ತನಗೆ ಅತ್ಯಾಚಾರವಾಗಿದೆ ಎಂದು ಬರೆದಿಟ್ಟಿದ್ದ ಡೆತ್​ನೋಟ್ ಆತ್ಮಹತ್ಯೆ‌ಯ 15 ದಿನದ ನಂತರ ಮನೆಯಲ್ಲಿ ಪತ್ತೆ

ಚನ್ನಪಟ್ಟಣದಲ್ಲಿ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಸಂಬಂಧಿಸಿ 15 ದಿನದ ಬಳಿಕ ಯುವತಿಯ ಮನೆಯಲ್ಲಿ ಡೆತ್‌ನೋಟ್ ಪತ್ತೆಯಾಗಿದೆ. ನನ್ನ ಮೇಲೆ ಅತ್ಯಾಚಾರವಾಗಿದೆ. ತನ್ನ ಸಾವಿಗೆ ಲೋಕೇಶ್ ಕಾರಣ ಎಂದು ಮೃತ ಯುವತಿ ಡೆತ್ ನೋಟ್ನಲ್ಲಿ ಉಲ್ಲೇಖ ಮಾಡಿದ್ದಾಳೆ.

ತನಗೆ ಅತ್ಯಾಚಾರವಾಗಿದೆ ಎಂದು ಬರೆದಿಟ್ಟಿದ್ದ ಡೆತ್​ನೋಟ್ ಆತ್ಮಹತ್ಯೆ‌ಯ 15 ದಿನದ ನಂತರ ಮನೆಯಲ್ಲಿ ಪತ್ತೆ
ಪ್ರಾತಿನಿಧಿಕ ಚಿತ್ರ

ಮೈಸೂರು: 15 ದಿನದ ಹಿಂದೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಚನ್ನಪಟ್ಟಣದಲ್ಲಿ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಸಂಬಂಧಿಸಿ 15 ದಿನದ ಬಳಿಕ ಯುವತಿಯ ಮನೆಯಲ್ಲಿ ಡೆತ್‌ನೋಟ್ ಪತ್ತೆಯಾಗಿದೆ. ತನಗೆ ಅತ್ಯಾಚಾರವಾಗಿದೆ ಎಂದು ಡೆತ್ ನೋಟ್ನಲ್ಲಿ ಯುವತಿ ಉಲ್ಲೇಖ ಮಾಡಿದ್ದಾಳೆ.

ನನ್ನ ಮೇಲೆ ಅತ್ಯಾಚಾರವಾಗಿದೆ. ತನ್ನ ಸಾವಿಗೆ ಲೋಕೇಶ್ ಕಾರಣ ಎಂದು ಮೃತ ಯುವತಿ ಡೆತ್ ನೋಟ್ನಲ್ಲಿ ಉಲ್ಲೇಖ ಮಾಡಿದ್ದಾಳೆ. ಮೃತ ಯುವತಿ ಲೋಕೇಶ್‌ನನ್ನು ಪ್ರೀತಿ ಮಾಡುತ್ತಿದ್ದಳು. ಆದ್ರೆ ಲೋಕೇಶ್ ಮದುವೆ ಮಾಡಿಕೊಳ್ಳಲು ನಿರಾಕರಿಸಿದ್ದ. ಅಲ್ಲದೆ ಯುವತಿಯನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದನಂತೆ. ಹೀಗಾಗಿ ನೊಂದಿದ್ದ ಯುವತಿ ಈ ಬಗ್ಗೆ ದೂರು ನೀಡಲು ಪೊಲೀಸ್ ಠಾಣೆಗೆ ಹೋಗಿದ್ದಾಳೆ. ಆದರೆ ಪ್ರಕರಣ ದಾಖಲಿಸಿಕೊಳ್ಳದೆ ಹುಲ್ಲಹಳ್ಳಿ ಠಾಣೆ ಎಎಸ್ಐ ಶಿವರಾಜ್ ಯುವತಿಯನ್ನು ವಾಪಸ್ ಕಳಿಸಿದ್ದರು.

ತನ್ನ ಹಾಗೂ ಲೋಕೇಶ್ ನಡುವಿನ ಪ್ರೀತಿಗೆ ಸಾಕ್ಷಿ ಇದೆ, ಮೊಬೈಲ್ ನಲ್ಲಿ ವರ್ಷದಿಂದ ಮಾತನಾಡಿರುವ ಕಾಲ್ ರೆಕಾರ್ಡ್ ಇದೆ. ಈ‌ ನೋವಿನಿಂದ ಸತ್ತರೆ ನನ್ನ ಸಾವಿಗೆ ಇವರೇ ಕಾರಣ. ಇವರನ್ನು ಗಲ್ಲಿಗೇರಿಸಿ‌ ಎಂದು ಡೆತ್‌ನೋಟ್‌ನಲ್ಲಿ ಯುವತಿ ಉ್ಲಲೇಖ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದೀಗಾ ಹುಲ್ಲಹಳ್ಳಿ ಪೊಲೀಸ್ ಠಾಣೆ ಎಎಸ್ಐ ಸೇರಿ ಎಂಟು ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ.

death note

ಡೆತ್ ನೋಟ್

ಇದನ್ನೂ ಓದಿ: ಬಿನ್ನಿಮಿಲ್​ನ ಪೊಲೀಸ್ ಕ್ವಾರ್ಟರ್ಸ್ ಕಟ್ಟಡ ನಿರ್ಮಾಣಗೊಂಡು ಮೂರೇ ವರ್ಷಕ್ಕೆ ಕುಸಿಯುವ ಹಂತಕ್ಕೆ ತಲುಪಲು ಕಾರಣ ಇಲ್ಲಿದೆ!

Click on your DTH Provider to Add TV9 Kannada