Vicky Kaushal: ಕತ್ರೀನಾ ಜೊತೆಗಿನ ಎಂಗೇಜ್ಮೆಂಟ್ ಕುರಿತು ಕೊನೆಗೂ ಮೌನ ಮುರಿದ ವಿಕ್ಕಿ ಕೌಶಲ್
Katrina Kaif: ಬಾಲಿವುಡ್ನಲ್ಲಿ ಸದ್ಯ ಚರ್ಚೆಯಲ್ಲಿರುವ ಗಾಸಿಪ್ ಜೋಡಿಗಳಲ್ಲಿ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಜೋಡಿಯೂ ಒಂದು. ಇತ್ತೀಚೆಗೆ ವಿಕ್ಕಿ ಕೌಶಲ್ ನಿಶ್ಚಿತಾರ್ಥದ ಕುರಿತು ಮಾತನಾಡಿದ್ದು, ಗಾಸಿಪ್ಗಳು ಅಂತ್ಯವಾಗುವ ಸಂದರ್ಭ ಗೋಚರಿಸಿದೆ.
ಸದ್ಯ ಬಾಲಿವುಡ್ ನಟ ವಿಕ್ಕಿ ಕೌಶಲ್ ತಮ್ಮ ಚಿತ್ರ ‘ಸರ್ದಾರ್ ಉಧಮ್’ ಯಶಸ್ಸಿನಲ್ಲಿ ತೇಲುತ್ತಿದ್ದಾರೆ. ಈ ನಡುವೆ ಅವರು ಬಹಳ ಚರ್ಚೆಯಾಗುತ್ತಿರುವ ಕತ್ರೀನಾ ಕೈಫ್ ಹಾಗೂ ಅಅವರ ಸಂಬಂಧದ ಕುರಿತು ಬಹಿರಂಗವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಅಚ್ಚರಿಯ ವಿಚಾರವೆಂದರೆ ಅವರು, ತಮ್ಮ ಮಾತಿನಲ್ಲಿ ಗಾಸಿಪ್ಗಳನ್ನು ನಿರಾಕರಿಸಿಲ್ಲ. ಹಾಗಂತ ಒಪ್ಪಿಕೊಂಡೂ ಇಲ್ಲ. ಅದಾಗ್ಯೂ ಅಭಿಮಾನಿಗಳು ಖುಷಿಪಡುವಂತಹ ಸುದ್ದಿಯೊಂದನ್ನು ಅವರು ನೀಡಿದ್ದಾರೆ. ಏನದು? ಮುಂದೆ ಓದಿ.
ಇತ್ತೀಚೆಗೆ ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ವಿಕ್ಕಿ ಕೌಶಲ್, ಕತ್ರೀನಾ ಜೊತೆಗಿನ ಸಂಬಂಧದ ಕುರಿತು ಸ್ಪಷ್ಟನೆ ನೀಡಿದ್ದಾರೆ. ಇದೇ ವೇಳೆ ಅವರು ಈ ಹಿಂದೆ ಕತ್ರಿನಾ ಜೊತೆಗೆ ಎಂಗೇಜ್ಮೆಂಟ್ ಆಗಿತ್ತು ಎಂಬ ಸುದ್ದಿ ಹರಿದಾಡಿದ್ದಕ್ಕೂ ಉತ್ತರ ನೀಡಿದ್ದಾರೆ. ‘ಈ ಎಲ್ಲದಕ್ಕೂ ಸಮಯ ಬರುತ್ತದೆ. ಆಗ ತಾನು ಉತ್ತರಿಸಲಿದ್ದೇನೆ’ ಎಂದು ಅವರು ನುಡಿದಿರುವುದಲ್ಲದೇ, ಸದ್ಯದಲ್ಲೇ ನಿಶ್ಚಿತಾರ್ಥವನ್ನೂ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ. ವಿಕ್ಕಿಯವರ ಈ ಮಾತು ಅಭಿಮಾನಿಗಳಲ್ಲಿ ಕುತೂಹಲ ಸೃಷ್ಟಿಸಿದ್ದು, ಕತ್ರಿನಾ- ವಿಕ್ಕಿ ಸದ್ಯದಲ್ಲೇ ಎಂಗೇಜ್ಮೆಂಟ್ ಮಾಡಿಕೊಳ್ಳಲಿದ್ಧಾರೆ ಎನ್ನುತ್ತಿದ್ದಾರೆ.
ಕತ್ರಿನಾ ಹಾಗೂ ವಿಕ್ಕಿ ಕೌಶಲ್ ಜೊತೆಯಾಗಿ ಓಡಾಡಲು ಪ್ರಾರಂಭಿಸಿ ಕೆಲವು ಸಮಯ ಕಳೆದಿದೆ. ಇತ್ತೀಚೆಗೆ ಸರ್ದಾರ್ ಉಧಮ್ ಚಿತ್ರದ ಪ್ರೀಮಿಯರ್ನಲ್ಲಿ ಕತ್ರಿನಾ ಕಾಣಿಸಿಕೊಂಡಿದ್ದರು. ನಂತರ ಇನ್ಸ್ಟಾಗ್ರಾಂನಲ್ಲಿ ವಿಕ್ಕಿ ಕೌಶಲ್ ನಟನೆಯನ್ನು ಹೊಗಳಿದ್ದರು. ಅಲ್ಲದೇ, ಪ್ರೀಮಿಯರ್ ಸಂದರ್ಭದಲ್ಲಿ ವಿಕ್ಕಿ ಹಾಗೂ ಕತ್ರೀನಾ ಜೊತೆಗಿರುವ ಚಿತ್ರಗಳು ವೈರಲ್ ಆಗಿದ್ದವು.
‘ಸರ್ದಾರ್ ಉಧಮ್’ ಚಿತ್ರದ ಪ್ರೀಮಿಯರ್ನಲ್ಲಿ ಕತ್ರೀನಾ:
View this post on Instagram
ವಿಕ್ಕಿ ಕೌಶಲ್ ಹಾಗೂ ಕತ್ರಿನಾ 2019ರಿಂದಲೇ ಜೊತೆಯಾಗಿ ಸುತ್ತಾಡುತ್ತಿದ್ದಾರೆ. ಆದರೆ ಈರ್ವರು ಕೂಡ ಇದುವರೆಗೂ ತಮ್ಮ ಸಂಬಂಧದ ಬಗ್ಗೆ ಗಪ್ಚುಪ್ ಎಂದಿಲ್ಲ. ಕೆಲ ಸಮಯದ ಹಿಂದೆ ಈ ಜೋಡಿ ಎಂಗೇಜ್ಮೆಂಟ್ ಆಗಿದ್ದಾರೆ ಎಂಬ ಸುದ್ದಿಯೂ ಹರಿದಾಡಿತ್ತು. ಆದರೆ ಎರಡೂ ಕಡೆಯ ಕುಟುಂಬದವರು ಹಾಗೂ ಆಪ್ತರು ಅದನ್ನು ನಿರಾಕರಿಸಿದ್ದರು. ಈ ಬಾರಿ ವಿಕ್ಕಿ ಕೌಶಲ್ ಸ್ವತಃ ಎಂಗೇಜ್ಮೆಂಟ್ ವಿಚಾರ ಮಾತನಾಡಿರುವುದರಿಂದ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.
ಇದನ್ನೂ ಓದಿ:
ಸಾಕುನಾಯಿಗೆ ಬರೋಬ್ಬರಿ ₹ 15 ಕೋಟಿ ಆಸ್ತಿ ಬರೆಯಲು ಮುಂದಾದ ಮಾಡೆಲ್; ಇದರ ಹಿಂದಿದೆ ಅಚ್ಚರಿಯ ಕಾರಣ
ಶಸ್ತ್ರಚಿಕಿತ್ಸೆಗೆ ಒಳಗಾದ ಮೆಗಾಸ್ಟಾರ್ ಚಿರಂಜೀವಿ; ಚಿಂತೆಗೊಳಗಾದ ಫ್ಯಾನ್ಸ್
ಶೋ ನಡುವೆ ಮಲೈಕಾ ಕೆನ್ನೆ ಮುಟ್ಟಿ, ನಮಸ್ಕಾರ ಮಾಡಿದ ಸ್ಪರ್ಧಿ; ಅನಿರೀಕ್ಷಿತ ಘಟನೆಗೆ ನಟಿಯ ರಿಯಾಕ್ಷನ್ ಏನಿತ್ತು?