ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ಗೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅದ್ದೂರಿ ಸ್ವಾಗತ
ಲಂಡನ್ನ ಟೇಟ್ ಮಾಡರ್ನ್ ಗ್ಯಾಲರಿಯಲ್ಲಿ ಮೇ 20 ರಂದು ತಮ್ಮ ಕಥಾಸಂಕಲನಕ್ಕೆ ಬೂಕರ್ ಪ್ರಶಸ್ತಿ ಘೋಷಣೆಯಾದಾಗ ಬಾನು ಮುಷ್ತಾಕ್ ಅಲ್ಲೇ ಇದ್ದರು. ಬೂಕರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡ ಮೊದಲ ಕನ್ನಡಿಗರೆಂಬ ಹಿರಿಮೆಗೂ ಬಾನು ಪಾತ್ರರಾಗಿದ್ದಾರೆ. ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಯು ₹ 51 ಲಕ್ಷಗಳ ನಗದು ಪುರಸ್ಕಾರವನ್ನು ಒಳಗೊಂಡಿದೆ. ಅನುವಾದಕಿ ದೀಪಾ ಬಶ್ತಿ ಅವರಿಗೂ ಅಷ್ಟೇ ಮೊತ್ತದ ಹಣ ಸಿಕ್ಕಿದೆ.
ಬೆಂಗಳೂರು, ಮೇ 28: ಕನ್ನಡದ ಹಿರಿಮೆ ಗರಿಮೆಯನ್ನು ಬಾನೆತ್ತರಕ್ಕೆ ಕೊಂಡೊಯ್ದಿರುವ ಕತೆಗಾರ್ತಿ, ಸಾಮಾಜಿಕ ಹೋರಾಟಗಾರ್ತಿ ಮತ್ತು ವಕೀಲೆ ಬಾನು ಮುಷ್ತಾಕ್ ಅವರು ಇಂದು ಮುಂಬೈಯಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (KIA Bengaluru) ಬಂದಿಳಿದಾಗ ಅದ್ದೂರಿ ಮತ್ತು ವಿಶಿಷ್ಟವಾಗಿ ಸ್ವಾಗತಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು, ಕನ್ನಡಾಭಿಮನಿಗಳು, ಜಾನಪದ ಕಲೆಗಳನ್ನು ಪ್ರತಿನಿಧಿಸುವ ಕಲಾವಿದರು ಮತ್ತು ಏರ್ಪೋರ್ಟ್ ಅಧಿಕಾರಿಗಳು ಹಾರ್ಟ್ ಲ್ಯಾಂಪ್ ಕಥಾಸಂಕಲನಕ್ಕಾಗಿ ಪ್ರತಿಷ್ಠಿತ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿಯನ್ನು ಗೆದ್ದಿರುವ ಬಾನು ಮುಷ್ತಾಕ್ ಅವರನ್ನು ಹಾರ್ದಿಕವಾಗಿ ಬರಮಾಡಿಕೊಂಡರು.
ಇದನ್ನೂ ಓದಿ:ಬಾನು ಮುಷ್ತಾಕ್ ಬೂಕರ್ ಪಡೆದ ನೆಪದಲ್ಲಿ ಎರಡು ಮಾತು: ಡಾ. ಟಿಎಸ್ ಗೊರವರ ಬರಹ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

