Video: ಕೋವಿಡ್ ಲಸಿಕೆ ಪಡೆದವರಲ್ಲಿ ಹೃದಯಾಘಾತ ಅಪಾಯ ಕಡಿಮೆ: ಡಾ. ಮೋಹಿತ್ ಗುಪ್ತಾ
ಕೋವಿಡ್ ಲಸಿಕೆ ಪಡೆದವರಲ್ಲಿ ಹೃದಯಾಘಾತ ಅಪಾಯ ಕಡಿಮೆ ಎಂದು ಹೃದ್ರೋಗ ತಜ್ಞ ಡಾ. ಮೋಹಿತ್ ಗುಪ್ತಾ ಹೇಳಿದ್ದಾರೆ. ದೆಹಲಿಯ ಜಿಬಿ ಪಂತ್ ಆಸ್ಪತ್ರೆಯ ಹೃದ್ರೋಗ ತಜ್ಞರಾಗಿರುವ ಗುಪ್ತಾ, ಕೋವಿಡ್ 19 ಲಸಿಕೆಗಳು ಹೃದಯಾಘಾತಕ್ಕೆ ಕಾರಣವಾಗುವುದಿಲ್ಲ, ಬದಲಾಗಿ ಹೃದಯಾಘಾತ ಮತ್ತು ಎಲ್ಲಾ ಕಾರಣಗಳಿಂದ ಉಂಟಾಗುವ ಮರಣದ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಹೇಳಿದ್ದಾರೆ.
ನವದೆಹಲಿ, ಜುಲೈ 03: ಕೋವಿಡ್ ಲಸಿಕೆ ಪಡೆದವರಲ್ಲಿ ಹೃದಯಾಘಾತ ಅಪಾಯ ಕಡಿಮೆ ಎಂದು ಹೃದ್ರೋಗ ತಜ್ಞ ಡಾ. ಮೋಹಿತ್ ಗುಪ್ತಾ ಹೇಳಿದ್ದಾರೆ. ದೆಹಲಿಯ ಜಿಬಿ ಪಂತ್ ಆಸ್ಪತ್ರೆಯ ಹೃದ್ರೋಗ ತಜ್ಞರಾಗಿರುವ ಗುಪ್ತಾ, ಕೋವಿಡ್ 19 ಲಸಿಕೆಗಳು ಹೃದಯಾಘಾತಕ್ಕೆ ಕಾರಣವಾಗುವುದಿಲ್ಲ, ಬದಲಾಗಿ ಹೃದಯಾಘಾತ ಮತ್ತು ಎಲ್ಲಾ ಕಾರಣಗಳಿಂದ ಉಂಟಾಗುವ ಮರಣದ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ಇತ್ತೀಚೆಗೆ ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಸಾರ್ವಜನಿಕ ಕಳವಳ ಹಾಗೂ ಸಾಂಕ್ರಾಮಿಕ ಸಮಯದಲ್ಲಿ ಅನುಮೋದಿಸಲಾದ ಲಸಿಕೆಗಳ ಸುರಕ್ಷತೆ ಬಗ್ಗೆ ಪ್ರಶ್ನೆಗಳು ಎದ್ದಿವೆ. 1,600 ರೋಗಿಗಳ ಮೇಲೆ ಅಧ್ಯಯನ ನಡೆಸಿದ್ದೇವೆ. ಕೋವಿಡ್ ಲಸಿಕೆ ಪಡೆದ ಮತ್ತು ಅದನ್ನು ಪಡೆಯದ 1,600 ಹೃದಯಾಘಾತದಿಂದ ಬಳಲುತ್ತಿರುವ ರೋಗಿಗಳ ಮೇಲೆ ನಾವು ನಡೆಸಿದ ಅಧ್ಯಯನದಲ್ಲಿ, ಕೋವಿಡ್ ಲಸಿಕೆ ಪಡೆದವರಿಗೆ ಹೃದಯಾಘಾತ, ಎಲ್ಲಾ ಕಾರಣಗಳಿಂದ ಮರಣ ಪ್ರಮಾಣ ಮತ್ತು ಹಠಾತ್ ಸಾವುಗಳು ಸಂಭವಿಸುವ ಸಾಧ್ಯತೆಗಳು ಕಡಿಮೆಯಾಗುವುದು ಎಂಬುದು ತಿಳಿದುಬಂದಿದೆ ಎಂದು ಗುಪ್ತಾ ಹೇಳಿದ್ದಾರೆ. ಹಾಸನ ಜಿಲ್ಲೆಯೊಂದರಲ್ಲಿ 25ಕ್ಕೂ ಹೆಚ್ಚಿನ ಮಂದಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ