Rail Roko Agitation: ಲಖಿಂಪುರ ಖೇರಿ ಹಿಂಸಾಚಾರ: ಕೇಂದ್ರ ಸಚಿವ ಅಜಯ್​ ಮಿಶ್ರಾ ವಜಾಕ್ಕೆ ಆಗ್ರಹಿಸಿ ಇಂದು ರೈಲು ತಡೆ ಆಂದೋಲನ

ಅಜಯ್​ ಮಿಶ್ರಾ ಕೇಂದ್ರ ಗೃಹ ಇಲಾಖೆಯಲ್ಲಿ ಇದ್ದಾರೆ. ಅವರನ್ನು ಅಲ್ಲಿಂದ ವಜಾಗೊಳಿಸಿದಂತೂ ನಮಗೆ ನ್ಯಾಯ ಸಿಗುವುದಿಲ್ಲ. ಅವರು ತಮ್ಮ ದ್ವೇಷ, ಶತ್ರುತ್ವ, ಕೋಮು ಸೌಹಾರ್ದತೆ ಕದಡುವ ರೀತಿಯಲ್ಲಿ ಭಾಷಣ ಮಾಡಿದ್ದಾರೆ ಎಂದು ರೈತ ಸಂಘಟನೆಗಳು ಆರೋಪಿಸಿವೆ.

Rail Roko Agitation: ಲಖಿಂಪುರ ಖೇರಿ ಹಿಂಸಾಚಾರ: ಕೇಂದ್ರ ಸಚಿವ ಅಜಯ್​ ಮಿಶ್ರಾ ವಜಾಕ್ಕೆ ಆಗ್ರಹಿಸಿ ಇಂದು ರೈಲು ತಡೆ ಆಂದೋಲನ
ಸಾಂಕೇತಿಕ ಚಿತ್ರ

ದೆಹಲಿ: ಲಖಿಂಪುರ ಖೇರಿ ಹಿಂಸಾಚಾರ(Lakhimpur Kheri Violence) ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿತರಾಗಿರುವ ಆಶೀಶ್ ಮಿಶ್ರಾ ತಂದೆ, ಕೇಂದ್ರ ಸಚಿವ ಅಜಯ್​ ಮಿಶ್ರಾ ತೇನಿಯವರನ್ನು ಹುದ್ದೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಇಂದು ಸಂಯುಕ್ತ ಕಿಸಾನ್​ ಮೋರ್ಚಾ (SKM) ರೈತ ಸಂಘಟನೆ ರಾಷ್ಟ್ರಾದ್ಯಂತ ರೈಲು ತಡೆ (Rail Roko)ಆಂದೋಲನಕ್ಕೆ ಕರೆ ನೀಡಿದೆ.   ಈ ಬಗ್ಗೆ ಎಸ್​​ಕೆಎಂ ಹೇಳಿಕೆ ಬಿಡುಗಡೆ ಮಾಡಿದ್ದು, ದೇಶಾದ್ಯಂತ ರೈತ ಸಂಘಟನೆಗಳು ಬೆಳಗ್ಗೆ 10ಗಂಟೆಯಿಂದ ಸಂಜೆ ನಾಲ್ಕು ಗಂಟೆವರೆಗೆ ಅಂದರೆ ಸುಮಾರು 6ತಾಸು ರೈಲು ತಡೆ ನಡೆಸಬೇಕು. ಆದರೆ ಪ್ರತಿಭಟನೆ ಶಾಂತಿಯುತವಾಗಿ ನಡೆಯಬೇಕು. ರೈಲ್ವೆ ಇಲಾಖೆಯ ಆಸ್ತಿಗೆ ಯಾವುದೇ ಹಾನಿಯಾಗಬಾರದು ಎಂದು ತಿಳಿಸಿದೆ. 

ಅಜಯ್​ ಮಿಶ್ರಾ ಕೇಂದ್ರ ಗೃಹ ಇಲಾಖೆಯಲ್ಲಿ ಇದ್ದಾರೆ. ಅವರನ್ನು ಅಲ್ಲಿಂದ ವಜಾಗೊಳಿಸಿದಂತೂ ನಮಗೆ ನ್ಯಾಯ ಸಿಗುವುದಿಲ್ಲ. ಅವರು ತಮ್ಮ ದ್ವೇಷ, ಶತ್ರುತ್ವ, ಕೋಮು ಸೌಹಾರ್ದತೆ ಕದಡುವ ರೀತಿಯಲ್ಲಿ ಭಾಷಣ ಮಾಡಿದ್ದಾರೆ. ಹಿಂದೂ-ಸಿಖ್​​ರ ನಡುವೆ ದ್ವೇಷ ಹುಟ್ಟುಹಾಕುವಂತೆ ಮಾತನಾಡಿದ್ದಾರೆ. ಹಾಗೇ, ಪ್ರತಿಭಟನಾನಿರತ ಗುಂಪಿಗೆ ಡಿಕ್ಕಿ ಹೊಡೆಯಲು ಅವರ ವಾಹನ ಬಳಕೆಯಾಗಿದೆ ಮತ್ತು ಅವರ ಪುತ್ರ ರೈತನೊಬ್ಬನಿಗೆ ಗುಂಡುಹಾರಿಸಿದ್ದಾರೆ ಎಂದು ಸಂಯುಕ್ತ ಕಿಸಾನ್​ ಮೋರ್ಚಾ ತಮ್ಮ ಹೇಳಿಕೆಯಲ್ಲಿ ತಿಳಿಸಿದೆ.

ಆದರೆ ಅಜಯ್ ಮಿಶ್ರಾ ತೇನಿ ಈಗಲೂ ಕೂಡ ತನ್ನ ಪುತ್ರ ಘಟನೆ ನಡೆದ ಸಂದರ್ಭದಲ್ಲಿ ಅಲ್ಲಿರಲಿಲ್ಲ ಎಂದೇ ಪ್ರತಿಪಾದಿಸುತ್ತಿದ್ದಾರೆ. ಇನ್ನು ಈ ಮಧ್ಯೆ ಬಿಕೆಯು ನಾಯಕ ರಾಕೇಶ್​ ಟಿಕಾಯತ್​ ಕೂಡ ಲಖಿಂಪುರ ಖೇರಿ ಹಿಂಸಾಚಾರ ತನಿಖೆ ಬಗ್ಗೆ ಕೆಲವು ಅಸಮಾಧಾನ ಹೊರಹಾಕಿದ್ದಾರೆ. ಅಜಯ್​ ಮಿಶ್ರಾ ತೇನಿಯನ್ನು ಸ್ಥಾನದಿಂದ ತೆಗೆದುಹಾಕದ ವಿನಃ ನ್ಯಾಯಸಮ್ಮತ ತನಿಖೆ ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ. ಅಜಯ್​ ಮಿಶ್ರಾ ವಜಾಕ್ಕೆ ಕಾಂಗ್ರೆಸ್​ ಕೂಡ ಒತ್ತಾಯ ಮಾಡುತ್ತಿದೆ.

ಇದನ್ನೂ ಓದಿ: ನಟಿ ಸವಿ ಮಾದಪ್ಪ ಸಾವಿನ ಸತ್ಯ ಬಯಲು; ಪೊಲೀಸರ ಕೈ ಸೇರಿದ ಮರಣೋತ್ತರ ಪರೀಕ್ಷೆ ವರದಿ

ನೀರಾವರಿ ಯೋಜನೆಯ ವಿಚಾರಕ್ಕೆ ಭುಗಿಲೆದ್ದ ಅಸಮಾಧಾನ, ಸಚಿವ ಜೆ.ಸಿ.ಮಾಧುಸ್ವಾಮಿ ವಿರುದ್ಧ ದೂರು ನೀಡುವುದಾಗಿ ಸುರೇಶ್‌ಗೌಡ ಎಚ್ಚರಿಕೆ

Click on your DTH Provider to Add TV9 Kannada