ಹೆಚ್ಎಎಲ್ ಕರ್ನಾಟಕದಲ್ಲಿ ಉದ್ಭವಿಸಿದ ಕನ್ನಡಿಗರೇ ಹುಟ್ಟುಹಾಕಿದ ಸಂಸ್ಥೆಯಾಗಿದೆ: ಯದುವೀರ್ ಕೃಷ್ಣದತ್ ಒಡೆಯರ್
ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೆಚ್ಎಎಲ್ ಪಂಡಿತ್ ನೆಹರೂ ಹುಟ್ಟುಹಾಕಿದ ಸಂಸ್ಥೆಯೆಂದು ಹೇಳುತ್ತಾರೆ, ಆದರೆ ಇದು ಕರ್ನಾಟಕಕ್ಕೆ 19040ರಲ್ಲಿ ಅಂದಿನ ಮೈಸೂರು ಮಹಾರಾಜ ಅಥವಾ ಮೈಸೂರು ಸರ್ಕಾರದ ಕೊಡುಗೆಯಾಗಿದೆ, ವಾಲ್ಚಂದ್ ಅವರು ಏರ್ಕ್ರಾಫ್ಟ್ ತಯಾರಿಸುವ ಸಂಸ್ಥೆ ನಿರ್ಮಾಣದ ಪ್ರಸ್ತಾಪ ತೆಗೆದುಕೊಂಡು ಬಂದಾಗ ಮೈಸೂರು ಮಹಾರಾಜರು ಪ್ರಸ್ತಾಪಕ್ಕೆ ಒಪ್ಪಿಗೆ ನೀಡಿ 700 ಎಕರೆ ಜಮೀನನ್ನು ಸಂಸ್ಥೆಯ ನಿರ್ಮಾಣಕ್ಕೆ ಕೊಟ್ಟಿದ್ದರು ಎಂದು ಯದುವೀರ್ ಹೇಳಿದರು.
ಬೆಂಗಳೂರು, ಮೇ 28: ತಮ್ಮ ರಾಜ್ಯದಲ್ಲಿ ಹೆಚ್ಎಎಲ್ ಬೇಕು ಎಂದು ಕೇಂದ್ರ ಸರ್ಕಾರಕ್ಕೆ ಕೇಳುವ ಹಕ್ಕು ಬೇರೆ ರಾಜ್ಯಗಳಿಗೆ ಇರುತ್ತದೆ, ಆದರೆ ಹೆಚ್ಎಎಲ್ ಕನ್ನಡಿಗರೇ ಹುಟ್ಟು ಹಾಕಿರುವ ಕರ್ನಾಟಕದ ಮೂಲಸಂಸ್ಥೆಯಾಗಿದೆ ಹಾಗಾಗಿ ಇದನ್ನು ಬೇರೆ ರಾಜ್ಯಗಳಿಗೆ ಬಿಟ್ಟಕೊಡುವುದು ಸಾಧ್ಯವಿಲ್ಲ ಎಂದು ಮೈಸೂರು ಸಂಸದ ಯದುವೀರ್ ಕೃಷ್ಣದತ್ ಒಡೆಯರ್ (Yaduveer Krishna Dutt Wodeyar) ಹೇಳಿದರು. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದ ಅವರು, ಹೆಚ್ಎಎಲ್ ಕರ್ನಟಕದಲ್ಲಿ ಉದ್ಭವವಾಗಿರುವ ಸಂಸ್ಥೆಯಾಗಿದೆ, ಇದು ಇಲ್ಲೇ ಉಳಿಯಬೇಕು, ಮತ್ತು ಇದಕ್ಕೆ ಪೂರಕವಾಗುವ ಭವಿಷ್ಯದ ಎಲ್ಲ ಸಂಸ್ಥೆಗಳನ್ನು ನಮ್ಮ ರಾಜ್ಯದಲ್ಲೇ ಬೆಳೆಸುತ್ತೇವೆ, ಅಭಿವೃದ್ಧಿಪಡಿಸುತ್ತೇವೆ ಅಂತ ರಾಜ್ಯ ಸರ್ಕಾರವು ಪದೇಪದೆ ಕೇಂದ್ರ ಸರ್ಕಾರಕ್ಕೆ ಹೇಳಬೇಕು, ಮೊನ್ನೆ ನಡೆದ ನೀತಿ ಅಯೋಗದ ಸಭೆಯಲ್ಲಿ ಕರ್ನಾಟಕದ ನಿಲುವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸ್ಪಷ್ಟಪಡಿಸುವ ಉತ್ತಮ ಅವಕಾಶ ಸಿದ್ದರಾಮಯ್ಯನವರಿಗಿತ್ತು, ಅದರೆ ಅವರು ಸಭೆಗೆ ಗೈರುಹಾಜರಾಗಿ ಆ ಅವಕಾಶವನ್ನು ಕಳೆದುಕೊಂಡರು, ಸಭೆಗೆ ಅವರು ಯಾಕೆ ಹೋಗಲಿಲ್ಲ ಅನ್ನೋದು ಕನ್ನಡಿಗರನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ ಎಂದು ಯದುವೀರ್ ಹೇಳಿದರು.
ಇದನ್ನೂ ಓದಿ: ಡಿಆರ್ಡಿಒ, ಇಸ್ರೋ ಸೇರಿದಂತೆ ಬೆಂಗಳೂರಿನ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಳ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ