AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಲಿವುಡ್ ಹೀರೋಗಳಿಂದ ದೇಶಭಕ್ತಿ ನಿರೀಕ್ಷಿಸಬೇಡಿ: ಗರಂ ಆದ ಪವನ್ ಕಲ್ಯಾಣ್

ಯಾವುದೇ ಮುಲಾಜಿಲ್ಲದೇ ಬಾಲಿವುಡ್ ಹೀರೋಗಳನ್ನು ಪವನ್ ಕಲ್ಯಾಣ್ ಅವರು ಟೀಕಿಸಿದ್ದಾರೆ. ‘ಅವರು ಮನರಂಜನೆ ನೀಡುವವರು ಮಾತ್ರ. ನಿಜವಾದ ಹೀರೋಗಳಲ್ಲ’ ಎಂದು ಹೇಳಿದ್ದಾರೆ. ಹಿಂದಿ ಚಿತ್ರರಂಗದ ನಟರಿಂದ ದೇಶಭಕ್ತಿಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಪವನ್ ಕಲ್ಯಾಣ್ ಗುಡುಗಿದ್ದಾರೆ. ಆ ಬಗ್ಗೆ ಇಲ್ಲಿದೆ ಇನ್ನಷ್ಟು ವಿವರ..

ಬಾಲಿವುಡ್ ಹೀರೋಗಳಿಂದ ದೇಶಭಕ್ತಿ ನಿರೀಕ್ಷಿಸಬೇಡಿ: ಗರಂ ಆದ ಪವನ್ ಕಲ್ಯಾಣ್
Pawan Kalyan
ಮದನ್​ ಕುಮಾರ್​
|

Updated on: May 18, 2025 | 1:10 PM

Share

ಟಾಲಿವುಡ್ ನಟ, ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ (Pawan Kalyan) ಅವರು ಹಿಂದಿ ಚಿತ್ರರಂಗದ ಹೀರೋಗಳ ಬಗ್ಗೆ ಗರಂ ಆಗಿ ಮಾತನಾಡಿದ್ದಾರೆ. ವಿಜಯವಾಡದಲ್ಲಿ ತಿರಂಗ ಯಾತ್ರೆಯಲ್ಲಿ ಭಾಗಿಯಾದ ಅವರು ಬಾಲಿವುಡ್ (Bollywood) ನಟರ ಕುರಿತು ಆಕ್ಷೇಪ ವ್ಯಕ್ತಪಡಿಸಿದರು. ಅವರು ಮಾತನಾಡಿದ ವಿಡಿಯೋ ವೈರಲ್ ಆಗುತ್ತಿದೆ. ದೇಶಭಕ್ತಿಯ ವಿಚಾರದಲ್ಲಿ ಬಾಲಿವುಡ್ ಹೀರೋಗಳು ಮಾದರಿ ಅಲ್ಲ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ. ‘ಆಪರೇಷನ್ ಸಿಂದೂರ್’ (Operation Sindoor) ಬಗ್ಗೆ ಬಿ-ಟೌನ್ ನಟರು ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿದ್ದನ್ನು ಉಲ್ಲೇಖಿಸಿ ಪವನ್ ಕಲ್ಯಾಣ್ ಈ ರೀತಿ ಮಾತನಾಡಿದ್ದಾರೆ.

‘ಬಾಲಿವುಡ್ ಸ್ಟಾರ್​ ನಟರು ಆಪರೇಷನ್ ಸಿಂದೂರ್ ಬಗ್ಗೆ ಒಂದೇ ಒಂದು ಮಾತನ್ನೂ ಹೇಳಲಿಲ್ಲ. ಅವರಿಂದ ದೇಶಭಕ್ತಿ ನಿರೀಕ್ಷಿಸಬೇಡಿ. ಅವರು ನಮ್ಮ ದೇಶವನ್ನು ನಡೆಸುವುದಿಲ್ಲ. ಅವರು ಕೇವಲ ಮನರಂಜನೆ ನೀಡುವವರು ಮಾತ್ರ. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಮುರಳಿ ನಾಯಕ್ ಅವರಂತಹ ಹುತಾತ್ಮರು ಮಾತ್ರ ನಿಜವಾದ ದೇಶಭಕ್ತರು. ಅಂತಹ ಹೀರೋಗಳಿಂದ ನಾವು ಸ್ಫೂರ್ತಿ ಪಡೆಯಬೇಕು’ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.

ಭಾರತದ ಒಳಗೆ ನಡೆಯುವ ಭಯೋತ್ಪಾದಕ ಚಟುವಟಿಕೆಗಳಿಗೆ ಪಾಕಿಸ್ತಾನ ನೇರವಾಗಿ ಬೆಂಬಲ ನೀಡುತ್ತಿರುವುದು ಬೆಳಕಿಗೆ ಬಂದಿದೆ. ಆ ಬಗ್ಗೆಯೂ ಪವನ್ ಕಲ್ಯಾಣ್ ಅವರು ಮಾತಾಡಿದ್ದಾರೆ. ‘ಕೊಯಮತ್ತೂರ್ ಮತ್ತು ಹೈದರಾಬಾದ್​ನಲ್ಲಿ ಹಲವು ವರ್ಷಗಳ ಹಿಂದೆ ಬಾಂಬ್ ಬ್ಲಾಸ್ಟ್ ಆಗಿದ್ದರ ಹಿಂದೆ ಪಾಕಿಸ್ತಾನದ ಕೈವಾಡ ಇತ್ತು. ಈಗ ಆಪರೇಷನ್ ಸಿಂದೂರ್ ಮೂಲಕ ಭಾರತದ ಸೇನೆಯು ಪಾಕಿಸ್ತಾನಕ್ಕೆ ಸರಿಯಾದ ಪಾಠ ಕಲಿಸಿದೆ. ಈ ಸಂದರ್ಭದಲ್ಲಿ ಇಡೀ ದೇಶ ಒಗ್ಗಟ್ಟಿನಿಂದ ನಮ್ಮ ಸೈನ್ಯದ ಜೊತೆ ನಿಲ್ಲಬೇಕು’ ಎಂದಿದ್ದಾರೆ ಪವನ್ ಕಲ್ಯಾಣ್.

ಇದನ್ನೂ ಓದಿ
Image
ಅಗ್ನಿ ಅವಘಡದ ಬಳಿಕ ಪವನ್ ಕಲ್ಯಾಣ್ ಮಗನ ಸ್ಥಿತಿ ಹೇಗಿದೆ? ಇಲ್ಲಿದೆ ಮಾಹಿತಿ
Image
ಸಮಸ್ಯೆ ಗಂಭೀರ: ಮಗನ ಆರೋಗ್ಯದ ಬಗ್ಗೆ ಪವನ್ ಕಲ್ಯಾಣ್ ಮಾತು
Image
ಶಾಲೆಯಲ್ಲಿ ಬೆಂಕಿ ಅವಘಡ, ಪವನ್ ಕಲ್ಯಾಣ್ ಪುತ್ರನಿಗೆ ತೀವ್ರ ಗಾಯ
Image
ಪವನ್​ ಕಲ್ಯಾಣ್​ ಚಿತ್ರವನ್ನು ತನ್ನ ರಕ್ತದಲ್ಲಿ ಬಿಡಿಸಿದ ಕಟ್ಟಾಭಿಮಾನಿ

ಪಹಲ್ಗಾಮ್​ನಲ್ಲಿ ಪಾಕ್ ಉಗ್ರರು ನಡೆಸಿದ ದಾಳಿಗೆ ಭಾರತದ ಅನೇಕರು ಮೃತರಾದರು. ಅದಕ್ಕೆ ಪ್ರತಿಯಾಗಿ ಭಾರತ ‘ಆಪರೇಷನ್ ಸಿಂದೂರ್’ ಹೆಸರಿನಲ್ಲಿ ಪಾಕ್ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿತು. ಈ ಘಟನೆ ಬಗ್ಗೆ ಬಾಲಿವುಡ್​ನ ಹಲವರು ಮಾತನಾಡಲೇ ಇಲ್ಲ. ಟೀಕೆ ಕೇಳಿಬಂದ ಬಳಿಕ ಕೆಲವು ಹೀರೋಗಳು ತಡವಾಗಿ ಪ್ರತಿಕ್ರಿಯಿಸಿದರು.

ಇದನ್ನೂ ಓದಿ: ಸಿನಿಮಾಗೆ ಬಹಿಷ್ಕಾರದ ಭಯ; ರಾಷ್ಟ್ರ ಧ್ವಜದ ಡಿಪಿ ಹಾಕಿದ ಆಮಿರ್ ಖಾನ್ ನಿರ್ಮಾಣ ಸಂಸ್ಥೆ

ಪಹಲ್ಗಾಮ್ ಉಗ್ರರ ದಾಳಿ ಹಾಗೂ ಆಪರೇಷನ್ ಸಿಂದೂರ್ ಬಗ್ಗೆ ಮೌನ ವಹಿಸಿದ ಹೀರೋಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಟೀಕೆ ವ್ಯಕ್ತವಾಗಿದೆ. ಅಂತಹ ಹೀರೀಗಳ ಸಿನಿಮಾಗಳನ್ನು ಬಹಿಷ್ಕಾರ ಮಾಡಬೇಕು ಎಂಬ ಒತ್ತಾಯ ಕೂಡ ಕೇಳಿಬರುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್