ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಆಂತರಿಕ ವಿಷಯಗಳನ್ನು ಮಾತಾಡಲ್ಲ ಎಂದ ಸಂಸದ ಯದುವೀರ್ ಒಡೆಯರ್
ಏನಾಗುತ್ತಿದೆಯೆಂದರೆ ಮಾಧ್ಯಮದವರು ಕಾಣಿಸಿದಾಕ್ಷಣ ನಮ್ಮ ಜನಪ್ರತಿನಿಧಿಗಳು ತಮಗೆ ಗೊತ್ತಿರುವುದಕ್ಕಿಂತ ಹೆಚ್ಚು ಗೊತ್ತಿಲ್ಲದಿರುವ ಬಗ್ಗೆ ಮಾತಾಡುತ್ತಾರೆ. ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ವಿಪಕ್ಷ ನಾಯಕನ ಬದಲಾವಣೆ ಬಗ್ಗೆ ಕಾಂಗ್ರೆಸ್ ನಾಯಕರು ಮತ್ತು ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಬಿಜೆಪಿ ನಾಯಕರು ತಮ್ಮ ಮುಂದೆಯೇ ಆಯಾ ಪಕ್ಷಗಳ ವರಿಷ್ಠರು ಮಾತಾಡಿದರು ಎಂಬಂತೆ ಹೇಳಿಕೆ ನೀಡುತ್ತಾರೆ. ಸರಿ ಏನು ಅಂತ ಯದುವೀರ್ರನ್ನು ನೋಡಿ ತಿಳಿದುಕೊಳ್ಳಬೇಕು.
ಮೈಸೂರು, ಜುಲೈ 3: ರಾಜಕಾರಣಿಗಳೆಲ್ಲ ಸ್ಥಳೀಯ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಂತೆ ಯೋಚಿಸಿದರೆ ಚೆನ್ನಾಗಿತ್ತು ಮಾರಾಯ್ರೇ. ನಗರದಲ್ಲಿ ಇಂದು ಸಂಸದನಿಗೆ ಮಾಧ್ಯಮ ಪ್ರತಿನಿಧಿಗಳು, ಬಿಜೆಪಿ ರಾಜ್ಯಾಧ್ಯಕ್ಷರು ಬದಲಾಗುತ್ತಾರಾ ಮತ್ತು ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಪ್ರಶ್ನೆ ಕೇಳುತ್ತಾರೆ. ಅದಕ್ಕೆ ಯದುವೀರ್, ಎರಡೂ ಆಯಾ ಪಕ್ಷಗಳ ಆಂತರಿಕ ವಿಷಯಗಳು, ಪಕ್ಷಗಳ ಹಿರಿಯರು ಅವುಗಳಿಗೆ ಪರಿಹಾರಗಳನ್ನು ಸೂಚಿಸುತ್ತಾರೆ ತಾನು ಮಾತಾಡುವುದು ಸರಿಯಲ್ಲ ಎನ್ನುತ್ತಾರೆ. ಸಿದ್ದರಾಮಯ್ಯ ಸರಕಾರದ ಕಾರ್ಯವೈಖರಿಯ ಬಗ್ಗೆ ಅವರು ಜರೂರು ಮಾತಾಡುತ್ತಾರೆ. ರಾಜಕಾರಣಿಯ ಪ್ರಬುದ್ಧತೆ ಅಂದರೆ ಇದು.
ಇದನ್ನೂ ಓದಿ: ಕರ್ನಾಟಕದ ಜನರೇ ಕಮಲ್ ಹಾಸನ್ಗೆ ಪಾಠ ಕಲಿಸಬೇಕು: ಯದುವೀರ್ ಒಡೆಯರ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
Latest Videos