ಅ.19 ರಂದು ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ರಥೋತ್ಸವ; ಭಕ್ತರ ಪ್ರವೇಶಕ್ಕೆ ನಿರ್ಬಂಧ
Mysuru News: ಸಂಪ್ರದಾಯದಂತೆ ಜರುಗುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಎಂದಿನಂತೆ ನಡೆಯಲಿದೆ. ದೇವಾಲಯದ ಅಧಿಕಾರಿಗಳು ಆರ್ಚಕರು ಸಿಬ್ಬಂದಿಗಳು ಭಾಗಿ ಆಗಲಿದ್ದಾರೆ. ಮೆಟ್ಟಿಲು ಮಾರ್ಗದಿಂದ ಚಾಮುಂಡಿಬೆಟ್ಟಕ್ಕೆ ಭಕ್ತರು, ಸಾರ್ವಜನಿಕರು ಬರುವುದಕ್ಕೂ ನಿಷೇಧ ಹೇರಲಾಗಿದೆ.
ಮೈಸೂರು: ನಾಳೆ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ರಥೋತ್ಸವ ನಡೆಯಲಿದೆ. ಚಾಮುಂಡಿ ರಥೋತ್ಸವಕ್ಕೆ ಭಕ್ತರಿಗೆ ಪ್ರವೇಶ ಇಲ್ಲ ಎಂದು ತಿಳಿಸಲಾಗಿದೆ. ನಾಳೆ (ಅಕ್ಟೋಬರ್ 19) ಮುಂಜಾನೆ 4 ರಿಂದ ಬೆಳಗ್ಗೆ 10 ಗಂಟೆ ವರೆಗೆ ಭಕ್ತರಿಗೆ ಪ್ರವೇಶವಿಲ್ಲ ಎಂದು ತಿಳಿಸಲಾಗಿದೆ. ಚಾಮುಂಡಿ ರಥೋತ್ಸವಕ್ಕೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಲನೆ ನೀಡಲಿದ್ದಾರೆ. ಬೆಟ್ಟದ ಬಳಿಗೆ ಸಾರ್ವಜನಿಕ ವಾಹನಗಳ ಪ್ರವೇಶಕ್ಕೂ ಬ್ರೇಕ್ ಹಾಕಲಾಗಿದೆ.
ಸಂಪ್ರದಾಯದಂತೆ ಜರುಗುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಎಂದಿನಂತೆ ನಡೆಯಲಿದೆ. ದೇವಾಲಯದ ಅಧಿಕಾರಿಗಳು ಆರ್ಚಕರು ಸಿಬ್ಬಂದಿಗಳು ಭಾಗಿ ಆಗಲಿದ್ದಾರೆ. ಮೆಟ್ಟಿಲು ಮಾರ್ಗದಿಂದ ಚಾಮುಂಡಿಬೆಟ್ಟಕ್ಕೆ ಭಕ್ತರು, ಸಾರ್ವಜನಿಕರು ಬರುವುದಕ್ಕೂ ನಿಷೇಧ ಹೇರಲಾಗಿದೆ. ಸರ್ಕಾರಿ ವಾಹನ, ಚಾಮುಂಡಿಬೆಟ್ಟದ ಗ್ರಾಮಸ್ಥರ ವಾಹನ, ತುರ್ತು ಸೇವಾ ವಾಹನಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಘೋಷಿಸಲ್ಪಟ್ಟ ಶಿಷ್ಟಾಚಾರ ವ್ಯವಸ್ಥೆ ಹೊಂದಿರುವ ಗಣ್ಯ ವ್ಯಕ್ತಿಗಳು ಹಾಗೂ ಅವರ ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.
ದಸರಾ ದೀಪಾಲಂಕಾರ 9 ದಿನ ಮುಂದುವರಿಕೆ: ಬಸವರಾಜ ಬೊಮ್ಮಾಯಿ ವಿಜಯ ದಶಮಿ ದಿನದ ಬಳಿಕವೂ ನಂತರದ 9 ದಿನ ದಸರಾ ದೀಪಾಲಂಕಾರ ಮುಂದುವರಿಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಕ್ಟೋಬರ್ 15ರಂದು ಅಧಿಕೃತ ಘೋಷಣೆ ಮಾಡಿದ್ದರು. ಸುತ್ತೂರು ಶಾಖಾ ಮಠದಲ್ಲಿ ಸಿಎಂ ಬೊಮ್ಮಾಯಿ ಈ ಬಗ್ಗೆ ಹೇಳಿಕೆ ನೀಡಿದ್ದರು. ದಸರಾ ದೀಪಾಲಂಕಾರ ಮುಂದುವರಿಸಲು ಜನರ ಬೇಡಿಕೆ ಇದೆ. ಹಾಗಾಗಿ ವಿದ್ಯುತ್ ದೀಪಾಲಂಕಾರ ಮುಂದುವರಿಸಲಾಗುವುದು. ಇಂದಿನಿಂದ 9 ದಿನ ದೀಪಾಲಂಕಾರ ಮುಂದುವರಿಯಲಿದೆ ಎಂದು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠದಲ್ಲಿ ಬೊಮ್ಮಾಯಿ ಹೇಳಿದ್ದರು.
ಸಿಎಂ ಬೊಮ್ಮಾಯಿ ರಾಜ್ಯದ ಜನತೆಗೆ ನಾಡ ಹಬ್ಬ ದಸರಾದ ಶುಭಾಶಯ ಕೋರಿದ್ದರು. ರಾಜ್ಯ ಮತ್ತಷ್ಟು ಸುಭಿಕ್ಷವಾಗಲಿ. ತಾಯಿ ಚಾಮುಂಡೇಶ್ವರಿ ನಾಡಿನ ಜನತೆಗೆ ಹರಸಲಿ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ನಾಡಿಗೆ ಶುಭಹಾರೈಸಿದ್ದರು. ಸುತ್ತೂರು ಶಾಖಾ ಮಠಕ್ಕೆ ಸಿಎಂ ಬೊಮ್ಮಾಯಿ ಭೇಟಿ ಕೊಟ್ಟಿದ್ದರು. ಮಠದಲ್ಲಿ ಸಿಎಂ ಬೊಮ್ಮಾಯಿಗೆ ಸಾಂಪ್ರದಾಯಿಕ ಸ್ವಾಗತ ಕೋರಲಾಗಿತ್ತು. ಮಠದ ಆವರಣದಲ್ಲಿ ಚಾಮುಂಡೇಶ್ವರಿ ದೇವಿಗೆ ಬಸವರಾಜ ಬೊಮ್ಮಾಯಿ ಪೂಜೆ ಸಲ್ಲಿಸಿದ್ದರು.
ಇದನ್ನೂ ಓದಿ: ಪ್ರವಾಸಿಗರ ಗಮನಕ್ಕೆ: ಮೈಸೂರು ಮೃಗಾಲಯಕ್ಕೆ ಹೆಚ್ಚಿನ ಜನ ಬರುವ ನಿರೀಕ್ಷೆ; ಹೀಗಾಗಿ ನಾಳೆ ವಾರದ ರಜೆ ಇಲ್ಲ
ಇದನ್ನೂ ಓದಿ: ತಕ್ಕಮಟ್ಟಿಗೆ ಚೇತರಿಕೆ ಕಂಡ ಮೈಸೂರು ಉದ್ಯಮ; ಟಿವಿ9 ಮಂಥನ ತಂಡಕ್ಕೆ ಮೈಸೂರು ಸಂಘ ಸಂಸ್ಥೆಗಳ ಒಕ್ಕೂಟದಿಂದ ಕೃತಜ್ಞತೆ
Published On - 7:50 pm, Mon, 18 October 21