ಆಂಧ್ರ ಪ್ರದೇಶ ಡಿಸಿಎಂ ಪವನ್ ಕಲ್ಯಾಣ್ ಮನವಿ ಮೇರೆಗೆ ಇಂದು ಕರ್ನಾಟಕದ 4 ಆನೆಗಳು ಹಸ್ತಾಂತರ
ಪ್ರಾಯಶಃ ಇವತ್ತೇ ಆನೆಗಳನ್ನು ಆಂಧ್ರ ಪ್ರದೇಶಕ್ಕೆ ಟ್ರಕ್ಕುಗಳಲ್ಲಿ ರವಾನಿಸಬಹುದು. ಎಲ್ಲ ನಾಲ್ಕು ಗಂಡಾನೆಗಳೇ ಅಲ್ಲಿಗೆ ಹೋಗುತ್ತಿರುವುದು ವಿಶೇಷ. ಆನೆಗಳ ಹಿಂಡನ್ನು ಪಳಗಿಸುವ ಕೆಲಸಕ್ಕೆ ಸಲಗಗಳೇ ಬೇಕಾಗುತ್ತವೆ. ಅಂದಹಾಗೆ, ಆನೆಗಳನ್ನು ನೆರೆರಾಜ್ಯಕ್ಕೆ ಕಳಿಸುತ್ತಿರೋದು ತಾತ್ಕಾಲಿಕ ಏರ್ಪಾಟೋ ಅಥವಾ ಶಾಶ್ವತವಾಗಿ ಕಳಿಸಲಾಗುತ್ತಿದೆಯೋ ಅನ್ನೋದು ಇನ್ನೂ ಗೊತ್ತಾಗಿಲ್ಲ.
ಬೆಂಗಳೂರು, ಮೇ 21: ಇದು ದಸರಾ ಮಹೋತ್ಸವ ಅಲ್ಲ, ಬ್ಯಾಗ್ರೌಂಡ್ ನಲ್ಲಿ ಕಾಣುತ್ತಿರೋದು ಮೈಸೂರು ಕೂಡ ಅಲ್ಲ, ಅದ್ಯಾಕೆ ಊರಲ್ಲಿ ಅನೆಗಳು ಅಂತ ನೀವು ಆಶ್ಚರ್ಯಚಕಿತರಾಗಿದ್ದರೆ ಅದು ತಪ್ಪಲ್ಲ. ಯಾಕೆಂದರೆ ಒಂದಲ್ಲ ನಾಲ್ಕು ಆನೆಗಳನ್ನು ಶಿಬಿರದಿಂದ (elephant camp) ವಿಧಾನಸೌಧದ ಆವರಣಕ್ಕೆ ತಂದು ಕಟ್ಟಿಹಾಕಲಾಗಿದೆ. ವಿಷಯವೇನೆಂದರೆ ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ತಮ್ಮ ರಾಜ್ಯದ ಒಂದಷ್ಟು ಆನೆಗಳನ್ನು ಪಳಗಿಸಲು ಕರ್ನಾಟಕದಿಂದ ಅನೆಗಳನ್ನು ಕೇಳಿದ್ದರು. ಅವರ ಮನವಿಗೆ ಒಪ್ಪಿರುವ ಕರ್ನಾಟಕ ಸರ್ಕಾರ ಜ್ಯೂನಿಯರ್ ಅಭಿಮನ್ಯು, ಕೃಷ್ಣಾ, ದೇವಾ ಮತ್ತು ರಂಜನ್ ಹೆಸರಿನ 4 ಅನೆಗಳನ್ನು ಹಸ್ತಾಂತರಿಸುತ್ತಿದೆ.
ಇದನ್ನೂ ಓದಿ: ಹತ್ತಿರ ಕರೆದು ಆಂಧ್ರ ಡಿಸಿಎಂ ಪವನ್ ಕಲ್ಯಾಣ್ಗೆ ಚಾಕೋಲೇಟ್ ಕೊಟ್ಟ ಪ್ರಧಾನಿ ಮೋದಿ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ