ಗುಬ್ಬಿ ಜೆಡಿಎಸ್ ಶಾಸಕ ಎಸ್ ಆರ್ ಶ್ರೀನಿವಾಸ್​ಗೆ ಮತ್ತೊಂದು ಶಾಕ್ ನೀಡಿದ ಹೆಚ್​ ಡಿ ಕುಮಾರಸ್ವಾಮಿ

ಸಿ.ಎಸ್ ಪುರ ಮೂಲದ ನಾಗರಾಜು ಎಂಬುವವರನ್ನು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುತ್ತದೆ. ಜೊತೆಗೆ ಗುಬ್ಬಿ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿಯಾಗಿ ಇವರಿಗೆ ಟಿಕೆಟ್ ನೀಡುವ ಸಾಧ್ಯತೆ ಹೆಚ್ಚಿದೆ.

ಗುಬ್ಬಿ ಜೆಡಿಎಸ್ ಶಾಸಕ ಎಸ್ ಆರ್ ಶ್ರೀನಿವಾಸ್​ಗೆ ಮತ್ತೊಂದು ಶಾಕ್ ನೀಡಿದ ಹೆಚ್​ ಡಿ ಕುಮಾರಸ್ವಾಮಿ
ಎಚ್ ಡಿ ಕುಮಾರಸ್ವಾಮಿ, ಎಸ್ ಆರ್ ಶ್ರೀನಿವಾಸ್

ತುಮಕೂರು: ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy), ಗುಬ್ಬಿ ಜೆಡಿಎಸ್ ಶಾಸಕ ಎಸ್ ಆರ್ ಶ್ರೀನಿವಾಸ್​ಗೆ (S R Srinivas) ಮತ್ತೊಂದು ಶಾಕ್ ಕೊಟ್ಟಿದ್ದಾರೆ. ಜೆಡಿಎಸ್ ಶಾಸಕನಿಗೆ ತಿಳಿಸದೆ ಕುಮಾರಸ್ವಾಮಿ ಜೆಡಿಎಸ್ ಸಮಾವೇಶವನ್ನು ಆಯೋಜನೆ ಮಾಡಿದ್ದಾರೆ. ಗುಬ್ಬಿ ಪಟ್ಟಣದ ಸರ್ಕಾರಿ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ. ಇದೇ ತಿಂಗಳ 25ರಂದು ಕಾರ್ಯಕ್ರಮ ನಡೆಯುವುದಾಗಿ ದಿನಾಂಕ ಘೋಷಣೆಯಾಗಿದೆ. ಇನ್ನು ಕಾರ್ಯಕ್ರಮದ ಪಾಂಪ್ಲೇಟ್​ನ ಕುಮಾರಸ್ವಾಮಿ ಹೊರಡಿಸಿದ್ದಾರೆ. ಗುಬ್ಬಿ ಕ್ಷೇತ್ರಕ್ಕೆ ಕುಮಾರಸ್ವಾಮಿ ಜೆಡಿಎಸ್​ನಿಂಧ ನಾಗರಾಜುಗೆ ಟಿಕೆಟ್ ಕೊಡುವ ಸಾಧ್ಯತೆಯಿದೆ.

ಸಿ.ಎಸ್ ಪುರ ಮೂಲದ ನಾಗರಾಜು ಎಂಬುವವರನ್ನು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುತ್ತದೆ. ಜೊತೆಗೆ ಗುಬ್ಬಿ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿಯಾಗಿ ಇವರಿಗೆ ಟಿಕೆಟ್ ನೀಡುವ ಸಾಧ್ಯತೆ ಹೆಚ್ಚಿದೆ. ಈ ಹಿನ್ನೆಲೆ ಅ.25ಕ್ಕೆ ಗುಬ್ಬಿಯಲ್ಲಿ ಹೊಸ ಮುಖಂಡನ ಸೇರ್ಪಡೆ ಕಾರ್ಯಕ್ರಮ ಜರುಗಲಿದೆ. ಆದರೆ ನಡೆಯುತ್ತಿರುವ ಈ ಕಾರ್ಯಕ್ರಮದ ಬಗ್ಗೆ ಜೆಡಿಎಸ್ ಶಾಸಕ ಎಸ್ ಆರ್ ಶ್ರೀನಿವಾಸ್​ಗೆ ತಿಳಿಸಿಲ್ಲ ಎಂಬ ಮಾಹಿತಿ ತಿಳಿದುಬಂದಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗುಬ್ಬಿ ಜೆಡಿಎಸ್ ಶಾಸಕ ಎಸ್ ಆರ್ ಶ್ರೀನಿವಾಸ್, ಯಾವ ಸಮಾವೇಶ, ಏನು ನಡೆಯುತ್ತಿದೆ ಎಂದು ಗೊತ್ತಿಲ್ಲ. ಆ ಸಮಾವೇಶ ಯಾರು ಮಾಡುತ್ತಿದ್ದಾರೆ ಎಂಬುದೂ ಗೊತ್ತಿಲ್ಲ. ಕಾರ್ಯಕ್ರಮ ಆಯೋಜನೆಯ ಬಗ್ಗೆ ನನಗೆ ಮಾಹಿತಿ ಇಲ್ಲ. 13 ದಿನದಿಂದ ನಾನು ಕ್ಷೇತ್ರದಲ್ಲಿ ಇಲ್ಲ, ಚಿಕಿತ್ಸೆಗೆ ಹೋಗಿದ್ದೆ. ಕೆಲವರು ನಮ್ಮ ಪಾರ್ಟಿ ಕಚೇರಿಗೆ ಬಂದು ಸೇರಿಕೊಂಡಿದ್ದಾರೆ. ಆದರೆ ನನಗೆ ಜೆಡಿಎಸ್ ಸಮಾವೇಶದ ಬಗ್ಗೆ ಮಾಹಿತಿ ಇಲ್ಲ ಅಂತ ಅಭಿಪ್ರಾಯಪಟ್ಟಿದ್ದಾರೆ.

ನಾನು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿರೋದೂ ಗೊತ್ತಿಲ್ಲ. ಆಹ್ವಾನ ಪತ್ರಿಕೆಯಲ್ಲಿ ನನ್ನ ಹೆಸರು ಹಾಕಿರುವುದು ಗೊತ್ತಿಲ್ಲ. ಅದು ನಕಲಿ ಆಹ್ವಾನ ಪತ್ರಿಕೆ ಅಂತ ಶ್ರೀನಿವಾಸ್ ತಿಳಿಸಿದ್ದಾರೆ. ಜೆಡಿಎಸ್ ಕಾರ್ಯಕ್ರಮದ ಬಗ್ಗೆ ರಾಷ್ಟ್ರೀಯ ಅಧ್ಯಕ್ಷರು ಅಥವಾ ರಾಜ್ಯಾಧ್ಯಕ್ಷರ ಬಳಿ ಮಾಹಿತಿ ಇರುತ್ತೆ ಅವರೇ ಹೇಳಬೇಕು ಎಂದು ಜೆಡಿಎಸ್ ಶಾಸಕ ಹೇಳಿದ್ದಾರೆ.

ಸೇರ್ಪಡೆ ಕಾರ್ಯಕ್ರಮದ ಪಾಂಪ್ಲೆಂಟ್

ಇದನ್ನೂ ಓದಿ

ಹಾವೇರಿಯ ಹಾನ್ಗಲ್ಲಿನಲ್ಲಿ ರಂಗೇರಿದ ಬೈ ಎಲೆಕ್ಷನ್ ಅಖಾಡ, ಶಿವರಾಜ್ ಸಜ್ಜನರ ಪರ ಸಿಎಂ ಬೊಮ್ಮಾಯಿ ಮತ ಬೇಟೆ

ತಪ್ಪಾದ ಅಥವಾ ವಂಚನೆಯ ವಹಿವಾಟಿನ ಸಂದರ್ಭದಲ್ಲಿ ಹಣ ವಾಪಸ್ ಪಡೆಯುವುದು ಹೇಗೆ?

Click on your DTH Provider to Add TV9 Kannada