AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mysuru Dasara 2021: ಜಂಬೂಸವಾರಿ ಮುಗಿಸಿ ಕಾಡಿನತ್ತ ಪ್ರಯಾಣ ಬೆಳೆಸಿದ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ದಸರಾ ಗಜಪಡೆ

ಇಷ್ಟು ದಿನ ಮೈಸೂರು ಅರಮನೆಯಲ್ಲಿ ರಾಜಾತೀಥ್ಯ ಪಡೆಯುತ್ತಿದ್ದ ಗಜಪಡೆಯ ಕಾಡಿನ ದಿನಚರಿ ಇಲ್ಲಿಗಿಂತ ವಿಭಿನ್ನವಾಗಿರಲಿದೆ. ದಸರಾ ಕ್ಯಾಂಪ್‌ಗೆ ಹೋಗುವ ಆನೆಗಳ ಪಾಲನೆಗೆ ಸಾಕಷ್ಟು ನಿಯಮಗಳಿವೆ. ಆನೆಗಳನ್ನು ಸಹಾ ಸರ್ಕಾರಿ ನೌಕರರೆಂದೇ ಪರಿಗಣಿಸಲಾಗುತ್ತದೆ.

Mysuru Dasara 2021: ಜಂಬೂಸವಾರಿ ಮುಗಿಸಿ ಕಾಡಿನತ್ತ ಪ್ರಯಾಣ ಬೆಳೆಸಿದ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ದಸರಾ ಗಜಪಡೆ
ಜಂಬೂಸವಾರಿ ಮುಗಿಸಿ ಕಾಡಿನತ್ತ ಪ್ರಯಾಣ ಬೆಳೆಸಿದ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ದಸರಾ ಗಜಪಡೆ
TV9 Web
| Edited By: |

Updated on: Oct 17, 2021 | 1:53 PM

Share

ಮೈಸೂರು: ಕೊರೊನಾ ಭೀತಿ ನಡುವೆಯೂ ಸರಳ ಹಾಗೂ ಸಾಂಪ್ರದಾಯಿಕ ದಸರಾ ಯಶಸ್ವಿಯಾಗಿ ನಡೆದಿದೆ. ಚಾಮುಂಡಿ ದೇವಿಯ ಮೆರವಣಿಗೆ ಮಾಡಿ, ಫುಲ್ ರಿಲ್ಯಾಕ್ಸ್ ಮಾಡಿರುವ ಗಜಪಡೆಯನ್ನ ಮೈಸೂರು ಅರಮನೆಯಿಂದ ಬೀಳ್ಕೊಡುಗೆ ನೀಡುವ ಸಮಯ ಸನಿಹಕ್ಕೆ ಬಂದಿದ್ದು ಇಂದು ಅರಮನೆಯಲ್ಲಿ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಬೀಳ್ಕೊಡುಗೆ ನೀಡಲಾಗಿದೆ.

ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ಸೆ.13ರಂದು ಮೈಸೂರಿಗೆ 8 ಆನೆಗಳು ಆಗಮಿಸಿದ್ದವು. ಸದ್ಯ ದಸರಾ ಮುಗಿದಿದ್ದು ತಮ್ಮ ತಮ್ಮ ಮನೆಗಳಿಗೆ ಆನೆಗಳು ಹಿಂತಿರುಗುತ್ತಿವೆ. ಅಭಿಮನ್ಯು, ಗೋಪಾಲಸ್ವಾಮಿ ಮತ್ತಿಗೋಡು ಆನೆ ಶಿಬಿರಕ್ಕೆ ಹೋದ್ರೆ ಅಶ್ವತ್ಥಾಮ ಆನೆ ದೊಡ್ಡ ಹರವೆ ಆನೆ ಶಿಬಿರಕ್ಕೆ ರವಾನಿಸಲಾಗುತ್ತಿದೆ. ಹಾಗೂ ವಿಕ್ರಮ, ಧನಂಜಯ, ಕಾವೇರಿ ದುಬಾರೆ ಆನೆ ಶಿಬಿರ, ಚೈತ್ರ, ಲಕ್ಷ್ಮೀ ಬಂಡೀಪುರದ ರಾಮಪುರ ಕ್ಯಾಂಪ್‌ಗೆ ಲಾರಿಗಳ ಮೂಲಕ ರವಾನಿಸಲಾಗುತ್ತಿದೆ. ಅರಮನೆಯಲ್ಲಿ ಪೂಜೆ ಸಲ್ಲಿಸುವ ಮೂಲಕ ದಸರಾ ಆನೆಗಳಿಗೆ ವಿದಾಯ ಹೇಳಲಾಗಿದೆ.

ಇಷ್ಟು ದಿನ ಮೈಸೂರು ಅರಮನೆಯಲ್ಲಿ ರಾಜಾತೀಥ್ಯ ಪಡೆಯುತ್ತಿದ್ದ ಗಜಪಡೆಯ ಕಾಡಿನ ದಿನಚರಿ ಇಲ್ಲಿಗಿಂತ ವಿಭಿನ್ನವಾಗಿರಲಿದೆ. ದಸರಾ ಕ್ಯಾಂಪ್‌ಗೆ ಹೋಗುವ ಆನೆಗಳ ಪಾಲನೆಗೆ ಸಾಕಷ್ಟು ನಿಯಮಗಳಿವೆ. ಆನೆಗಳನ್ನು ಸಹಾ ಸರ್ಕಾರಿ ನೌಕರರೆಂದೇ ಪರಿಗಣಿಸಲಾಗುತ್ತದೆ. ಆನೆಗಳಿಗೆ ನೀಡುವ ಪ್ರಮಾಣ ಸಹಾ ನಿಗದಿಯಾಗಿರುತ್ತದೆ. ಇಲ್ಲಿಯಂತೆ ವಿಶೇಷ ಆಹಾರ ಸಿಗುವುದಿಲ್ಲ. ಆದರೆ ಆನೆಗಳಿಗೆ ಪ್ರಕೃತಿದತ್ತವಾದ ಆಹಾರಗಳು ಯಥೇಚ್ಛವಾಗಿ ಸಿಗುತ್ತದೆ. ಇನ್ನು ಈ ಕಾಡು ಆನೆಗಳು ಕಾಡಿನಲ್ಲಿ ಪ್ರಮುಖ ಸೇನಾನಿಗಳಾಗಿ ಕೆಲಸ ಮಾಡುತ್ತವೆ. ಮುಖ್ಯವಾಗಿ ಕಾಡು ಪ್ರಾಣಿಗಳು ನಾಡಿಗೆ ಬಂದಾಗ ಅವುಗಳನ್ನು ಮತ್ತೆ ಕಾಡಿಗೆ ಹಿಮ್ಮೆಟ್ಟಿಸುವ ಮಹತ್ವದ ಕೆಲಸಕ್ಕೆ ಈ ಆನೆಗಳನ್ನು ಬಳಸಿಕೊಳ್ಳಲಾಗುತ್ತದೆ. ಅಷ್ಟೇ ಅಲ್ಲ ಕಾಡಿನಲ್ಲಿ ಸೆರೆ ಸಿಗುವ ಕಾಡಾನೆಗಳನ್ನು ಪಳಗಿಸಲು ಈ ಆನೆಗಳದ್ದೆ ಮಹತ್ವದ ಪಾತ್ರವಾಗಿರುತ್ತದೆ.

Dasara Elephants

ದಸರಾ ಆನೆ

Dasara Elephants

ಲಾರಿಗಳ ಮೂಲಕ ದಸರಾ ಆನೆಗಳನ್ನು ರವಾನಿಸಲಾಗುತ್ತಿದೆ.

ಇದನ್ನೂ ಓದಿ: ದಸರಾ ಹಬ್ಬ ಎಲ್ಲ ಭಾರತೀಯರಿಗೆ ಒಂದೇಯಾದರೂ ಆಚರಣೆಗಳಲ್ಲಿ ಮಾತ್ರ ನಾನಾ ವಿಧ!

48 ಗಂಟೆಗಳಲ್ಲಿ ಅಭಿಷೇಕ್ ದಾಖಲೆ ಮುರಿದ ಇಶಾನ್ ಕಿಶನ್
48 ಗಂಟೆಗಳಲ್ಲಿ ಅಭಿಷೇಕ್ ದಾಖಲೆ ಮುರಿದ ಇಶಾನ್ ಕಿಶನ್
ಬಿಗ್ ಬಾಸ್: ಬಂಗಾರದ ಅಂಗಡಿಯಲ್ಲಿ ಕಾವ್ಯಾ ಜೊತೆ ಸೆಲ್ಫಿಗೆ ಮುಗಿಬಿದ್ದ ಜನ
ಬಿಗ್ ಬಾಸ್: ಬಂಗಾರದ ಅಂಗಡಿಯಲ್ಲಿ ಕಾವ್ಯಾ ಜೊತೆ ಸೆಲ್ಫಿಗೆ ಮುಗಿಬಿದ್ದ ಜನ
ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ