ಶೋ ನಡುವೆ ಮಲೈಕಾ ಕೆನ್ನೆ ಮುಟ್ಟಿ, ನಮಸ್ಕಾರ ಮಾಡಿದ ಸ್ಪರ್ಧಿ; ಅನಿರೀಕ್ಷಿತ ಘಟನೆಗೆ ನಟಿಯ ರಿಯಾಕ್ಷನ್ ಏನಿತ್ತು?

ಹಿಂದಿಯ ಖ್ಯಾತ ರಿಯಾಲಿಟಿ ಶೋ ಒಂದರಲ್ಲಿ ನಟಿ, ಡಾನ್ಸರ್ ಮಲೈಕಾ ಅರೋರಾಗೆ ಭಯವಾಗುವ ಘಟನೆ ನಡೆದಿದೆ. ಈ ಕುರಿತು ಅವರು ಮಾತನಾಡಿದ್ಧಾರೆ.

ಶೋ ನಡುವೆ ಮಲೈಕಾ ಕೆನ್ನೆ ಮುಟ್ಟಿ, ನಮಸ್ಕಾರ ಮಾಡಿದ ಸ್ಪರ್ಧಿ; ಅನಿರೀಕ್ಷಿತ ಘಟನೆಗೆ ನಟಿಯ ರಿಯಾಕ್ಷನ್ ಏನಿತ್ತು?
ಮಲೈಕಾ ಅರೋರಾ

ಬಾಲಿವುಡ್​ ಡಾನ್ಸರ್ ಹಾಗೂ ನಟಿ ಮಲೈಕಾ ಅರೋರಾ ಸದ್ಯ ರಿಯಾಲಿಟಿ ಶೋ ಒಂದರ ಜಡ್ಜ್ ಆಗಿ ಭಾಗವಹಿಸುತ್ತಿದ್ದಾರೆ. ಇತ್ತೀಚೆಗೆ ನಡೆದ ಸಂಚಿಕೆಯೊಂದರಲ್ಲಿ ಸ್ಪರ್ಧಿಯೋರ್ವ ಮಲೈಕಾ ಬಳಿ ಬಂದು ಅವರ ಕೆನ್ನೆ ಸ್ಪರ್ಶಿಸಿದ ಘಟನೆ ನಡೆದಿದೆ. ಈ ಘಟನೆಯ ಕುರಿತಂತೆ ಮಲೈಕಾ ತಮ್ಮ ಪ್ರತಿಕ್ರಿಯೆಯನ್ನು ಅದೇ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ. ‘ಇಂಡಿಯಾ ಬೆಸ್ಟ್ ಡಾನ್ಸರ್ ಸೀಸನ್ 2’ ಶೋ ಈ ಘಟನೆಗೆ ಸಾಕ್ಷಿಯಾಗಿದ್ದು, ಖಾಸಗಿ ವಾಹಿನಿ ಪ್ರೋಮೋ ಹಂಚಿಕೊಂಡಿದೆ.

ಘಟನೆಯ ವಿಡಿಯೋ ಇಲ್ಲಿದೆ:

ವಿಡಿಯೋ ನೋಡಿದ ಮಲೈಕಾ ಅಭಿಮಾನಿಗಳು ಬಹಳ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದು, ಅವರ ಎಕ್ಸ್​​ಪ್ರೆಶನ್​ಗೆ ಮರುಳಾಗಿದ್ದಾರೆ. ವಿಡಿಯೋದಲ್ಲಿ ಸ್ಪರ್ಧಿಯೊಬ್ಬ ಮಲೈಕಾರ ಕೆನ್ನೆಯನ್ನು ಹಿಡಿದು ಮುದ್ದಾಡುವ ಉದ್ದೇಶದಿಂದ ಮುಂದೆಬರುತ್ತಾನೆ. ಮೊದಲಿಗೆ ಮಲೈಕಾಗೆ ಭಯವಾದರೂ ಕುಳಿತಿರುತ್ತಾರೆ. ಸ್ಪರ್ಧಿ ಬೆರಗು ಕಣ್ಣಿನಿಂದ ಮಲೈಕಾರ ಕೆನ್ನೆ ಮುಟ್ಟಿ ಕೊನೆಗೆ ನಮಸ್ಕಾರ ಮಾಡುತ್ತಾನೆ. ಈ ಅನಿರೀಕ್ಷಿತ ಘಟನೆಗೆ ಸಹ ನಿರ್ಣಾಯಕರಾಗಿ ಕೂತಿದ್ದ ಗೀತಾ ಕಪೂರ್ ಸೇರಿದಂತೆ ಅನೇಕರು ಮನಃಪೂರ್ವಕವಾಗಿ ನಕ್ಕಿದ್ದಾರೆ.

ಈ ಘಟನೆ ಮಲೈಕಾಗೂ ನಗು ತರಿಸಿದ್ದು, ನಂತರ ಅವರು ವೇದಿಕೆಯಲ್ಲಿ ಆ ಸಂದರ್ಭ ಅವರು ಎದುರಿಸಿದ ತಲ್ಲಣಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಮಾತನಾಡುತ್ತಾ ಅವರು, ಮೊದಲಿಗೆ ಸ್ಪರ್ಧಿ ಬಂದಾಗ ಭಯವಾಯಿತು. ಕಾರಣ, ಇದು ಕೊವಿಡ್ ಸಮಯವಾಗಿರುವುದರಿಂದ, ಸ್ಪರ್ಶಿಸುವುದು ತುಸು ಅಪಾಯಕಾರಿ. ಸ್ಪರ್ಧಿ ತನ್ನ ಬಳಿ ಬರುವ ಮೊದಲು ಕೈಗೆ ಸ್ಯಾನಿಟೈಸರ್ ಹಾಕಿದ್ದಾನೋ ಇಲ್ಲವೋ ಎಂಬ ಯೋಚನೆಯೂ ಮನದಲ್ಲಿ ಮೂಡಿತು. ಇದರಿಂದ ತುಸು ಭಯವಾಯಿತು ಎಂದಿದ್ದಾರೆ.

ಸ್ಪರ್ಧಿ ಕೆನ್ನೆ ಮುಟ್ಟಿದ್ದರ ಕುರಿತು ಪ್ರತಿಕ್ರಿಯಿಸಿದ ಮಲೈಕಾ, ಆತ ಬಹಳ ಮುಗ್ಧ ಮನಸ್ಸಿನಿಂದ ಮತ್ತು ಪ್ರೀತಿಯಿಂದ ಸ್ಪರ್ಶಿಸಿದ್ದಾನೆ. ತನಗೆ ಬಹಳ ಖುಷಿಯಾಗಿದೆ ಎಂದು ಮಲೈಕಾ ಹೇಳಿಕೊಂಡಿದ್ದಾರೆ. ಈ ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಸಹ ನಿರ್ಣಾಯಕಿ ಗೀತಾ ಕಪೂರ್, ಆ ಸ್ಪರ್ಧಿ ಬಹಳ ಧೈರ್ಯವಂತ ಎಂದಿದ್ದಾರೆ. ಇತ್ತೀಚೆಗಷ್ಟೇ ಮಲೈಕಾ ಸ್ಪರ್ಧಿ ಬಂದು ಕೆನ್ನೆ ಮುಟ್ಟಿದಾಗ ಭಯವಾಗಿದ್ದರ ಕುರಿತು ಹೇಳಿಕೊಂಡಿದ್ದರು. ಇದೀಗ ವಾಹಿನಿಯು ಆ ಘಟನೆಯ ಪ್ರೋಮೋ ಬಿಡುಗಡೆ ಮಾಡಿದೆ.

ಇದನ್ನೂ ಓದಿ:

ಸಾಕುನಾಯಿಗೆ ಬರೋಬ್ಬರಿ ₹ 15 ಕೋಟಿ ಆಸ್ತಿ ಬರೆಯಲು ಮುಂದಾದ ಮಾಡೆಲ್; ಇದರ ಹಿಂದಿದೆ ಅಚ್ಚರಿಯ ಕಾರಣ

ಸಮಂತಾ ಜತೆ ಕೆಲಸ ಮಾಡೋಕೆ ಖ್ಯಾತ ನಿರ್ದೇಶಕರು ನೋ ಅಂದ್ರು; ಇದರ ಹಿಂದಿರೋ ಷಡ್ಯಂತರ ಯಾರದ್ದು?

Nikhil Kumarswamy: ಕೃಷಿಯ ಕುರಿತು ನಿಖಿಲ್ ಕುಮಾರಸ್ವಾಮಿ ಹೇಳಿದ್ದೇನು?; ವಿಡಿಯೋ ನೋಡಿ

Click on your DTH Provider to Add TV9 Kannada