‘ನಾನು ಹೊರಡುವಾಗ ರಾಯನ್​ ಕಣ್ಣಲ್ಲಿ ನೀರು ತುಂಬಿತ್ತು’; ಮೇಘನಾ ರಾಜ್​

ಮೇಘನಾ ನಟಿಸುತ್ತಿರುವ ಇದು ಸಸ್ಪೆನ್ಸ್​ ಥ್ರಿಲ್ಲರ್​ ಸಿನಿಮಾ. ಮೇಘನಾ ಅವರು ತಮ್ಮ ವೃತ್ತಿಜೀವನದಲ್ಲಿ ಈ ರೀತಿಯ ಸಿನಿಮಾ ಮಾಡುತ್ತಿರುವುದು ಇದೇ ಮೊದಲಂತೆ. ಶೀಘ್ರವೇ ಸಿನಿಮಾ ಸೆಟ್ಟೇರಲಿದೆ.  

ಪಿ.ಬಿ. ಸ್ಟುಡಿಯೋಸ್​ ಲಾಂಛನದಲ್ಲಿ ಮೂಡಿಬರುತ್ತಿರುವ ಸಿನಿಮಾದಲ್ಲಿ ಮೇಘನಾ ನಟಿಸುತ್ತಿದ್ದಾರೆ. ವಿಶಾಲ್​ ಹೆಸರಿನ ಹೊಸ ಪ್ರತಿಭೆ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ಸಿನಿಮಾಗೆ ಇನ್ನೂ ಹೆಸರಿಟ್ಟಿಲ್ಲ. ಈ ಚಿತ್ರದ ಮೂಲಕ ಮೇಘನಾ ರಾಜ್​ ಕಂಬ್ಯಾಕ್​ ಮಾಡುತ್ತಿದ್ದಾರೆ. ಇಂದು (ಅಕ್ಟೋಬರ್​ 17) ಚಿರಂಜೀವಿ ಸರ್ಜಾ ಅವರ ಜನ್ಮದಿನ. ಈ ವಿಶೇಷ ದಿನದಂದು ಚಿತ್ರತಂಡ ಮಾಧ್ಯಮದ ಎದುರು ಬಂದಿತ್ತು. ಈ ವೇಳೆ ಮೇಘನಾ ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ.

ರಾಯನ್​ ಹುಟ್ಟಿದ ನಂತರ ಮೇಘನಾಗೆ ಅವನೇ ಎಲ್ಲವೂ ಆಗಿದ್ದಾನೆ. ಇಂದು ಸುದ್ದಿಗೋಷ್ಠಿಗೆ ಬರುವಾಗ ಮೇಘನಾ ಹೊರಡುವುದನ್ನು ನೋಡಿ ಕಣ್ಣೀರು ಹಾಕಿದಿನಂತೆ ರಾಯನ್​. ಈ ವಿಚಾರದ ಬಗ್ಗೆ ಅವರು ಹೇಳಿಕೊಂಡಿದ್ದಾರೆ. ಇನ್ನು, ಚಿರು ಯಾವ ಜನ್ಮದಿನ ಅವರಿಗೆ ಇಷ್ಟವಾಗಿತ್ತು? ರಾಯನ್​ ಜನ್ಮದಿನಾಚರಣೆ ತಯಾರಿ ಹೇಗಿದೆ ಎಂಬಿತ್ಯಾದಿ ವಿಚಾರಗಳನ್ನು ಅವರು ಮಾತನಾಡಿದ್ದಾರೆ.

ಮೇಘನಾ ನಟಿಸುತ್ತಿರುವ ಇದು ಸಸ್ಪೆನ್ಸ್​ ಥ್ರಿಲ್ಲರ್​ ಸಿನಿಮಾ. ಮೇಘನಾ ಅವರು ತಮ್ಮ ವೃತ್ತಿಜೀವನದಲ್ಲಿ ಈ ರೀತಿಯ ಸಿನಿಮಾ ಮಾಡುತ್ತಿರುವುದು ಇದೇ ಮೊದಲಂತೆ. ಶೀಘ್ರವೇ ಸಿನಿಮಾ ಸೆಟ್ಟೇರಲಿದೆ.

ಇದನ್ನೂ ಓದಿ: ‘ಚಿರಂಜೀವಿಗೆ ಯಾವಾಗಲೂ ಭಾನುವಾರ ವಿಶೇಷವಾಗಿತ್ತು’; ಕಾರಣ ವಿವರಿಸಿದ ಮೇಘನಾ

Click on your DTH Provider to Add TV9 Kannada