‘ಬಘೀರ’ ಸಿನಿಮಾದಲ್ಲಿ ಹೇಗಿದೆ ಗರುಡಾ ರಾಮ್ ಪಾತ್ರ? ಕಥೆ ಬಗ್ಗೆ ಸುಳಿವು ನೀಡಿದ ನಟ
ಶ್ರೀಮುರಳಿ ನಟನೆಯ ‘ಬಘೀರ’ ಸಿನಿಮಾ ತೆರೆಕಾಣಲು ಸಜ್ಜಾಗಿದೆ. ಈ ಚಿತ್ರದಲ್ಲಿ ಗರುಡಾ ರಾಮ್ ಅವರು ವಿಲನ್ ಪಾತ್ರ ಮಾಡಿದ್ದಾರೆ. ಸಿನಿಮಾದಲ್ಲಿ ತಮ್ಮ ಪಾತ್ರ ಹೇಗಿದೆ ಎಂಬುದನ್ನು ಅವರು ವಿವರಿಸಿದ್ದಾರೆ. ಈ ಸಿನಿಮಾಗೆ ‘ಹೊಂಬಾಳೆ ಫಿಲ್ಮ್ಸ್’ ಬಂಡವಾಳ ಹೂಡಿದೆ. ಈ ಸಂಸ್ಥೆಯ ಜೊತೆ ಗರುಡಾ ರಾಮ್ ಮಾಡಿದ ಮೂರನೇ ಸಿನಿಮಾ ಇದು.
ಪ್ರಶಾಂತ್ ನೀಲ್ ಬರೆದ ‘ಬಘೀರ’ ಕಥೆಗೆ ಡಾ. ಸೂರಿ ಅವರು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಗರುಡಾ ರಾಮ್ ಮುಖ್ಯ ವಿಲನ್ ಆಗಿದ್ದಾರೆ. ಟ್ರೇಲರ್ನಲ್ಲಿ ಅವರ ಪಾತ್ರದ ಝಲಕ್ ತೋರಿಸಲಾಗಿದೆ. ‘ಈ ಪಾತ್ರವನ್ನು ಡಾ. ಸೂರಿ ಅವರು ಡಿಸೈನ್ ಮಾಡಿದ್ದಾರೆ. ಸಮಾಜದಲ್ಲಿ ತಾನು ಮಾಡಿದ್ದೇ ಸರಿ ಎಂದುಕೊಳ್ಳವ ವಿಲನ್ ಪಾತ್ರ ನನಗೆ ಸಿಕ್ಕಿದೆ. ಆ ಪಾತ್ರದಿಂದ ಸಮಾಜಕ್ಕೆ ತೊಂದರೆ ಆದಾಗ ಕಾಪಾಡಲು ಹೀರೋ ಬರುತ್ತಾನೆ’ ಎಂದು ಗರುಡಾ ರಾಮ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos
ರೀಲ್ಸ್ ತಂದ ಆಪತ್ತು: ಇನ್ಸ್ಟಾಗ್ರಾಮ್ ಬಳಸುವವರು ಈ ವಿಡಿಯೋನ ಒಮ್ಮೆ ನೋಡಿ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
