Rashmika Mandanna: ಒಂದೇ ಒಂದು ಮಾತಿನಿಂದ ಟ್ರೋಲಿಗನ ಕಮೆಂಟ್​ ಡಿಲೀಟ್​ ಮಾಡಿಸಿದ ರಶ್ಮಿಕಾ; ಅದರಲ್ಲಿ ಅಂಥದ್ದೇನಿತ್ತು?

ದಸರಾ ಹಬ್ಬದ ಪ್ರಯುಕ್ತ ರಶ್ಮಿಕಾ ಮಂದಣ್ಣ ಅವರ ಹೊಸ ಚಿತ್ರದ ಪೋಸ್ಟರ್​ ಬಿಡುಗಡೆ ಆಯಿತು. ಅದಕ್ಕೆ ವ್ಯಕ್ತಿಯೊಬ್ಬ ವ್ಯಂಗ್ಯವಾಗಿ ಕಮೆಂಟ್​ ಮಾಡಿದ್ದ. ಆತನಿಗೆ ರಶ್ಮಿಕಾ ಸೂಕ್ತ ತಿರುಗೇಟು ನೀಡಿದ್ದಾರೆ.

Rashmika Mandanna: ಒಂದೇ ಒಂದು ಮಾತಿನಿಂದ ಟ್ರೋಲಿಗನ ಕಮೆಂಟ್​ ಡಿಲೀಟ್​ ಮಾಡಿಸಿದ ರಶ್ಮಿಕಾ; ಅದರಲ್ಲಿ ಅಂಥದ್ದೇನಿತ್ತು?
ರಶ್ಮಿಕಾ ಮಂದಣ್ಣ
Follow us
TV9 Web
| Updated By: ಮದನ್​ ಕುಮಾರ್​

Updated on:Oct 18, 2021 | 10:00 AM

ನಟಿ ರಶ್ಮಿಕಾ ಮಂದಣ್ಣ ಅವರು ಈಗ ಸ್ಟಾರ್ ನಟಿಯಾಗಿ ಮಿಂಚುತ್ತಿದ್ದಾರೆ. ಬಹುಭಾಷೆಯಲ್ಲಿ ಅವರಿಗೆ ಬೇಡಿಕೆ ಸೃಷ್ಟಿಯಾಗಿದೆ. ದಕ್ಷಿಣ ಭಾರತ ಮಾತ್ರವಲ್ಲದೇ ಬಾಲಿವುಡ್​ಗೂ ಅವರು ಕಾಲಿಟ್ಟಿದ್ದಾರೆ. ಅವರ ಕೆಲಸಕ್ಕೆ ಅಭಿಮಾನಿಗಳು ಪ್ರೋತ್ಸಾಹ ನೀಡುತ್ತಾರೆ. ಆದರೆ ಟ್ರೋಲಿಗರ ಮಾತ್ರ ಬರೀ ಕಾಲೆಳೆಯುವ ಕೆಲಸ ಮಾಡಿಕೊಂಡಿದ್ದಾರೆ. ಅಂಥ ಒಬ್ಬ ಟ್ರೋಲಿಗನಿಗೆ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಖಡಕ್​ ಉತ್ತರ ನೀಡಿದ್ದಾರೆ. ಅವರ ಉತ್ತರ ಕಂಡು ಎಲ್ಲರೂ ಭೇಷ್​ ಎನ್ನುತ್ತಿದ್ದಾರೆ. ಪದೇ ಪದೇ ರಶ್ಮಿಕಾ ಮಂದಣ್ಣ ಅವರನ್ನೇ ಟಾಲಿವುಡ್​ ಮಂದಿ ಯಾಕೆ ಹೀರೋಯಿನ್​ ಆಗಿ ಸೆಲೆಕ್ಟ್​ ಮಾಡಿಕೊಳ್ಳುತ್ತಿದ್ದಾರೆ ಎಂಬ ಟ್ರೋಲಿಗನ ಪ್ರಶ್ನೆಗೆ ಕೊಡಗಿನ ಕುವರಿ ಸ್ಮಾರ್ಟ್​ ಆಗಿ ಉತ್ತರಿಸಿದ್ದಾರೆ.

ದಸರಾ ಹಬ್ಬದ ಪ್ರಯುಕ್ತ ರಶ್ಮಿಕಾ ಮಂದಣ್ಣ ಅವರ ಹೊಸ ಚಿತ್ರದ ಪೋಸ್ಟರ್​ ಬಿಡುಗಡೆ ಆಯಿತು. ಅದಕ್ಕೆ ವ್ಯಕ್ತಿಯೊಬ್ಬ ವ್ಯಂಗ್ಯವಾಗಿ ಕಮೆಂಟ್​ ಮಾಡಿದ್ದ. ‘ಪದೇ ಪದೇ ರಶ್ಮಿಕಾ ಅವರನ್ನೇ ಟಾಲಿವುಡ್​ನವರು ಆಯ್ಕೆ ಮಾಡಿಕೊಳ್ಳುತ್ತಿರುವುದು ಯಾಕೆ’ ಎಂಬುದು ಆತನ ವ್ಯಂಗ್ಯದ ಪ್ರಶ್ನೆಯಾಗಿತ್ತು. ಅದಕ್ಕೆ ಪ್ರತಿಕ್ರಿಯಿಸಿದ ರಶ್ಮಿಕಾ, ‘ನನ್ನ ನಟನೆಗೋಸ್ಕರ’ ಎಂದು ಕಮೆಂಟ್​ ಮಾಡಿದರು. ಈ ಕಮೆಂಟ್​ ಸಖತ್​ ವೈರಲ್​ ಆಗಿದೆ.

ರಶ್ಮಿಕಾ ಮಾಡಿದ ಈ ಕಮೆಂಟ್​ ನೋಡಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಆ ಕಮೆಂಟ್​ ಇಟ್ಟುಕೊಂಡು ರಶ್ಮಿಕಾ ಫ್ಯಾನ್ಸ್​ ಬಗೆಬಗೆಯಲ್ಲಿ ಮೀಮ್ಸ್​ ಮಾಡುವ ಮೂಲಕ ಆ ಟ್ರೋಲಿಗನಿಗೆ ತಕ್ಕ ಪಾಠ ಕಲಿಸಿದರು. ಕಡೆಗೆ ವಿಧಿ ಇಲ್ಲದೇ ಆತ ತನ್ನ ಕಮೆಂಟ್​ ಡಿಲೀಟ್​ ಮಾಡಿದ್ದಾನೆ. ಒಟ್ಟಿನಲ್ಲಿ ಟ್ರೋಲ್​ ಮಂದಿಯನ್ನು ಹೇಗೆ ನಿಭಾಯಿಸಬೇಕು ಎಂದು ರಶ್ಮಿಕಾ ಚೆನ್ನಾಗಿ ಅರಿತುಕೊಂಡಂತಿದೆ.

ಸದ್ಯ ರಶ್ಮಿಕಾ ಕೈಯಲ್ಲಿ ಹಲವು ಸಿನಿಮಾಗಳಿವೆ. ಅಲ್ಲು ಅರ್ಜುನ್​ ಜೊತೆ ನಟಿಸಿರುವ ‘ಪುಷ್ಪ’ ಚಿತ್ರ ಡಿಸೆಂಬರ್​ 17ರಂದು ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ಅವರು ಶ್ರೀವಲ್ಲಿ ಎಂಬ ಪಾತ್ರ ಮಾಡಿದ್ದಾರೆ. ಇತ್ತೀಚೆಗೆ ಶ್ರೀವಲ್ಲಿ ಪಾತ್ರದ ಪೋಸ್ಟರ್​ ಮತ್ತು ಸಾಂಗ್​ ಬಿಡುಗಡೆ ಆಗಿತ್ತು. ‘ಪುಷ್ಪ’ ಚಿತ್ರದಿಂದ ರಶ್ಮಿಕಾ ವೃತ್ತಿಜೀವನಕ್ಕೆ ದೊಡ್ಡ ಮೈಲೇಜ್​ ಸಿಗುವ ನಿರೀಕ್ಷೆ ಇದೆ. ಅತ್ತ ಬಾಲಿವುಡ್​ನಲ್ಲಿ ಅಮಿತಾಭ್​ ಬಚ್ಚನ್​ ಜೊತೆ ‘ಗುಡ್​ಬೈ’ ಹಾಗೂ ಸಿದ್ದಾರ್ಥ್​ ಮಲ್ಹೋತ್ರಾ ಜೊತೆ ‘ಮಿಷನ್​ ಮಜ್ನು’ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ. ‘ಪೊಗರು’ ನಂತರ ಅವರು ಯಾವುದೇ ಕನ್ನಡ ಸಿನಿಮಾವನ್ನು ಒಪ್ಪಿಕೊಂಡಿಲ್ಲ.

ಇದನ್ನೂ ಓದಿ:

ಮಾರ್ಕೆಟ್​ನಿಂದ ಟಾಯ್ಲೆಟ್​ವರೆಗೆ ಎಲ್ಲೆಲ್ಲೂ ರಶ್ಮಿಕಾ; ‘ಪುಷ್ಪ’ ಚಿತ್ರದ ಶ್ರೀವಲ್ಲಿ ಗೆಟಪ್​ ಸಿಕ್ಕಾಪಟ್ಟೆ ಟ್ರೋಲ್​​

ಈ ಅವತಾರದಲ್ಲಿ ಬಂದು ಅಭಿಮಾನಿಗಳಿಗೆ ರಶ್ಮಿಕಾ ಹೇಳಿದ್ದೇನು; ಹೊಸ ಫೋಟೋ ವೈರಲ್​

Published On - 8:00 am, Mon, 18 October 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ