ಬೂಕರ್ ಪ್ರಶಸ್ತಿಯ ಶಾರ್ಟ್ ಲಿಸ್ಟ್ನಲ್ಲಿ ಸ್ಥಾನ ಪಡೆದ ಹಾಸನದ ಸಾಹಿತಿ
ಹಾಸನದ ಬಾನು ಮುಷ್ತಾಕ್ ಅವರ "ಹಸಿನಾ ಮತ್ತು ಇತರ ಕತೆಗಳು" ಕೃತಿಯ ಇಂಗ್ಲಿಷ್ ಅನುವಾದ "ಹಾರ್ಟ್ ಲ್ಯಾಂಪ್" ಪ್ರತಿಷ್ಠಿತ ಬುಕ್ಕರ್ ಪ್ರಶಸ್ತಿಯ ಶಾರ್ಟ್‌ಲಿಸ್ಟ್‌ನಲ್ಲಿ ಸ್ಥಾನ ಪಡೆದಿದೆ. ಇದು ಬುಕ್ಕರ್ ಪ್ರಶಸ್ತಿಯ ಶಾರ್ಟ್‌ಲಿಸ್ಟ್‌ನಲ್ಲಿ ಸ್ಥಾನ ಪಡೆದ ಮೊದಲ ಕನ್ನಡ ಕೃತಿಯಾಗಿದೆ. ಮೇ 21 ರಂದು ಲಂಡನ್ನಲ್ಲಿ ವಿಜೇತರನ್ನು ಘೋಷಿಸಲಾಗುವುದು.

ಹಾಸನ, ಏಪ್ರಿಲ್ 08: ಹಾಸನದ (Hassan) ಹಿರಿಯ ಸಾಹಿತಿ, ಖ್ಯಾತ ಲೇಖಕಿ ಬಾನು ಮುಷ್ತಾಕ್ (Banu Mushtaq) ಅವರ “ಹಾರ್ಟ್ ಲ್ಯಾಂಪ್” (Heart Lamp) ಕೃತಿಯು ಪ್ರತಿಷ್ಠಿತ ಬೂಕರ್ ಅವಾರ್ಡ್ ಶಾರ್ಟ್ ಲಿಸ್ಟ್ನಲ್ಲಿ ಸ್ಥಾನ ಪಡೆದಿದೆ. ಈ ಮೂಲಕ ಬೂಕರ್ ಅವಾರ್ಡ್ನ ಶಾರ್ಟ್ ಲಿಸ್ಟ್ನಲ್ಲಿ ಸ್ಥಾನ ಪಡೆದ ಕನ್ನಡದ ಮೊದಲ ಸಾಹಿತಿ ಎಂಬ ಹೆಗ್ಗಳಿಕೆಗೆ ಬಾನು ಮುಷ್ತಾಕ್ ಅವರು ಪಾತ್ರವಾಗಿದ್ದಾರೆ. ಬಾನು ಮುಷ್ತಾಕ್ ಅವರ ‘ಹಸಿನಾ ಮತ್ತು ಇತರ ಕತೆಗಳು’ ಕಥಾಸಂಕಲನವನ್ನು ಇಂಗ್ಲೀಷ್ಗೆ ದೀಪಾ ಬಸ್ತಿ ಅವರು “ಹಾರ್ಟ್ ಲ್ಯಾಂಪ್” ಎಂದು ಅನವಾದಿಸಿದ್ದಾರೆ. ಈ ಕೃತಿ ಫೆಬ್ರವರಿ ತಿಂಗಳಲ್ಲಿ ಬೂಕರ್ ಅವಾರ್ಡ್ನ ಲಾಂಗ್ ಲಿಸ್ಟ್ನಲ್ಲಿ ಸ್ಥಾನ ಪಡೆದಿತ್ತು. ಇದೀಗ, ಶಾರ್ಟ್ ಲಿಸ್ಟ್ನಲ್ಲಿ ಸ್ಥಾನ ಪಡೆದಿದೆ.
ಒಟ್ಟು ಬೂಕರ್ ಅವಾರ್ಡ್ಗೆ 153 ಕೃತಿಗಳು ನಿರ್ದೇಶಿತವಾಗಿದ್ದವು. ಇದರಲ್ಲಿ ಬಾನು ಮುಷ್ತಾಕ್ ಅವರ ಹಾರ್ಟ್ ಲ್ಯಾಂಪ್ ಕೃತಿಯೂ ಸೇರಿತ್ತು. ಇದೀಗ ಇದೀಗ ಶಾರ್ಟ್ ಲಿಸ್ಟ್ನಲ್ಲಿ ಆಯ್ಕೆಯಾಗುವ ಮೂಲಕ ಅನುವಾದಿತ ಕೃತಿ ಪ್ರಶಸ್ತಿಯ ಸನಿಹಕ್ಕೆ ತಲುಪಿದೆ. ಸದ್ಯ ಶಾರ್ಟ್ ಲಿಸ್ಟ್ನಲ್ಲಿ ಆರು ಕೃತಿ ಗಳು ಸ್ಥಾನ ಪಡೆದಿವೆ.
ಮೇ 21ರಂದು ಲಂಡನ್ನಲ್ಲಿ ವಿಜೆತ ಕೃತಿಯನ್ನು ಘೋಷಿಸಲಾಗುತ್ತದೆ. ಶಾರ್ಟ್ ಲಿಸ್ಟ್ನಲ್ಲಿ ಆಯ್ಕೆಯಾಗಿರುವ ಎಲ್ಲರನ್ನೂ ಲಂಡನ್ನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಆಹ್ವಾನಿಸಿ, ಪ್ರಶಸ್ತಿಯನ್ನು ಘೋಷಿಸಲಾಗುತ್ತದೆ. ವಿಜೇತರಿಗೆ 50 ಸಾವಿರ ಪೌಂಡ್ ಬಹುಮಾನ ದೊರೆಯಲಿದೆ. ಈ ಪ್ರಶಸ್ತಿ ಕರ್ನಾಟಕಕ್ಕೆ ಲಭಿಸಲಿ ಎಂಬುವುದು ಕನ್ನಡಿಗರ ಆಶಯವಾಗಿದೆ. ಹಾರ್ಟ್ ಲ್ಯಾಂಪ್ ಕಳೆದ ವರ್ಷ ಪೆನ್ ಟ್ರಾನ್ಸಲೇಟ್ಸ್ ಪ್ರಶಸ್ತಿಯನ್ನೂ ಪಡೆದಿತ್ತು.