ಏಷ್ಯಾ ಖಂಡದಲ್ಲೇ ಅಪರೂಪವಾಗಿರುವ ಕೊಂಡುಕುರಿ ಪ್ರಾಣಿ ದಾವಣಗೆರೆಯಲ್ಲಿ ಪ್ರತ್ಯಕ್ಷ

ಏಷ್ಯಾ ಖಂಡದಲ್ಲೇ ಇದು ಅಪರೂಪದ ಜೀವ ಸಂಕುಲ ಎಂದು ಕರೆಯಲಾಗುತ್ತದೆ. ಜಿಂಕೆಯನ್ನು ಹೊಲುವ ಕೊಂಡುಕುರಿ ನಾಚಿಕೆ ಸ್ವಭಾವವುಳ್ಳದ್ದಾಗಿದೆ. ಇತ್ತೀಚೆಗೆ ಇದರ ಸಂತತಿ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೊಂಡುಕುರಿ ಸಂರಕ್ಷಣೆಗೆ ಸರ್ಕಾರ ಅರಣ್ಯ ಪ್ರದೇಶ ಮೀಸಲಿಟ್ಟಿದೆ.

ಏಷ್ಯಾ ಖಂಡದಲ್ಲೇ ಅಪರೂಪವಾಗಿರುವ ಕೊಂಡುಕುರಿ ಪ್ರಾಣಿ ದಾವಣಗೆರೆಯಲ್ಲಿ ಪ್ರತ್ಯಕ್ಷ
ಕೊಂಡುಕುರಿ

ದಾವಣಗೆರೆ: ಬಯಲು ಸೀಮೆಯ ಯಜಮಾನ ಎಂದೇ ಖ್ಯಾತಿ ಪಡೆದಿರುವ ಕೊಂಡುಕುರಿ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ರಂಗಯ್ಯನ ಅರಣ್ಯ ಪ್ರದೇಶದಲ್ಲಿ ಪ್ರತ್ಯಕ್ಷವಾಗಿದೆ. ಏಷ್ಯಾ ಖಂಡದಲ್ಲೇ ಇದು ಅಪರೂಪದ ಜೀವ ಸಂಕುಲ ಎಂದು ಕರೆಯಲಾಗುತ್ತದೆ. ಜಿಂಕೆಯನ್ನು ಹೊಲುವ ಕೊಂಡುಕುರಿ ನಾಚಿಕೆ ಸ್ವಭಾವವುಳ್ಳದ್ದಾಗಿದೆ. ಇತ್ತೀಚೆಗೆ ಇದರ ಸಂತತಿ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೊಂಡುಕುರಿ ಸಂರಕ್ಷಣೆಗೆ ಸರ್ಕಾರ ಅರಣ್ಯ ಪ್ರದೇಶ ಮೀಸಲಿಟ್ಟಿದೆ.

ಸದ್ಯ ಅರಣ್ಯ ಪ್ರದೇಶದಲ್ಲಿ ಪ್ರತ್ಯಕ್ಷವಾದ ಅಪರೂಪದ ಕೊಂಡುಕುರಿಯನ್ನು ಮೊಬೈಲ್​ನಲ್ಲಿ ವಿಡಿಯೋ ಮಾಡಿ ಸ್ಥಳೀಯರು ಸೆರೆ ಹಿಡಿದಿದ್ದಾರೆ.

ಮಲ್ಪೆ ಬಂದರಿನಲ್ಲಿ ಅಪರೂಪದ ಮೀನು ಪತ್ತೆ
ಮಲ್ಪೆ ಸರ್ವಋತು ಮೀನುಗಾರಿಕಾ ಬಂದರಿನಲ್ಲಿ ಅಪರೂಪದ ಮೀನೊಂದು ಕಾಣಿಸಿಕೊಂಡಿದೆ. ಭಾರೀ ಗಾತ್ರ, ಉದ್ದ ಬಾಲ, ಅಕ್ಕಪಕ್ಕ ಬೆನ್ನ ಮೇಲೆ ಅಗಲಗಲ ರೆಕ್ಕೆ ಇರುವ ಮೀನು ಎಲ್ಲರಲ್ಲೂ ಆಶ್ಚರ್ಯ ಹುಟ್ಟಿಸಿದೆ. ಉಡುಪಿಯಿಂದ ಪಶ್ಚಿಮ ಕಡಲ ತೀರದಲ್ಲಿ ಸುಮಾರು 20 ನಾಟೇಕಲ್ ದೂರದಲ್ಲಿ ಲುಕ್ಮನ್ ಎಂಬವವರಿಗೆ ಸೇರಿದ ಮೀನುಗಾರಿಕಾ ಬೋಟ್​ನಲ್ಲಿ ಬಲೆ ಬೀಸಲಾಗಿತ್ತು. ಬಂಗುಡೆ, ಅಂಜಲ್ ಮೀನಿನ ಜೊತೆಗೆ ಭಾರಿಗಾತ್ರದ ಈ ಮೀನು ಬಿದ್ದಿದೆ.

ಸ್ಥಳೀಯವಾಗಿ ಇದಕ್ಕೆ ನೆಮ್ಮೀನ್ ಎಂಬ ಹೆಸರಿದೆ. ಹೆಲಿಕಾಪ್ಟರ್ ಫಿಶ್ ಅಂತ ಅಡ್ಡ ಹೆಸರಿದೆ. ಭಾರೀ ಗಾತ್ರದ ಈ ಮೀನು 84 ಕಿಲೋ ತೂಕ ಹೊಂದಿದೆ. ಕರ್ನಾಟಕದ ಮಂದಿಗೆ ಹೆಲಿಕಾಪ್ಟರ್ ಫಿಶ್​ನ ಮಾಂಸ ಇಷ್ಟ ಇಲ್ಲ. ಇದಕ್ಕೆ ಕಾರಣ ಇಲ್ಲಿನವರಿಗೆ ಇದರ ರುಚಿ ಅಷ್ಟು ಹಿಡಿಸುವುದಿಲ್ಲ. ಕೇರಳಿಗರು ಕೆಜಿಗೆ ಐವತ್ತು ರೂಪಾಯಿ ಕೊಟ್ಟು ನೆಮ್ಮೀನ್​ನ ಮಾಂಸವನ್ನು ಖರೀದಿ ಮಾಡುತ್ತಾರೆ. ಹೀಗಾಗಿ ಮಲ್ಪೆಯಿಂದ ಮಂಗಳೂರು ಮೂಲಕ ಕೇರಳಕ್ಕೆ ನೆಮ್ಮೀನ್​ ಅನ್ನು ರವಾನೆ ಮಾಡಲಾಯಿತು.

ಇದನ್ನೂ ಓದಿ:
ಮಲ್ಪೆ ಬಂದರಿನಲ್ಲಿ ಅಪರೂಪದ ಮೀನು ಪತ್ತೆ; ನೆಮ್ಮೀನ್​ಗೆ ಕೇರಳದಲ್ಲಿ ಭಾರೀ ಬೇಡಿಕೆ!

ಕಾರವಾರದ ಕಡಲತೀರದಲ್ಲಿ ಅಪರೂಪದ ಗ್ರೀನ್ ಸೀ ಆಮೆ ಕಳೆಬರ ಪತ್ತೆ

Click on your DTH Provider to Add TV9 Kannada