ತಂದೆ- ತಾಯಿ ಕಳೆದುಕೊಂಡು ಅನಾಥ ಸಹೋದರಿಯರಿಗೆ ಓದಿಸುವ ಭರವಸೆ ನೀಡಿದ ಸಚಿವ ಆರ್ ಅಶೋಕ್
ಹೊನ್ನಾಳಿ ತಾಲೂಕಿನ ಕುಂದೂರಿನಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದ ಅಶೋಕ್, ಸ್ಮಶಾನಕ್ಕೆ ಜಾಗ ನೀಡಿದರೆ 25-30 ಲಕ್ಷ ರೂ. ಕೊಡುತ್ತೇವೆ. ಒಂದು ಎಕರೆ ಭೂಮಿಗೆ 25-30 ಲಕ್ಷ ರೂ. ಕೊಡುತ್ತೇವೆ ಅಂತ ತಿಳಿಸಿದ್ದಾರೆ.
ದಾವಣಗೆರೆ: ಜಿಲ್ಲೆಯ ಹೊನ್ನಾಳಿ ತಾಲೂಕಿನ ಅಣಜಿ ಗ್ರಾಮದ ಇಬ್ಬರು ಸಹೋದರಿಯರು ತಂದೆ- ತಾಯಿ ಕಳೆದುಕೊಂಡು ಅನಾಥರಾಗಿದ್ದು, ಇಬ್ಬರು ಸಹೋದರಿಯರ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ಕಂದಾಯ ಸಚಿವ ಆರ್.ಅಶೋಕ್ ತೆಗೆದುಕೊಂಡಿದ್ದಾರೆ. 10ನೇ ತರಗತಿಯವರೆಗೆ ಓದಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ. ವಿದ್ಯಾರ್ಥಿನಿಯರ ತಂದೆ- ತಾಯಿ ಇಬ್ಬರು ಅನಾರೋಗ್ಯದಿಂದ ಮೃತರಾಗಿದ್ದರು. ಮಲ್ಲಿಕಾ ಹಾಗೂ ನಯನಾ ಎಂಬ ಸಹೋದರಿಯರು ಹಿರೇಕೇರೂರು ತಾಲೂಕು ರಟ್ಟಿಹಳ್ಳಿ ಶಾಲೆಯಲ್ಲಿ ಸದ್ಯ ಓದುತ್ತಿದ್ದಾರೆ. ವಿದ್ಯಾರ್ಥಿನಿಯರು ಶಾಲಾ ಶುಲ್ಕ ಕಟ್ಟಲಾಗದ ಸ್ಥಿತಿಯಲ್ಲಿದ್ದಾರೆ. ಕುಂದೂರು ಗ್ರಾಮ ವಾಸ್ತವ್ಯ ಕಾರ್ಯಕ್ರಮ ವೇಳೆ ಸಹೋದರಿಯರಿಗೆ ಸಾಂತ್ವನ ಹೇಳಿದ ಸಚಿವ ಆರ್ ಅಶೋಕ್, 10ನೇ ತರಗತಿಯವರೆಗೆ ಓದಿಸುವುದಾಗಿ ಭರವಸೆ ನೀಡಿದ್ದಾರೆ.
ಹೊನ್ನಾಳಿ ತಾಲೂಕಿನ ಕುಂದೂರಿನಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದ ಅಶೋಕ್, ಸ್ಮಶಾನಕ್ಕೆ ಜಾಗ ನೀಡಿದರೆ 25-30 ಲಕ್ಷ ರೂ. ಕೊಡುತ್ತೇವೆ. ಒಂದು ಎಕರೆ ಭೂಮಿಗೆ 25-30 ಲಕ್ಷ ರೂ. ಕೊಡುತ್ತೇವೆ ಅಂತ ತಿಳಿಸಿದ್ದಾರೆ. ಸ್ಮಶಾನಕ್ಕಾಗಿ ಜಾಗ ನೀಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದರು. ಹೀಗಾಗಿ ಗ್ರಾಮದಲ್ಲಿ ಸ್ಮಶಾನಕ್ಕಾಗಿ ಜಾಗ ಹುಡುಕಲಾಗಿತ್ತು. ಆದರೆ ಸ್ಮಶಾನಕ್ಕೆ ಸೂಕ್ತ ಜಾಗ ಸಿಗದ ಹಿನ್ನೆಲೆ ಒಂದು ಎಕರೆ ಜಮೀನು ನೀಡುವಂತೆ ಅಶೋಕ್ ಮನವಿ ಮಾಡಿದ್ದಾರೆ. ಜೊತೆಗೆ ಸದ್ಯಕ್ಕೆ ತಾತ್ಕಾಲಿಕ ಜಾಗ ಮಾಡಿಕೊಡುವುದಾಗಿ ಭರವಸೆ ನೀಡಿದ ಅವರು, ಶವ ಹೂಳುವ ಬದಲು ಸುಡುವಂತೆ ಅಶೋಕ್ ಮನವಿ ಮಾಡಿಕೊಂಡಿದ್ದಾರೆ. ಇನ್ನು ಗ್ರಾಮ ವಾಸ್ತವ್ಯದ ವೇಳೆ 1,000ಕ್ಕೂ ಹೆಚ್ಚು ಮನವಿ ಸ್ವೀಕರಿಸಿದ್ದಾರೆ.
ಇದೇ ವೇಳೆ ಬೆಂಗಳೂರು ನಗರ ಜಿಲ್ಲೆಯ ಉಸ್ತುವಾರಿ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಸಚಿವ ವಿ.ಸೋಮಣ್ಣ ಮತ್ತು ನನ್ನ ಮಧ್ಯೆ ಭಿನ್ನಾಭಿಪ್ರಾಯವಿಲ್ಲ. ಹೈಕಮಾಂಡ್ಗೆ ದೂರು ನೀಡುವ ಬಗ್ಗೆ ನನಗೆ ಏನು ಗೊತ್ತಿಲ್ಲ ಎಂದು ತಿಳಿಸಿದ್ದಾರೆ.
ಹೆಚ್ಡಿಕೆಗೆ ಆರ್ ಅಶೋಕ್ ಟಾಂಗ್ ಈ ಹಿಂದೆ ಒಬ್ಬ ವ್ಯಕ್ತಿ ಗ್ರಾಮ ವಾಸ್ತವ್ಯ ಮಾಡುತ್ತಿದ್ದ. ಆ ವ್ಯಕ್ತಿ ಕೇವಲ ಒಂದು ಹಳ್ಳಿಗೆ ಮಾತ್ರ ಹೋಗುತ್ತಿದ್ದ. ಆದ್ರೆ ನನ್ನ ಗ್ರಾಮ ವಾಸ್ತವ್ಯ ವಿಶೇಷವಾಗಿದೆ ಅಂತ ಪರೋಕ್ಷವಾಗಿ ಮಾಜಿ ಮುಖ್ಯಮಂತ್ತಿ ಹೆಚ್ಡಿ ಕುಮಾರಸ್ವಾಮಿಗೆ ಟಾಂಗ್ ಕೊಟ್ಟಿದ್ದಾರೆ.
ಇದನ್ನೂ ಓದಿ
ಸೈನಿಕರ ಬಗ್ಗೆ ಅಕ್ಷಯ್ ಕುಮಾರ್ ಹೊಸ ಸಿನಿಮಾ; ಪೋಸ್ಟರ್ನಲ್ಲಿ ತಪ್ಪು ಕಂಡುಹಿಡಿದ ಮಾಜಿ ಸೇನಾಧಿಕಾರಿ
Mysuru Dasara 2021: ಜಂಬೂಸವಾರಿ ಮುಗಿಸಿ ಕಾಡಿನತ್ತ ಪ್ರಯಾಣ ಬೆಳೆಸಿದ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ದಸರಾ ಗಜಪಡೆ