ಬಿನ್ನಿಮಿಲ್​ನ ಪೊಲೀಸ್ ಕ್ವಾರ್ಟರ್ಸ್ ಕಟ್ಟಡ ನಿರ್ಮಾಣಗೊಂಡು ಮೂರೇ ವರ್ಷಕ್ಕೆ ಕುಸಿಯುವ ಹಂತಕ್ಕೆ ತಲುಪಲು ಕಾರಣ ಇಲ್ಲಿದೆ!

ಕೇವಲ ಮೂರು ವರ್ಷಕ್ಕೆ ಏಳು ಅಂತಸ್ತಿನ ಕಟ್ಟಡ ವಾಲಿದ್ದು ಕಳಪೆ ಕಾಮಗಾರಿಯಿಂದ ಎಂದು ಹೇಳಲಾಗುತ್ತಿದೆ. ಬಿನ್ನಿಮಿಲ್​ನಲ್ಲಿ ಪೊಲೀಸ್ ಕ್ವಾರ್ಟರ್ಸ್ ನಿರ್ಮಾಣಕ್ಕೆ ಮುನ್ನಾ ಮೂವತ್ತು ಅಡಿಯಷ್ಟು ಆಳವಾದ ಜಾಗವಿತ್ತು.

ಬಿನ್ನಿಮಿಲ್​ನ ಪೊಲೀಸ್ ಕ್ವಾರ್ಟರ್ಸ್ ಕಟ್ಟಡ ನಿರ್ಮಾಣಗೊಂಡು ಮೂರೇ ವರ್ಷಕ್ಕೆ ಕುಸಿಯುವ ಹಂತಕ್ಕೆ ತಲುಪಲು ಕಾರಣ ಇಲ್ಲಿದೆ!
ಕುಸಿಯುವ ಹಂತದಲ್ಲಿರುವ ಬಿನ್ನಿಮಿಲ್​ನ ಪೊಲೀಸ್ ಕ್ವಾರ್ಟರ್ಸ್

ಬೆಂಗಳೂರು: ಮೈಸೂರು ರಸ್ತೆಯ ಬಿನ್ನಿಮಿಲ್​ನ ಪೊಲೀಸ್ ಕ್ವಾರ್ಟರ್ಸ್ (Mill Police Quarters) ಕಟ್ಟಡ ನಿರ್ಮಾಣಗೊಂಡು ಮೂರೇ ವರ್ಷಕ್ಕೆ ಕುಸಿಯುವ ಹಂತದಲ್ಲಿದೆ. 2016 ರಿಂದ 2018 ವರೆಗೂ ಪೊಲೀಸ್ ಕ್ವಾರ್ಟರ್ಸ್ ಕಟ್ಟಡ ನಿರ್ಮಾಣಗೊಂಡಿತ್ತು. ಮೈಸೂರು ಮೂಲದ ಪಿ ಜಿ ಶೆಟ್ಟಿ ಕಂಸ್ಟ್ರಕ್ಷನ್ ಎಂಬ ಕಂಪನಿಗೆ ಗುತ್ತಿಗೆ ನೀಡಲಾಗಿತ್ತು. ಪಿಜಿ ಶೆಟ್ಟಿ ಕಂಸ್ಟ್ರಕ್ಷನ್ ಕಂಪನಿ ಜಪಾನ್ ಮಾದರಿಯಲ್ಲಿ ಕಟ್ಟಡಗಳನ್ನ ನಿರ್ಮಾಣ ಮಾಡುತ್ತಿದೆ. ಇನ್ನು ಗೋಡೆ ಬಿರುಕು ಬಿಟ್ಟಿರುವ ಪೊಲೀಸ್ ಕ್ವಾರ್ಟರ್ಸ್​ನ 18 ಕೋಟಿ ವೆಚ್ಚದಲ್ಲಿ 128 ಪ್ಲಾಟ್​ಗಳನ್ನ ನಿರ್ಮಾಣ ಮಾಡಲಾಗಿದೆ.

ಕೇವಲ ಮೂರು ವರ್ಷಕ್ಕೆ ಏಳು ಅಂತಸ್ತಿನ ಕಟ್ಟಡ ವಾಲಿದ್ದು ಕಳಪೆ ಕಾಮಗಾರಿಯಿಂದ ಎಂದು ಹೇಳಲಾಗುತ್ತಿದೆ. ಬಿನ್ನಿಮಿಲ್​ನಲ್ಲಿ ಪೊಲೀಸ್ ಕ್ವಾರ್ಟರ್ಸ್ ನಿರ್ಮಾಣಕ್ಕೆ ಮುನ್ನಾ ಮೂವತ್ತು ಅಡಿಯಷ್ಟು ಆಳವಾದ ಜಾಗವಿತ್ತು. ಕಟ್ಟಡ ನಿರ್ಮಾಣಕ್ಕೆ ಆಳವನ್ನ ಮುಚ್ಚಲಾಗಿತ್ತು. ಅಧಿಕಾರಿಗಳು ಡಬರಿಸ್ ಹಾಕಿ ಆಳವನ್ನ ಮುಚ್ಚಿದ್ದರು. ಬೆಂಗಳೂರಿನ ಬೇರೆ ಬೇರೆ ಕಾಮಗಾರಿ ವೇಳೆ ಸಿಗುವ ವೇಸ್ಟ್ ಡಬರಿಸ್​ಗಳನ್ನ ಕ್ವಾರ್ಟರ್ಸ್ ನಿರ್ಮಾಣ ಜಾಗದಲ್ಲಿ ಹಾಕಲಾಗಿತ್ತು. ಕ್ವಾರ್ಟರ್ಸ್ ನಿರ್ಮಾಣಕ್ಕೆ ಒಳ್ಳೆಯ ಮಣ್ಣು ಹಾಕಿ ಆಳವನ್ನ ಮುಚ್ಚಿರಲಿಲ್ಲ. ಡಬರಿಸ್ ಹಾಕಿದ್ದ ಜಾಗದಲ್ಲೇ ಕ್ವಾರ್ಟರ್ಸ್​ನ ನಿರ್ಮಾಣ ಮಾಡಲಾಗಿದೆ. ಇದೀಗ ನೆಲದಡಿ ಇರುವ ಮಣ್ಣು ಕುಸಿದಿದ್ದತಿಂದ ಕಟ್ಟಡ ವಾಲಿದೆ ಎಂಬ ಮಾಹಿತಿ ತಿಳಿದುಬಂದಿದೆ.

ಕಟ್ಟಡ ನಿರ್ಮಾಣಕ್ಕೆ ಬಳಕೆ ಮಾಡಿದ್ದ ಮರಳು ಸರಿಯಾಗಿರಲಿಲ್ಲ ಎಂಬ ಅಂಶ ಪತ್ತೆಯಾಗಿದೆ. ಕಟ್ಟಡ ವಾಲಿರುವ ಬಗ್ಗೆ ಪೊಲೀಸ್ ಹಿರಿಯ ಅಧಿಕಾರಿಗಳಿಗೆ ಮೊದಲೇ ಗೊತ್ತಿತ್ತು. ಆರು ತಿಂಗಳ ಹಿಂದೆಯೇ ಅಧಿಕಾರಿಗಳು ಕಮಿಟಿಯೊಂದನ್ನ ರಚಿಸಿದ್ದರು. ಕಟ್ಟಡ ವಾಸಮಾಡಲು ಯೋಗ್ಯವಿಲ್ಲವೆಂದು ತಜ್ಞರ ಸಮಿತಿ ಮಾಹಿತಿ ನೀಡಿತ್ತು. ಕಂಟ್ರಾಕ್ಟರ್ ತಪ್ಪಿನಿಂದಾಗಿ ಕಟ್ಟಡ ವಾಲಿರುವುದು ಪಕ್ಕಾ ಅಂತ ಹೇಳಲಾಗುತ್ತಿದೆ. ಯುಬಿಎಸ್​ಸಿ ಹಾಗೂ ಐಐಎಸ್​ಸಿ ತಜ್ಞರಿಂದ ಕಟ್ಟಡ ವಾಲಿರುವ ಬಗ್ಗೆ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ

ವಿರಾಜಪೇಟೆ: ಗ್ರಾಮ‌ ಪಂಚಾಯಿತಿ ಸದಸ್ಯೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣು, ನಾಲ್ಕು ದಿನಗಳ ಬಳಿಕ ಸಾವು

ಲಖಿಂಪುರ ಖೇರಿ ಹಿಂಸಾಚಾರ: ಕೇಂದ್ರ ಸಚಿವ ಅಜಯ್​ ಮಿಶ್ರಾ ವಜಾಕ್ಕೆ ಆಗ್ರಹಿಸಿ ಇಂದು ರೈಲು ತಡೆ ಆಂದೋಲನ

Click on your DTH Provider to Add TV9 Kannada