ಶಸ್ತ್ರಚಿಕಿತ್ಸೆಗೆ ಒಳಗಾದ ಮೆಗಾಸ್ಟಾರ್​ ಚಿರಂಜೀವಿ; ಚಿಂತೆಗೊಳಗಾದ ಫ್ಯಾನ್ಸ್​

ಚಿರಂಜೀವಿ ಅವರು ಇತ್ತೀಚೆಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಈ ವೇಳೆ ಅವರ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದರು. ಈ ವೇಳೆ ಚಿರಂಜೀವಿ ಕೈ ಮೇಲೆ ಬ್ಯಾಂಡೇಜ್​ ಕಾಣಿಸಿದೆ.

ಶಸ್ತ್ರಚಿಕಿತ್ಸೆಗೆ ಒಳಗಾದ ಮೆಗಾಸ್ಟಾರ್​ ಚಿರಂಜೀವಿ; ಚಿಂತೆಗೊಳಗಾದ ಫ್ಯಾನ್ಸ್​
ಚಿರಂಜೀವಿ

ಮೆಗಸ್ಟಾರ್​ ಚಿರಂಜೀವಿ ಅವರಿಗೆ ಟಾಲಿವುಡ್​ನಲ್ಲಿ ದೊಡ್ಡ ಅಭಿಮಾನಿ ಬಳಗವಿದೆ. ಅವರ ಸಿನಿಮಾಗೆ ಮೊದಲ ದಿನ ದೊಡ್ಡ ಓಪನಿಂಗ್​ ಸಿಗುತ್ತದೆ. ಇದಕ್ಕೆ ಕಾರಣ ಅವರ ಅಭಿಮಾನಿಗ ಬಳಗವೇ. ಸದ್ಯ, ಕೊವಿಡ್​ ಕಡಿಮೆ ಆಗಿದ್ದರಿಂದ ಅವರು ಮತ್ತೆ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಮಧ್ಯೆ ಅವರ ಅಭಿಮಾನಿಗಳಿಗೆ ಚಿರಂಜೀವಿ ಬಗ್ಗೆ ಸುದ್ದಿಯೊಂದು ಸಿಕ್ಕಿದೆ. ಈ ವಿಚಾರ ಕೇಳಿ ಅಭಿಮಾನಿಗಳು ಚಿಂತೆ ಮಾಡಿಕೊಂಡಿದ್ದಾರೆ.

ಚಿರಂಜೀವಿ ಅವರು ಇತ್ತೀಚೆಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಈ ವೇಳೆ ಅವರ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದರು. ಈ ವೇಳೆ ಚಿರಂಜೀವಿ ಕೈ ಮೇಲೆ ಬ್ಯಾಂಡೇಜ್​ ಕಾಣಿಸಿದೆ. ಇದನ್ನು ನೋಡಿ ಅಭಿಮಾನಿಗಳು ಚಿಂತೆಗೆ ಒಳಗಾದರು. ಈ ವೇಳೆ ಚಿರಂಜೀವಿ ಅವರು ಶಸ್ತ್ರ ಚಿಕಿತ್ಸೆಗೆ ಒಳಗಾದ ವಿಚಾರವನ್ನು ಖಚಿತಪಡಿಸಿದ್ದಾರೆ.  ನರದ ಸಮಸ್ಯೆಯಿದ ತೊಂದರೆ ಉಂಟಾಗಿತ್ತು. ಈ ಕಾರಣಕ್ಕೆ ಅವರು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಈ ವಿಚಾರವನ್ನು ಅವರು ಖಚಿತಪಡಿಸಿದ್ದಾರೆ.

ಚಿರಂಜೀವಿ ಅವರು ಇತ್ತೀಚೆಗೆ 66ನೇ ವಸಂತಕ್ಕೆ ಕಾಲಿಟ್ಟಿದ್ದರು. ಅವರ ಬರ್ತ್​ಡೇ ಪ್ರಯುಕ್ತ ಹೊಸ ಸಿನಿಮಾದ ಟೈಟಲ್​ ಲಾಂಚ್​ ಆಗಿತ್ತು. ಚಿರು 153ನೇ ಚಿತ್ರಕ್ಕೆ ‘ಗಾಡ್​ಫಾದರ್’​ ಎಂದು ಹೆಸರಿಡಲಾಗಿದೆ. ಮೋಹನ್​ಲಾಲ್​ ನಟನೆಯ ‘ಲೂಸಿಫರ್​’ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಡ್ರಗ್​ ಹಾಗೂ ರಾಜಕೀಯ ಅನಾಚಾರಗಳ ವಿಚಾರವನ್ನು ಸಿನಿಮಾದಲ್ಲಿ ಹೇಳಲಾಗಿದೆ. ಈಗ ಈ ಸಿನಿಮಾವನ್ನು ತೆಲುಗಿಗೆ ರಿಮೇಕ್​ ಮಾಡಲಾಗುತ್ತಿದೆ. ಈ ಸಿನಿಮಾದಲ್ಲಿ ಚಿರಂಜೀವಿ ಲೀಡ್​ರೋಲ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ಗಾಡ್​ಫಾದರ್​ ಎಂದು ನಾಮಕರಣ ಮಾಡಲಾಗಿದ್ದು, ಅಭಿಮಾನಿಗಳು ಖುಷಿಯಾಗಿದ್ದಾರೆ.

ಪ್ರಶಾಂತ್​ ನೀಲ್​ ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿದ್ದಾರೆ. ‘ಕೆಜಿಎಫ್​’ ನಂತರ ಅವರ ಖ್ಯಾತಿ ಸಾಕಷ್ಟು ಹೆಚ್ಚಿದೆ. ಈ ಕಾರಣಕ್ಕೆ ಅವರು ಯಾವುದೇ ಸ್ಟಾರ್​ ನಟರನ್ನು ಭೇಟಿ ಮಾಡಿದರೂ ಸಿನಿಮಾ ವಿಚಾರ ಮುನ್ನೆಲೆಗೆ ಬರುತ್ತದೆ. ಇತ್ತೀಚೆಗೆ ರಾಮ್​ ಚರಣ್​ ಹಾಗೂ ಚಿರಂಜೀವಿ ಜತೆ ಕಾಣಿಸಿಕೊಂಡಿದ್ದರು ಪ್ರಶಾಂತ್ ನೀಲ್​​. ರಾಮ್​ ಚರಣ್​ ಜತೆ ಪ್ರಶಾಂತ್​ ನೀಲ್​ ಸಿನಿಮಾ ಮಾಡುತ್ತಾರೆ ಎನ್ನುವ ಸುದ್ದಿ ಹರಿದಾಡಿತ್ತು.

ಇದನ್ನೂ ಓದಿ:  ‘ಚಿರಂಜೀವಿಗೆ ಯಾವಾಗಲೂ ಭಾನುವಾರ ವಿಶೇಷವಾಗಿತ್ತು’; ಕಾರಣ ವಿವರಿಸಿದ ಮೇಘನಾ

Click on your DTH Provider to Add TV9 Kannada