್ ಮತ್ತು ಅವಿನಾಶ್ ಪಾತ್ರ ಬರುವುದು ಕೂಡ ಇಂಟರ್‌ವಲ್‌ನಲ್ಲಿ.
  • ಅಂಗಾಂಗ ಕಳ್ಳ ಸಾಗಣೆಯ ದಂಧೆ ಬಗ್ಗೆ ‘ಬಘೀರ’ ಸಿನಿಮಾದಲ್ಲಿ ತೋರಿಸಲಾಗಿದೆ. ಬ್ಯಾಟ್‌ಮ್ಯಾನ್ ರೀತಿಯ ಪಾತ್ರದಲ್ಲಿ ಶ್ರೀಮುರಳಿ ಮನರಂಜನೆ ನೀಡುತ್ತಾರೆ.
  • ಮಂಗಳೂರಿನಲ್ಲಿ ಇಡೀ ಸಿನಿಮಾದ ಕಥೆ ನಡೆಯುತ್ತೆ. ಶ್ರೀಮುರಳಿ ಅವರ ವೃತ್ತಿ ಜೀವನಕ್ಕೆ ಒಂದು ಡಿಫರೆಂಟ್ ಸಿನಿಮಾವಾಗಿ ಬಘೀರ ಮೂಡಿಬಂದಿದೆ‌.
  • ಸಿನಿಮಾದ ಫಸ್ಟ್ ಹಾಫ್‌ನಲ್ಲಿ ಲವ್ ಸ್ಟೋರಿಗೆ ಹೆಚ್ಚಿನ ಜಾಗ ಇಲ್ಲ. ಒಂದು ಹಾಡಿನಲ್ಲಿ ಮಾತ್ರ ಶ್ರೀಮುರಳಿ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ರಫ್ ಆ್ಯಂಡ್ ಟಫ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಅನ್ನಭಾಗ್ಯ ಯೋಜನೆಯಡಿ ನೀಡುವ ಅಕ್ಕಿ ಕಡಿತಗೊಳಿಸುವ ಸಾಧ್ಯತೆ: ಕುಮಾರಸ್ವಾಮಿ
ಅನ್ನಭಾಗ್ಯ ಯೋಜನೆಯಡಿ ನೀಡುವ ಅಕ್ಕಿ ಕಡಿತಗೊಳಿಸುವ ಸಾಧ್ಯತೆ: ಕುಮಾರಸ್ವಾಮಿ
‘ನಿಮ್ಮ ಗುಣವೇ ಸರಿಯಿಲ್ಲ’; ಮಂಜು-ಭವ್ಯಾ ಮಧ್ಯೆ ನಡೆಯಿತು ಜಗಳ
‘ನಿಮ್ಮ ಗುಣವೇ ಸರಿಯಿಲ್ಲ’; ಮಂಜು-ಭವ್ಯಾ ಮಧ್ಯೆ ನಡೆಯಿತು ಜಗಳ
Daily Devotional: ಅಭ್ಯಂಜನ ಸ್ನಾನದ ಮಹತ್ವ ಹಾಗೂ ಪ್ರಯೋಜನ ತಿಳಿಯಿರಿ
Daily Devotional: ಅಭ್ಯಂಜನ ಸ್ನಾನದ ಮಹತ್ವ ಹಾಗೂ ಪ್ರಯೋಜನ ತಿಳಿಯಿರಿ
Nithya Bhavishya: ನರಕ ಚತುರ್ದಶಿ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನರಕ ಚತುರ್ದಶಿ ದಿನದ ರಾಶಿ ಭವಿಷ್ಯ ತಿಳಿಯಿರಿ
ಜಾಮೀನು ಪಡೆದು ಬಳ್ಳಾರಿಯಿಂದ ಹೊರಟ ದರ್ಶನ್ ಕಾರಿಗೆ ಮುಗಿಬಿದ್ದ ಅಭಿಮಾನಿಗಳು
ಜಾಮೀನು ಪಡೆದು ಬಳ್ಳಾರಿಯಿಂದ ಹೊರಟ ದರ್ಶನ್ ಕಾರಿಗೆ ಮುಗಿಬಿದ್ದ ಅಭಿಮಾನಿಗಳು
ಪ್ರಚಾರಕ್ಕೆ ಹೋದ ಜನಾರ್ದನ ರೆಡ್ಡಿ, ಶ್ರೀರಾಮುಲುಗೆ ತರಾಟೆಗೆ ತೆಗೆದುಕೊಂಡ ಜನ
ಪ್ರಚಾರಕ್ಕೆ ಹೋದ ಜನಾರ್ದನ ರೆಡ್ಡಿ, ಶ್ರೀರಾಮುಲುಗೆ ತರಾಟೆಗೆ ತೆಗೆದುಕೊಂಡ ಜನ
‘ಕಾಟೇರ’ ಶೂಟಿಂಗ್ ವೇಳೆಯೇ ದರ್ಶನ್​ಗೆ ಬೆನ್ನು ನೋವು ಇತ್ತು: ತರುಣ್ ಸುಧೀರ್
‘ಕಾಟೇರ’ ಶೂಟಿಂಗ್ ವೇಳೆಯೇ ದರ್ಶನ್​ಗೆ ಬೆನ್ನು ನೋವು ಇತ್ತು: ತರುಣ್ ಸುಧೀರ್
ಅಯೋಧ್ಯೆಯ ಸರಯೂ ನದಿ ದಡದಲ್ಲಿ ಪ್ರಜ್ವಲಿಸಿದ ಲಕ್ಷಾಂತರ ದೀಪಗಳು
ಅಯೋಧ್ಯೆಯ ಸರಯೂ ನದಿ ದಡದಲ್ಲಿ ಪ್ರಜ್ವಲಿಸಿದ ಲಕ್ಷಾಂತರ ದೀಪಗಳು
ಜೈಲಿಂದ ಆಚೆ ಬರುವ ಮೊದಲು ದರ್ಶನ್ ಟಿ-ಶರ್ಟ್ ಬದಲಾಯಿಸಿದರು
ಜೈಲಿಂದ ಆಚೆ ಬರುವ ಮೊದಲು ದರ್ಶನ್ ಟಿ-ಶರ್ಟ್ ಬದಲಾಯಿಸಿದರು
ಯಶ್-ರಾಧಿಕಾ ದಂಪತಿಯ ಪುತ್ರ ಯಥರ್ವ್​ಗೆ 5ನೇ ವರ್ಷದ ಹುಟ್ಟುಹಬ್ಬ
ಯಶ್-ರಾಧಿಕಾ ದಂಪತಿಯ ಪುತ್ರ ಯಥರ್ವ್​ಗೆ 5ನೇ ವರ್ಷದ ಹುಟ್ಟುಹಬ್ಬ