Duplicate Fertilizer: ಮಣ್ಣಿಗೆ ರೆಡ್ ಆಕ್ಸೈಡ್​ ಬಣ್ಣ ಬೆರೆಸಿ ನಕಲಿ ಗೊಬ್ಬರ ತಯಾರಿ – 85 ಮೂಟೆ ಜಪ್ತಿ

Duplicate Fertilizer: ಮಣ್ಣಿಗೆ ರೆಡ್ ಆಕ್ಸೈಡ್​ ಬಣ್ಣ ಬೆರೆಸಿ ನಕಲಿ ಗೊಬ್ಬರ ತಯಾರಿ - 85 ಮೂಟೆ ಜಪ್ತಿ
ಮಣ್ಣಿಗೆ ರೆಡ್ ಆಕ್ಸೈಡ್​ ಬಣ್ಣ ಬೆರೆಸಿ ನಕಲಿ ಗೊಬ್ಬರ ತಯಾರಿ: 85 ಮೂಟೆ ಜಪ್ತಿ

ಪೋಟಾಷಿಯಂ, ಎಂಒಪಿ, ಉಪ್ಪು , ಡಿಎಪಿ ಇತ್ಯಾದಿ ಗೊಬ್ಬರಗಳ ಮಾದರಿಯಲ್ಲಿ ನಕಲಿ ಗೊಬ್ಬರ, ಮಣ್ಣು, ಕೆರೆಯ ಗೋಡು ಮಣ್ಣಿಗೆ ರೆಡ್ ಆಕ್ಸೈಡ್​ ಬಣ್ಣ ಬೆರೆಸಿ ನಕಲಿ ಗೊಬ್ಬರ ಸಿದ್ಧಪಡಿಸಲಾಗಿತ್ತು. 85 ಮೂಟೆ ನಕಲಿ ಗೊಬ್ಬರ ವಶಕ್ಕೆ (duplicate fertilizer) ತೆಗೆದುಕೊಂಡು ನಕಲಿ ಗೊಬ್ಬರ ಇಲಾಖಾ ಪರೀಕ್ಷೆಗೆ ರವಾನೆ ಮಾಡಲಾಗಿದೆ.

TV9kannada Web Team

| Edited By: sadhu srinath

Oct 18, 2021 | 1:26 PM


ಮೈಸೂರು: ರೈಸ್ ಮಿಲ್‌ನಲ್ಲಿ ದಾಸ್ತಾನು ಮಾಡಿದ್ದ 85 ಮೂಟೆ ನಕಲಿ ಗೊಬ್ಬರವನ್ನು ತಹಶೀಲ್ದಾರ್ ಸಂತೋಷ್ ನೇತೃತ್ವದಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳೊಂದಿಗೆ ಕಾರ್ಯಾಚರಣೆ ನಡೆಸಿ, ಜಪ್ತಿ ಮಾಡಲಾಗಿದೆ. ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಹರಂಬಳ್ಳಿ ಗ್ರಾಮದ ಹೇಮಾವತಿ ರೈಸ್ ಮಿಲ್‌ನಲ್ಲಿ ಪ್ರಕರಣ ಪತ್ತೆಯಾಗಿದೆ.

ಪೋಟಾಷಿಯಂ, ಎಂಒಪಿ, ಉಪ್ಪು, ಡಿಎಪಿ ಇತ್ಯಾದಿ ಗೊಬ್ಬರಗಳ ಮಾದರಿಯಲ್ಲಿ ನಕಲಿ ಗೊಬ್ಬರ, ಮಣ್ಣು, ಕೆರೆಯ ಗೋಡು ಮಣ್ಣಿಗೆ ರೆಡ್ ಆಕ್ಸೈಡ್​ ಬಣ್ಣ ಬೆರೆಸಿ ನಕಲಿ ಗೊಬ್ಬರ ಸಿದ್ಧಪಡಿಸಲಾಗಿತ್ತು. 85 ಮೂಟೆ ನಕಲಿ ಗೊಬ್ಬರ ವಶಕ್ಕೆ (duplicate fertilizer) ತೆಗೆದುಕೊಂಡು ನಕಲಿ ಗೊಬ್ಬರ ಇಲಾಖಾ ಪರೀಕ್ಷೆಗೆ ರವಾನೆ ಮಾಡಲಾಗಿದೆ. ವರದಿ‌ ಬಂದ ನಂತರ ಪ್ರಕರಣ ದಾಖಲಿಕೊಳ್ಳಲು ತಹಶೀಲ್ದಾರ್ ನಿರ್ಧಾರ ಮಾಡಿದ್ದಾರೆ.

ಇದನ್ನೂ ಓದಿ:
ಅಗತ್ಯಕ್ಕಿಂತ ಕಡಿಮೆ ಪ್ರಮಾಣದಲ್ಲಿ ರಸಗೊಬ್ಬರ ಪೂರೈಕೆ; ಬೆಳೆ ಕಳೆದುಕೊಳ್ಳುವ ಆತಂಕದಲ್ಲಿ ಅನ್ನದಾತರು

ವಿಷಪ್ರಾಶನದಿಂದ ಒಂದೇ ಕುಟುಂಬದ ನಾಲ್ವರ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ |DeathMistry |Tv9kannada

(artificial fertilizer in 85 bags confiscated in rice mill in kr nagar taluk)

Follow us on

Most Read Stories

Click on your DTH Provider to Add TV9 Kannada