AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಕ್ಕಮಟ್ಟಿಗೆ ಚೇತರಿಕೆ ಕಂಡ ಮೈಸೂರು ಉದ್ಯಮ; ಟಿವಿ9 ಮಂಥನ ತಂಡಕ್ಕೆ ಮೈಸೂರು ಸಂಘ ಸಂಸ್ಥೆಗಳ ಒಕ್ಕೂಟದಿಂದ ಕೃತಜ್ಞತೆ

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2021 ಅತ್ಯಂತ ಯಶಸ್ವಿಯಾಗಿ ಮುಕ್ತಾಯವಾಗಿದೆ. ಮೈಸೂರಿನ ಉದ್ಯಮ ನಿರೀಕ್ಷಿಸಿದಷ್ಟು ಅಲ್ಲದಿದ್ದರೂ ತಕ್ಕಮಟ್ಟಿಗೆ ಚೇತರಿಕೆ ಕಂಡಿದೆ.

ತಕ್ಕಮಟ್ಟಿಗೆ ಚೇತರಿಕೆ ಕಂಡ ಮೈಸೂರು ಉದ್ಯಮ; ಟಿವಿ9 ಮಂಥನ ತಂಡಕ್ಕೆ ಮೈಸೂರು ಸಂಘ ಸಂಸ್ಥೆಗಳ ಒಕ್ಕೂಟದಿಂದ ಕೃತಜ್ಞತೆ
ಮೈಸೂರು ದಸರಾ ಜಂಬೂ ಸವಾರಿ (ಸಂಗ್ರಹ ಚಿತ್ರ)
TV9 Web
| Edited By: |

Updated on: Oct 18, 2021 | 8:47 AM

Share

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ 2021ರಲ್ಲಿ ಉದ್ಯಮದಲ್ಲಿ ತಕ್ಕಮಟ್ಟಿಕೆ ಚೇತರಿಕೆ ಕಂಡಿದೆ. ಇದಕ್ಕೆ ಕಾರಣರಾದ ಎಲ್ಲರಿಗೂ ಧನ್ಯವಾದ. ಟಿವಿ9 ಮಂಥನ ತಂಡಕ್ಕೆ ವಿಶೇಷ ಧನ್ಯವಾದಗಳು ಅಂತ ಮೈಸೂರು ಸಂಘ ಸಂಸ್ಥೆಗಳ ಒಕ್ಕೂಟ ಕೃತಜ್ಞತೆ ಸಲ್ಲಿಸಿದೆ. ಸರಳ ದಸರಾ ಹಿನ್ನೆಲೆ ವ್ಯಾಪಾರಿಗಳು ವ್ಯಾಪಾರ ಕುಂಠಿತಗೊಳ್ಳುವ ಆತಂಕದಲ್ಲಿದ್ದರು. ಮೈಸೂರು ವ್ಯಾಪಾರಿಗಳ ಸಂಕಷ್ಟದ ಮೇಲೆ ಟಿವಿ9 ಮಂಥನ ಬೆಳಕು ಚೆಲ್ಲಿತ್ತು. ಸದ್ಯ ಉದ್ಯಮಗಳು ಸ್ವಲ್ಪ ಮಟ್ಟಿಗೆ ಚೇತರಿಕೆ ಕಂಡಿವೆ. ಹೀಗಾಗಿ ಟಿವಿ9 ಮಂಥನ ತಂಡಕ್ಕೆ ಸಂಘ ಸಂಸ್ಥೆಗಳ ಒಕ್ಕೂಟ ವಿಶೇಷ ಧನ್ಯವಾದ ತಿಳಿಸಿದೆ.

ಪತ್ರಿಕಾ ಪ್ರಕಟಣೆ ಸಾರಾಂಶ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2021 ಅತ್ಯಂತ ಯಶಸ್ವಿಯಾಗಿ ಮುಕ್ತಾಯವಾಗಿದೆ. ಮೈಸೂರಿನ ಉದ್ಯಮ ನಿರೀಕ್ಷಿಸಿದಷ್ಟು ಅಲ್ಲದಿದ್ದರೂ ತಕ್ಕಮಟ್ಟಿಗೆ ಚೇತರಿಕೆ ಕಂಡಿದೆ. ಇದಕ್ಕೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಕಾರಣರಾದ ಎಲ್ಲರಿಗೂ ಮೈಸೂರು ಸಂಘ ಸಂಸ್ಥೆಗಳ ಒಕ್ಕೂಟದಿಂದ ಧನ್ಯವಾದಗಳು. ದಸರಾ ಸಮಯದಲ್ಲಿ ಉತ್ತಮವಾಗಿರುತ್ತಿದ್ದ ಮೈಸೂರು ವ್ಯಾಪಾರಿಗಳ ಪರಿಸ್ಥಿತಿ ಕಳೆದ ವರ್ಷ ಸರಳ ದಸರಾದಿಂದಾಗಿ ಚಿಂತಾಜನಕವಾಗಿತ್ತು ಅಂತ ಮೈಸೂರು ಸಂಘ ಸಂಸ್ಥೆಗಳ ಒಕ್ಕೂಟ ತಿಳಿಸಿದೆ.

ಆದರೆ, ಈ ಬಾರಿ ಸ್ವಲ್ಪ ಚೇತರಿಸಿಕೊಂಡಿದೆ. ಮೈಸೂರು ವ್ಯಾಪಾರಿಗಳ ಉದ್ಯಮಗಳ ವಾಸ್ತವ ಸ್ಥಿತಿ ಬಗ್ಗೆ ಬೆಳಕು ಚೆಲ್ಲಿದ ಟಿವಿ9 ಮಂಥನ ತಂಡಕ್ಕೆ ವಿಶೇಷ ಧನ್ಯವಾದಗಳು. ಮೈಸೂರಿನ ಕಡಲೆಕಾಯಿ ವ್ಯಾಪಾರಿಗಳಿಂದ ಹಿಡಿದು, ಹೋಟೆಲ್ ಉದ್ಯಮಿಗಳು, ಪ್ರವಾಸೋದ್ಯಮಿಗಳವರೆಗೂ ಎಲ್ಲರ ಸಮಸ್ಯೆಯನ್ನು ಎಳೆ ಎಳೆಯಾಗಿ ಬಿಚ್ಚಿಡುವ ಪ್ರಾಮಾಣಿಕ ಪ್ರಯತ್ನವನ್ನು ಟಿವಿ9 ಮಂಥನ ತಂಡ ಮಾಡಿದೆ. ಈ ಕಾರ್ಯಕ್ರದಿಂದ ಪ್ರವಾಸೋದ್ಯಮವನ್ನು ಅವಲಂಬಿಸಿರುವವರ ಬದುಕಿನ ಒಳಹೊರಗಿನ ಪರಿಸ್ಥಿತಿ ಎಲ್ಲರ ಅರಿವಿಗೂ ಬಂದಿತು.

ಮತ್ತಷ್ಟು ಉತ್ತಮ ಕೆಲಸಗಳು ಟಿವಿ9 ತಂಡದಿಂದ ಆಗಲಿ ಉತ್ತಮ ಸಮಾಜಕ್ಕಾಗಿ ಎಂಬ ಧೈಯದೊಂದಿಗೆ ಕೆಲಸ ಮಾಡುತ್ತಿರುವ ಕನ್ನಡದ ನಂಬರ್ 1 ವಾಹಿನಿ ಟಿವಿ9 ಮತ್ತಷ್ಟು ಉತ್ತಮ ಕೆಲಸಗಳನ್ನು ಮಾಡಿ ಬಡವರು ನೊಂದವರ ಧ್ವನಿಯಾಗಲಿ ಎನ್ನುವುದು ನಮ್ಮ ಹಾರೈಕೆ ಅಂತ ಸಂಘ ಸಂಸ್ಥೆಗಳ ಒಕ್ಕೂಟ ಶುಭಕೋರಿದೆ.

ಇದನ್ನೂ ಓದಿ

ಬೀದರ್: ನಗರದ ಕೊಳಚೆ ನೀರಿನಿಂದ ಮಲೀನವಾದ ಭೂಮಿ; ತರಕಾರಿ ಬೆಳೆಯಲಾಗದೆ ಕಂಗಾಲಾದ ರೈತರು

ಒಂದೇ ಒಂದು ಮಾತಿನಿಂದ ಟ್ರೋಲಿಗನ ಕಮೆಂಟ್​ ಡಿಲೀಟ್​ ಮಾಡಿಸಿದ ರಶ್ಮಿಕಾ; ಅದರಲ್ಲಿ ಅಂಥದ್ದೇನಿತ್ತು?