ಸಮಂತಾ ಅಕ್ಕಿನೇನಿ ಅವರು ವಿಚ್ಛೇದನದ ನಂತರ ಮತ್ತೆ ನಟನೆಗೆ ಮರಳಿದ್ದಾರೆ. ಶ್ವಾನಗಳನ್ನು ಸಾಕಿ, ಅದರ ಆರೈಕೆಯಲ್ಲಿ ಸಮಯ ಕಳೆಯುತ್ತಾ ನೋವನ್ನು ಮರೆಯುತ್ತಿದ್ದಾರೆ. ಈ ಮಧ್ಯೆ ಸಮಂತಾ ಬಗ್ಗೆ ಹೊಸ ಗಾಸಿಪ್ ಒಂದು ಹುಟ್ಟಿಕೊಂಡಿದೆ. ಕೆಲ ಖ್ಯಾತ ನಿರ್ದೇಶಕರು ಸಮಂತಾ ಜತೆ ಕೆಲಸ ಮಾಡೋಕೆ ನೋ ಎಂದಿದ್ದಾರೆ ಎಂಬ ಮಾತು ಟಾಲಿವುಡ್ ಅಂಗಳದಲ್ಲಿ ಜೋರಾಗಿದೆ. ಇದರ ಹಿಂದೆ ಯಾರ ಷಡ್ಯಂತರ ಇದೆ ಎನ್ನುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿ ಚರ್ಚೆಗಳು ಆಗುತ್ತಿವೆ.
ಸಮಂತಾ ಅವರು ದಸರಾಗೆ ದೊಡ್ಡ ಘೋಷಣೆ ಒಂದನ್ನು ಮಾಡಿದ್ದರು. ‘ಖಿಲಾಡಿ’ ಸಿನಿಮಾ ನಿರ್ಮಾಪಕರು ಸಮಂತಾ ಜತೆ ಸಿನಿಮಾ ಘೋಷಣೆ ಮಾಡಿದರೆ, ತೆಲುಗಿನ ಶಿವಲೆಂಕಾ ಕೃಷ್ಣ ಪ್ರಸಾದ್ ಅವರು ಸಮಂತಾ ಜತೆ ಸಿನಿಮಾ ಮಾಡುವುದಾಗಿ ಅನೌನ್ಸ್ ಮಾಡಿದ್ದಾರೆ. ಈ ಎರಡೂ ಸಿನಿಮಾ ತೆಲುಗು ಹಾಗೂ ತಮಿಳಲ್ಲಿ ಮೂಡಿ ಬರುತ್ತಿದೆ. ಅಚ್ಚರಿ ಎಂದರೆ, ಎರಡೂ ಸಿನಿಮಾ ನಿರ್ದೇಶಕರು ತಮಿಳಿನವರು.
ತೆಲುಗು ನಿರ್ದೇಶಕರ ಜತೆ ಸಿನಿಮಾ ಮಾಡೋಕೆ ಸಮಂತಾಗೆ ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ. ಕೆಲ ಟಾಲಿವುಡ್ ನಿರ್ದೇಶಕರು ಸಮಂತಾಗೆ ಕಥೆ ಹೇಳಿದ್ದಾರೆ. ಆದರೆ, ಅದು ಸಮಂತಾಗೆ ಇಷ್ಟವಾಗಿಲ್ಲ. ಇದಕ್ಕೆ ಕಾರಣ, ಅದೇ ಹಳೆಯ ಲವ್ಸ್ಟೋರಿಗಳು ಹಾಗೂ ಕಮರ್ಷಿಯಲ್ ಮಸಾಲೆಗಳು. ಇನ್ನು ಕೆಲ ಸ್ಟಾರ್ ನಿರ್ದೇಶಕರು ಸಮಂತಾ ಜತೆ ನಟಿಸೋಕೆ ಹಿಂದೇಟು ಹಾಕಿದ್ದಾರಂತೆ. ಇದಕ್ಕೂ ಕಾರಣವಿದೆ.
ಸಮಂತಾ ಅವರು ಈಗತಾನೇ ವಿಚ್ಛೇದನ ಪಡೆದಿದ್ದಾರೆ. ಅವರ ಬಗ್ಗೆ ಈಗ ಜನರಿಗೆ ನಾನಾ ಅಭಿಪ್ರಾಯಗಳು ಹುಟ್ಟಿಕೊಂಡಿರುತ್ತವೆ. ಇಂಥ ಸಂದರ್ಭದಲ್ಲಿ ಅವರ ಜತೆ ಸಿನಿಮಾ ಮಾಡಿದರೆ ಪ್ರೇಕ್ಷಕರು ಅದನ್ನು ನೋಡದೇ ಇರಬಹುದು ಎನ್ನುವ ನಂಬಿಕೆಯಲ್ಲಿ ಕೆಲ ದೊಡ್ಡ ನಿರ್ದೇಶಕರು ಇದ್ದಾರೆ ಎನ್ನುವ ಟಾಕ್ ಇದೆ. ಆದರೆ, ಕೆಲ ಫ್ಯಾನ್ಸ್ ಇದರ ಹಿಂದೆ ಕೆಲವರ ಷಡ್ಯಂತರವಿದೆ ಎಂದು ಆರೋಪಿಸುತ್ತಿದ್ದಾರೆ. ಈ ಬಗ್ಗೆ ಪರವಿರೋಧ ಚರ್ಚೆಗಳು ನಡೆಯುತ್ತಲೇ ಇವೆ.
ಇದನ್ನೂ ಓದಿ: ‘ಇಲ್ಲಿ ಕೂರಲು ಭಯವಾಗುತ್ತಿದೆ’; ಡಿವೋರ್ಸ್ ಬಳಿಕ ಮೊದಲ ಬಾರಿಗೆ ಸ್ಕ್ರೀನ್ ಮೇಲೆ ಕಾಣಿಸಿಕೊಂಡ ಸಮಂತಾ ಮಾತು
ನಾಗ ಚೈತನ್ಯ ಮೇಲೆ ನಂಬಿಕೆ ಇಟ್ಟ ಸಮಂತಾಗೆ ಮಗುವೂ ಸಿಗಲಿಲ್ಲ; ಶಾರುಖ್ ಜತೆ ಸಿನಿಮಾವೂ ಕೈ ಹಿಡಿಯಲಿಲ್ಲ