ಒಳ ಮೀಸಲಾತಿ ಸಮೀಕ್ಷೆಗೆ ಹೋದ ಪಾಲಿಕೆ ಸಿಬ್ಬಂದಿಯಿಂದ ಗೂಂಡಾವರ್ತನೆ, ನಿವಾಸಿಗಳ ಮೇಲೆ ಹಲ್ಲೆ
ಯಾವ ಪುರುಷಾರ್ಥಕ್ಕಾಗಿ ಸರ್ಕಾರ ಸಮೀಕ್ಷೆಯನ್ನು ಗೂಂಡಾಗಳಿಂದ ಮಾಡಿಸುತ್ತಿದೆ ಎಂದು ಬೆಂಗಳೂರು ಜನ ಪ್ರಶ್ನಿಸುತ್ತಿದ್ದಾರೆ. ಸಮೀಕ್ಷೆಗೆ ಕಳಿಸಿರುವ ಸಿಬ್ಬಂದಿಗೆ ಜನರೊಂದಿಗೆ ಹೇಗೆ ವರ್ತಿಸಬೇಕೆಂದು ತರಬೇತಿಯೇನಾದರೂ ನೀಡಲಾಗಿದೆಯೇ ಅನ್ನೋದು ಮುಖ್ಯ ಪ್ರಶ್ನೆ. ಸರ್ವೇ ಮಾಡದೆ ಮನೆಗಳಿಗೆ ಸ್ಟಿಕ್ಕರ್ ಅಂಟಿಸುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಕೇಳಿಬರುತ್ತಿವೆ. ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ.
ಬೆಂಗಳೂರು, ಜುಲೈ 3: ಒಳಮೀಸಲಾತಿ ಸರ್ವೇ ಒಂದು ಮಹತ್ತರ ಮತ್ತು ಸೂಕ್ಷ್ಮ ಕೆಲಸ, ಇದನ್ನು ಬಿಬಿಎಂಪಿಯ ಕೆಲ ಸಿಬ್ಬಂದಿ (BBMP staff) ಅದರ ಮಹತ್ವ ಅರಿಯದೆ ಸರ್ವೆ ಹೋದ ಕಡೆ ಅಲ್ಲಿನ ಮನೆಗಳಲ್ಲಿ ವಾಸವಾಗಿರುವ ಜನರನ್ನು ಮಾತಾಡಿಸದೆ, ವಿವರಗಳನ್ನು ಪಡೆಯದೆ ಸರ್ವೇ ಆಗಿದೆ ಎಂಬ ಸ್ಟಿಕ್ಕರ್ ಮೆತ್ತಿ ಹೋಗುತ್ತಿದ್ದಾರೆ. ಏನನ್ನೂ ವಿಚಾರಿಸದೆ ಸ್ಟಿಕ್ಕರ್ ಅಂಟಿಸುತ್ತಿದ್ದೀರಲ್ಲ ಸ್ವಾಮಿ ಅಂತ ನಿವಾಸಿಗಳು ಪ್ರಶ್ನಿಸಿದರೆ ಪಾಲಿಕೆ ಸಿಬ್ಬಂದಿ ಹಲ್ಲೆ ನಡೆಸಲು ಮುಂದಾಗಿ ಗೂಂಡಾಗಿರಿಯನ್ನು ಪ್ರದರ್ಶಿಸುತ್ತಿದ್ದಾರೆ. ಅಂಥದೊಂದು ಘಟನೆ ನಗರದ ಸಾರ್ವಭೌಮನಗರದಲ್ಲಿ ನಡೆದಿದ್ದು ಸಿಸಿಟಿವಿ ಕೆಮೆರಾವೊಂದರಲ್ಲಿ ದೃಶ್ಯ ಸೆರೆಯಾಗಿದೆ.
ಇದನ್ನೂ ಓದಿ: ಎಸ್ಸಿ ಒಳ ಮೀಸಲಾತಿ ಜಾರಿ ಮಾಡಿದ ಮೊದಲ ರಾಜ್ಯ ಎನಿಸಿಕೊಂಡ ತೆಲಂಗಾಣ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
Latest Videos

ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು

‘ನಿದ್ರಾದೇವಿ ನೆಕ್ಸ್ಟ್ ಡೋರ್’ ವೇದಿಕೆ ಮೇಲೆ ಭಾಷೆ ಬಗ್ಗೆ ಗಣೇಶ ಮಾತು

ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ

ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
