ಕನ್ನಡಿಗರ ಆಗಸವನ್ನು ಅಸಂಖ್ಯಾತ ಮಿಂಚುಗುಳುಗಳಿಂದ ಬೆಳಗಿಸಿ ಸಂಭ್ರಮಿಸುವಂತೆ ಮಾಡಿದ ಬಾನು ಮುಷ್ತಾಕ್
ಎಪ್ಪತ್ತರ ದಶಕದಿಂದ ತಮ್ಮನ್ನು ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಭಾನು ಮುಷ್ತಾಕ್ ನಿರ್ಭೀತಿಯಿಂದ ಮಹಿಳೆಯರ ಹಕ್ಕು ಮತ್ತು ಸ್ವಾತಂತ್ರ್ಯವನ್ನು ತಮ್ಮ ಬರಹಗಳಲ್ಲಿ ಪ್ರತಿಪಾದಿಸುತ್ತಿದ್ದಾರೆ ಮತ್ತು ಶೋಷಿತ ವರ್ಗಗಳ ಅದರಲ್ಲೂ ವಿಶೇಷವಾಗಿ ತಮ್ಮ ಸಮುದಾಯದ ಮಹಿಳೆಯರಿಗಾಗಿ ಹೋರಾಡುತ್ತಿದ್ದಾರೆ. ಅದಕ್ಕಾಗಿ ಅವರು ಎದುರಿಸಿದ ತೊಂದರೆ, ಮಾನಸಿಕ ಕ್ಷೋಬೆ, ಸಾಮಾಜಿಕ ಬಹಿಷ್ಕಾರ, ಬೆದರಿಕೆ-ಎಲ್ಲವೂ ಅವರ ಕತೆಗಳಲ್ಲಿ ಚಿತ್ರಿತವಾಗಿವೆ.
ಬೆಂಗಳೂರು, ಮೇ 21: ಸಮಸ್ತ ಕನ್ನಡಿಗರಿಗೆ ಮತ್ತು ಭಾರತೀಯರಿಗೆ ಇದು ಬಹಳ ಸಂತಸದ ಮತ್ತು ರೋಚಕ ಸುದ್ದಿ. ಕನ್ನಡದ ಲೇಖಕಿ, ಕತೆಗಾರ್ತಿ, ವಕೀಲೆ, ಸಾಮಾಜಿಕ ಕಾರ್ಯಕರ್ತೆ ಬಾನು ಮುಷ್ತಾಕ್ ಅವರಿಗೆ 2025 ಸಾಲಿನ ಅಂತರಾಷ್ಟ್ರೀಯ ಬೂಕರ್ (International Booker Prize 2025) ಪ್ರಶಸ್ತಿ ಲಭಿಸಿದೆ. ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಗೆ ಪಾತ್ರರಾಗಿರುವ ಮೊದಲ ಕನ್ನಡಿಗರೆಂಬ ಹೆಮ್ಮೆಗೂ ಬಾನು ಮುಷ್ತಾಕ್ ಪಾತ್ರರಾಗಿದ್ದಾರೆ. ನಿನ್ನೆ ಲಂಡನ್ನ ಟೇಟ್ ಮಾಡರ್ನ್ ಗ್ಯಾಲರಿಯಲ್ಲಿ ಹಾಜರಿದ್ದ 77-ವರ್ಷ ವಯಸ್ಸಿನ ಬಾನು ಅವರ ಕೃತಿ ಹಾರ್ಟ್ ಲ್ಯಾಂಪ್ಗೆ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ ಅವರ ಕಣ್ಣಲ್ಲಿ ಆನಂದ ಭಾಷ್ಪ! ‘ಅಸಂಖ್ಯಾತ ಮಿಂಚುಹುಳುಗಳು ಆಗಸವನ್ನು ಪ್ರಕಾಶಮಾನಗೊಳಿಸಿದಂಥ ಕ್ಷಣವಿದು, ಈ ಗೌರವವನ್ನು ನಾನು ವೈಯಕ್ತಿಕವಾಗಿ ಅಲ್ಲ, ಇನ್ನೂ ಅನೇಕರ ಸಾಮೂಹಿಕ ಧ್ವನಿಯಾಗಿ ಸ್ವೀಕರಿಸುತ್ತಿದ್ದೇನೆ,’ ಎಂದು ಅವರು ಹೇಳಿದರು.
ಇದನ್ನೂ ಓದಿ: ಹಾರ್ಟ್ ಲ್ಯಾಂಪ್ ಮೂಲಕ ಕನ್ನಡದ ಸತ್ವವನ್ನು ಜಾಗತಿಕ ಮಟ್ಟದಲ್ಲಿ ಜನರಿಗೆ ತಲುಪಿಸುವ ಅವಕಾಶ: ಬಾನು ಮುಷ್ತಾಕ್
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

