ಹಾರ್ಟ್ ಲ್ಯಾಂಪ್ ಮೂಲಕ ಕನ್ನಡದ ಸತ್ವವನ್ನು ಜಾಗತಿಕ ಮಟ್ಟದಲ್ಲಿ ಜನರಿಗೆ ತಲುಪಿಸುವ ಅವಕಾಶ: ಬಾನು ಮುಷ್ತಾಕ್
ಬಾನು ಮುಷ್ತಾಕ್ 1990ರಿಂದ 2023 ರವರೆಗೆ ಅನೇಕ ಕತೆಗಳನ್ನು ಬರೆದಿದ್ದು ಅವು ಬೇರೆ ಬೇರೆ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಮೈಸೂರುಅಭಿರುಚಿ ಪ್ರಕಾಶನ ಸಂಸ್ಥೆಯ ಗಣಪತಿ ಅವರು ಬಾನು ಅವರ ಸಮಾರು 50 ಕತೆಗಳನ್ನು ಆರಿಸಿಕೊಂಡು ಹಸೀನಾ ಮತ್ತು ಇತರ ಕತೆಗಳು ಅಂತ ಕಥಾಸಂಕಲನ ಪ್ರಕಟಿಸಿದ್ದರು. ಅವುಗಳ ಪೈಕಿ 12 ಕತೆಗಳನ್ನು ದೀಪಾ ಬಸ್ತಿ ಇಂಗ್ಲಿಷ್ ಭಾಷೆಗೆ ಅನುವಾದ ಮಾಡಿ ಹಾರ್ಟ್ ಲ್ಯಾಂಪ್ ಹೆಸರಲ್ಲಿ ಕಥಾ ಸಂಕಲನ ಪ್ರಕಟಿಸಿದ್ದಾರೆ. ಬೂಕರ್ ಪ್ರಶಸ್ತಿಗೆ ಆಯ್ಕೆಯಾಗಿರೋದು ಇದೇ ಕಥಾ ಸಂಕಲನ.
ಹಾಸನ, ಏಪ್ರಿಲ್ 9: ಹಾಸನದ ಸಾಹಿತಿ, ಸಾಮಾಜಿಕ ಕಾರ್ಯಕರ್ತೆ, ವಕೀಲೆ ಮತ್ತು ಪತ್ರಕರ್ತೆಯಾಗಿಯೂ ಕೆಲಸ ಮಾಡಿರುವ ಬಾನು ಮುಷ್ತಾಕ್ ಅವರು ವಿಎಸ್ ನೈಪಾಲ್, ಸಲ್ಮಾನ್ ರಷ್ದೀ, ಅರವಿಂದ ಅಡಿಗ, ಕಿರಣ್ ದೇಸಾಯಿ, ಆರುಂಧತಿ ರಾಯ್ ಮತ್ತು ಗೀತಾಂಜಲಿ ಶ್ರೀ ಅವರ ಎಲೀಟ್ ಗುಂಪಿಗೆ ಸೇರುವರೇ? ಇವರೆಲ್ಲ ಪ್ರತಿಷ್ಠಿತ ಬೂಕರ್ ಸಾಹಿತ್ಯಿಕ ಪ್ರಶಸ್ತಿಗೆ (International Booker prize) ಭಾಜನರಾದವರು. ನಿನ್ನೆ ವರದಿಯಾಗಿರುವಂತೆ ಈ ಸಾಲಿನ ಪ್ರಶಸ್ತಿಗಾಗಿ ಶಾರ್ಟ್ಲಿಸ್ಟ್ ಆಗಿರುವ 6 ಪುಸ್ತಕಗಳಲ್ಲಿ ಬಾನು ಮುಷ್ತಾಕ್ ಅವರ ಹಾರ್ಟ್ ಲ್ಯಾಂಪ್ ಕಥಾ ಸಂಕಲನವೂ ಸೇರಿದೆ. ನಮ್ಮ ಹಾಸನದ ವರದಿಗಾರನೊಂದಿಗೆ ನಡೆಸಿರುವ ಮುಕ್ತ ಮಾತುಕತೆಯಲ್ಲಿ ಬಾನು ಮುಷ್ತಾಕ್ ಅವರು ಹಾರ್ಟ್ ಲ್ಯಾಂಪ್ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಮಾತಾಡಿದ್ದಾರೆ.
ಇದನ್ನೂ ಓದಿ: ಬೂಕರ್ ಪ್ರಶಸ್ತಿಯ ಶಾರ್ಟ್ ಲಿಸ್ಟ್ನಲ್ಲಿ ಸ್ಥಾನ ಪಡೆದ ಹಾಸನದ ಸಾಹಿತಿ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ