ನೀರಾವರಿ ಯೋಜನೆಯ ವಿಚಾರಕ್ಕೆ ಭುಗಿಲೆದ್ದ ಅಸಮಾಧಾನ, ಸಚಿವ ಜೆ.ಸಿ.ಮಾಧುಸ್ವಾಮಿ ವಿರುದ್ಧ ದೂರು ನೀಡುವುದಾಗಿ ಸುರೇಶ್‌ಗೌಡ ಎಚ್ಚರಿಕೆ

ಸಚಿವ J.C.ಮಾಧುಸ್ವಾಮಿ ವಿರುದ್ಧ ಸುರೇಶ್‌ಗೌಡ ಸಿಡಿದೆದ್ದಿದ್ದಾರೆ. ಜೆ.ಸಿ.ಮಧುಸ್ವಾಮಿ ಕಾನೂನು ಸಚಿವರು. ಅವರು ಜವಾಬ್ದಾರಿಯುತವಾಗಿ ಮಾತನಾಡಬೇಕು. ಮನಸೋಇಚ್ಛೆ ಮಾತಾಡಿ ಗೊಂದಲದ ಹೇಳಿಕೆ ನೀಡಬಾರದು ಎಂದು ಗರಂ ಆಗಿದ್ದಾರೆ.

ನೀರಾವರಿ ಯೋಜನೆಯ ವಿಚಾರಕ್ಕೆ ಭುಗಿಲೆದ್ದ ಅಸಮಾಧಾನ, ಸಚಿವ ಜೆ.ಸಿ.ಮಾಧುಸ್ವಾಮಿ ವಿರುದ್ಧ ದೂರು ನೀಡುವುದಾಗಿ ಸುರೇಶ್‌ಗೌಡ ಎಚ್ಚರಿಕೆ
ಸುರೇಶ್‌ಗೌಡ

ತುಮಕೂರು: ನೀರಾವರಿ ಯೋಜನೆಯ ವಿಚಾರಕ್ಕೆ ಅಸಮಾಧಾನ ಭುಗಿಲೆದ್ದಿದೆ. ಸಚಿವ J.C.ಮಾಧುಸ್ವಾಮಿ ವಿರುದ್ಧ ಸುರೇಶ್‌ಗೌಡ ಸಿಡಿದೆದ್ದಿದ್ದಾರೆ. ಜೆ.ಸಿ.ಮಧುಸ್ವಾಮಿ ಕಾನೂನು ಸಚಿವರು. ಅವರು ಜವಾಬ್ದಾರಿಯುತವಾಗಿ ಮಾತನಾಡಬೇಕು. ಮನಸೋಇಚ್ಛೆ ಮಾತಾಡಿ ಗೊಂದಲದ ಹೇಳಿಕೆ ನೀಡಬಾರದು ಎಂದು ಗರಂ ಆಗಿದ್ದಾರೆ.

ಗೂಳೂರು ಹೆಬ್ಬೂರು ಏತ ನೀರಾವರಿ ಯೋಜನೆ ವಿಚಾರಕ್ಕೆ ಸಂಬಂಧಿಸಿ ಯೋಜನೆ ಅವೈಜ್ಞಾನಿಕ ಎಂದು ಮಾಧುಸ್ವಾಮಿ ಹೇಳಿದ್ದಾರೆ. ಕ್ಷೇತ್ರದ ನನ್ನ ಜನ ಕಷ್ಟದಲ್ಲಿರುವಾಗ ಕೆರೆಗಳನ್ನ ತುಂಬಿಸಿ ಎಂದು ಮಾಧ್ಯಮದ ಮೂಲಕ ಜನ್ರಿಗೆ ಸಚಿವರಿಗೆ ವಿನಂತಿ ಮಾಡಿದ್ದೆ. ಆದರೆ ಅದಕ್ಕೆ ಅವರು ಯೋಜನೆ ಬಗ್ಗೆ ಮಾತನಾಡಿದ್ದಾರೆ. ಯೋಜನೆ ವೈಜ್ಞಾನಿಕನಾ, ಅವೈಜ್ಞಾನಿಕನಾ ಎಂದು ಕೇಳಿಲ್ಲ. ಈ ಯೋಜನೆ ಮಾಡಿದ್ದು ನಾನಲ್ಲ. 2008ರಲ್ಲಿ ಅಂದಿನ ಸಿಎಂ ಬಿಎಸ್ ವೈ, ಜಲಸಂಪನ್ಮೂಲ ಸಚಿವರಾಗಿದ್ದಾಗ ಸಿಎಂ ಬೊಮ್ಮಾಯಿಯೇ ಚಾಲನೆ ನೀಡಿದ್ದರು. ಸ್ವತಃ ಸಿಎಂ ಅಂದು 60 ಕೋಟಿ ಹಣ ಬಿಡುಗಡೆ ಮಾಡಿ ಅವರೇ ಬಂದು ಗುದ್ದಲ್ಲಿ ಪೂಜೆ ಮಾಡಿದ್ರು. ಈ ಯೋಜನೆ ಅವೈಜ್ಞಾನಿಕವಾಗಿದ್ದರೆ ತನಿಖೆ ಮಾಡಿಸಿ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸುರೇಶ್‌ಗೌಡ ಅಸಮಾಧಾನ ಹೊರ ಹಾಕಿದ್ದಾರೆ.

ಇನ್ನು ತುಮಕೂರು ಗ್ರಾಮಾಂತರ ಭಾಗಕ್ಕೆ ನೀರು ಹಂಚಿಕೆ ವಿಚಾರಕ್ಕೆ 0.4 ಟಿಎಂಸಿ ನೀರನ್ನು ನೀವು ಬಿಟ್ಟಿದ್ದೀರಾ ಎಂದು ಸಚಿವ ಜೆ.ಸಿ.ಮಾಧುಸ್ವಾಮಿಗೆ ತುಮಕೂರಿನಲ್ಲಿ ಮಾಜಿ ಶಾಸಕ ಸುರೇಶ್‌ಗೌಡ ಪ್ರಶ್ನಿಸಿದ್ದಾರೆ.

ಸಚಿವ ಜೆ.ಸಿ.ಮಾಧುಸ್ವಾಮಿಗೆ ಸುರೇಶ್‌ಗೌಡ ವಾರ್ನಿಂಗ್
ನಮ್ಮ ಸರ್ಕಾರ ಬಂದು ಎರಡೂವರೆ ವರ್ಷವಾಗಿದೆ. ಕ್ಷೇತ್ರದ ಜನರು ಕೆರೆಗಳಿಗೆ ನೀರು ತುಂಬಿಸಲು ಕೇಳ್ತಿದ್ದಾರೆ. ಹೀಗಾಗಿ ನಾನು ಕೆರೆಗಳಿಗೆ ನೀರು ತುಂಬಿಸಲು ಕೇಳಿದ್ದೇನೆ. ಕೆರೆಗಳಿಗೆ ನೀರು ತುಂಬಿಸಬೇಕು, ಇಲ್ಲಾ ಸುಮ್ಮನಿರಬೇಕು. ಯೋಜನೆ ಅವೈಜ್ಞಾನಿಕ ಎಂದು ಹೇಳುವುದು ಸರಿಯಲ್ಲ. ಗೌರವಯುತವಾಗಿ ಕೆರೆಗಳಿಗೆ ನೀರು ತುಂಬಿಸಿ. ಇಲ್ಲದಿದ್ದರೆ ಪ್ರಧಾನಿ ಮೋದಿ, ಬಿಜೆಪಿ ಅಧ್ಯಕ್ಷ ನಡ್ಡಾ, ಬಿಜೆಪಿ ರಾಜ್ಯಾಧ್ಯಕ್ಷ ಕಟೀಲುಗೆ ದೂರು ನೀಡುತ್ತೇನೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ವಿರುದ್ಧ ದೂರು ನೀಡುವುದಾಗಿ ಸುರೇಶ್‌ಗೌಡ ಎಚ್ಚರಿಕೆ ಕೊಟ್ಟಿದ್ದಾರೆ.

ಮಾಧುಸ್ವಾಮಿ ಹೇಳಿಕೆಯಿಂದ ಒರಿಜಿನಲ್ ಬಿಜೆಪಿಯವರಿಗೆ ನೋವಾಗಿದೆ. ಮಾಧುಸ್ವಾಮಿ ಹೇಳಿಕೆ ಉದ್ದೇಶದ ಬಗ್ಗೆ ತನಿಖೆಯಾಗಬೇಕು. ತನಿಖೆಗೆ ಆಗ್ರಹಿಸಿ ಸಿಎಂ, ಜೆ.ಪಿ.ನಡ್ಡಾಗೆ ಪತ್ರ ಬರೆಯುತ್ತೇನೆ. ಈ ಮೊದಲು ತಾಲೂಕಿನ ಎಲ್ಲಾ ಕೆರೆಗಳು ತುಂಬಿದ್ದವು. ಆದರೆ ಜೆ.ಸಿ.ಮಾಧುಸ್ವಾಮಿಯವರದ್ದೇನು ಹೊಸ ವರಸೆ? ಶಿಸ್ತಿನ ಕ್ರಮಕ್ಕೆ ಆಗ್ರಹಿಸಿ ನಾನಂತೂ ಪತ್ರ ಬರೆಯುತ್ತೇನೆ. ಸಾರ್ವಜನಿಕ ಸಭೆಯಲ್ಲಿ ನೀರು ಕೇಳೋದು ನಮ್ಮ ಕರ್ತವ್ಯ. ನೀರು ಬಿಡಿ ಎಂದು ವಿನಂತಿ ಮಾಡಿದ್ದೆ, ಅದು ತಪ್ಪಾ? JDUನಲ್ಲಿದ್ದವರು BJPಯಲ್ಲಿ ಫಸ್ಟ್ ಟೈಂ MLA ಆಗಿದ್ದಾರೆ. ಮಾಧುಸ್ವಾಮಿ ಸಚಿವರು ಆಗಿರುವುದು ಕೂಡ ಸಂತೋಷ. ಆದರೆ ಯೋಜನೆ ಅವೈಜ್ಞಾನಿಕ ಎನ್ನುವುದು ಸರಿಯಲ್ಲ ಎಂದಿದ್ದಾರೆ.

ಇದನ್ನೂ ಓದಿ: ಶಿಕ್ಷಣ ರಂಗದಲ್ಲಿ ಇಂದು ಐತಿಹಾಸಿಕ ದಿನ, ಕಳಚಲಿದೆ ಕೊರೊನಾ ಗುಮ್ಮ! ಶಾಲೆಗಳಲ್ಲಿ ಪೂರ್ಣಾವಧಿಗೆ ಮಕ್ಕಳ ಹಾಜರಾತಿ

Click on your DTH Provider to Add TV9 Kannada