ಕರ್ನಾಟಕದಲ್ಲಿ ಕಮಲ್ ಹಾಸನ್ ಚಿತ್ರಗಳ ಪ್ರದರ್ಶನಕ್ಕೆ ಅವಕಾಶ ನೀಡಲ್ಲ: ವಾಟಾಳ್ ನಾಗರಾಜ್
ಕಮಲ ಹಾಸನ್ ಕನ್ನಡ ಭಾಷೆಯ ಬಗ್ಗೆ ಮಾತಾಡಿದ್ದು ದುರಹಂಕಾರ ಮತ್ತು ಕೆಟ್ಟ ಚಿಂತನೆ, ರಾಜ್ಯದಲ್ಲಿ ಪರಭಾಷಿಕರ ಹಾವಳಿ ಹೆಚ್ಚುತ್ತಿದೆ, ರಾಜ್ಯದ ಎಲ್ಲ ಭಾಗಗಳಲ್ಲಿ ಪಾನಿ ಪೂರಿ ಮಾರುವವರೆಲ್ಲ ಬಿಹಾರಿಗಳು, ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಪರಭಾಷಿಕರು ಮತ್ತು ರಾಜ್ಯದಿಂದ ಹೊರಗಿರುವ 2 ಕೋಟಿ ಕನ್ನಡಿಗರ ಬಗ್ಗೆ ಚಿಂತನೆ ಮಾಡಲೇಬೇಕಿದೆ ಎಂದು ನಾಗರಾಜ್ ಹೇಳಿದರು.
ಬೆಂಗಳೂರು, ಮೇ 28: ಕನ್ನಡ ಭಾಷೆಯ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿರುವ ಬಹುಭಾಷಾ ನಟ ಕಮಲ್ ಹಾಸನ್ (Kamal Hassan) ಅವರ ‘ಥಗ್ ಲೈಫ್’ ಚಿತ್ರ ಕರ್ನಾಟಕದಲ್ಲಿ ಬಿಡುಗಡೆ ಆಗಲು ಬಿಡೋದಿಲ್ಲ ಎಂದು ಹಿರಿಯ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದರು. ನಮ್ಮ ವರದಿಗಾರನೊಂದಿಗೆ ಮಾತಾಡಿದ ಅವರು, ಒಬ್ಬ ಕಲಾವಿದನಾಗು ಅವರಿಗೆ ಎಲ್ಲಿ, ಏನು ಮತ್ತು ಹೇಗೆ ಮಾತಾಡಬೇಕು ಅನ್ನೋದು ಗೊತ್ತಿಲ್ಲ, ಅವರು ಆಡಿದ ಮಾತು ಇಡೀ ಕನ್ನಡನಾಡಿನ ಜನತೆಗೆ ಎಸಗಿದ ಅಪಮಾನವಾಗಿದೆ, ಹಾಗಾಗಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಅವರ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ನಾಗರಾಜ್ ಹೇಳಿದರು. ಜೂನ್ 5ರಂದು ಅವರ ಸಿನಿಮಾವೇನಾದರರೂ ಬೆಂಗಳೂರಲ್ಲಿ ಬಿಡುಗಡೆಯಾದರೆ ಕನ್ನಡಪರ ಸಂಘಟನೆಗಳು ಥೇಟರ್ ಗಳ ಮುಂದೆ ಧರಣಿ ನಡೆಸಿ ಚಿತ್ರದ ಪ್ರದರ್ಶನ ನಿಲ್ಲಿಸಲಿವೆ ಎಂದು ನಾಗರಾಜ್ ಹೇಳಿದರು.
ಇದನ್ನೂ ಓದಿ: ಭಾಷೆಯ ಬಗ್ಗೆ ಮಾತನಾಡುವ ಅರ್ಹತೆ ನನಗಿಲ್ಲ: ವಿವಾದದ ಬಗ್ಗೆ ಕಮಲ್ ಹಾಸನ್ ಸ್ಪಷ್ಟನೆ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ