The Batman: ಆಕ್ಷನ್ ಪ್ರಿಯರ ಮನಸೆಳೆಯುತ್ತಿದೆ ‘ದಿ ಬ್ಯಾಟ್ಮ್ಯಾನ್’ ಟ್ರೈಲರ್; ಚಿತ್ರದ ಬಿಡುಗಡೆ ಯಾವಾಗ?
The Batman Trailer: ಹಾಲಿವುಡ್ನ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ‘ದಿ ಬ್ಯಾಟ್ಮ್ಯಾನ್’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಇದರೊಂದಿಗೆ ಚಿತ್ರದ ಬಿಡುಗಡೆ ದಿನಾಂಕವನ್ನೂ ಘೋಷಿಸಲಾಗಿದೆ.
ಬಹಳಷ್ಟು ಜನ ಹಾಲಿವುಡ್ ಸಿನಿಮಾ ಪ್ರೇಮಿಗಳಿಗೆ ಕ್ರಿಸ್ಟಫರ್ ನೋಲಾನ್ ನಿರ್ದೇಶನದ ‘ಬ್ಯಾಟ್ಮ್ಯಾನ್’ ಸೀರೀಸ್ ಬಹಳ ಪ್ರಿಯವಾದ ಚಿತ್ರ ಸರಣಿಯಾಗಿದೆ. ಆ ಸರಣಿಗಳಲ್ಲಿ ಕ್ರಿಶ್ಚಿಯನ್ ಬೇಲ್ ಬ್ಯಾಟ್ಮ್ಯಾನ್ ಪಾತ್ರ ನಿರ್ವಹಿಸಿದ್ದರು. ಪ್ರಸ್ತುತ ‘ದಿ ಬ್ಯಾಟ್ಮ್ಯಾನ್’ ಟ್ರೈಲರ್ ಬಿಡುಗಡೆಯಾಗಿದ್ದು, ಅದರಲ್ಲಿ ರಾಬರ್ಟ್ ಪ್ಯಾಟಿನ್ಸನ್ ಬ್ಯಾಟ್ಮ್ಯಾನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೈ ನವಿರೇಳಿಸುವ ಆಕ್ಷನ್ ಚಿತ್ರದ ಸೂಚನೆಯನ್ನು ಟ್ರೈಲರ್ ನೀಡಿದ್ದು, ಹಾಲಿವುಡ್ ಪ್ರೇಮಿಗಳಿಗೆ ಭರ್ಜರಿ ಮನರಂಜನೆಯ ಸೂಚನೆ ನೀಡಿದೆ.
‘ದಿ ಬ್ಯಾಟ್ಮ್ಯಾನ್’ ಚಿತ್ರವನ್ನು 2022ರ ಮಾರ್ಚ್ನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ನಿರ್ಮಾಣ ಸಂಸ್ಥೆ ತಿಳಿಸಿದೆ. ಈ ಚಿತ್ರದಲ್ಲಿ ಕತೆಯ ಹಿನ್ನೆಲೆ ಬೇರೆ ಇರಲಿದೆ ಎಂದು ಈ ಹಿಂದೆ ತಿಳಿಸಲಾಗಿತ್ತು. ಅದರ ಸೂಚನೆ ಟ್ರೈಲರ್ನಲ್ಲಿ ಸಿಕ್ಕಿದೆ. ಬ್ಯಾಟ್ಮ್ಯಾನ್ಗೆ ತನ್ನ ಕೋಪದ ಮೇಲೆ ಹಿಡಿತವಿರುವುದಿಲ್ಲ. ಇದೊಂದು ವಿಭಿನ್ನವಾದ ಪಾತ್ರ ಎಂದು ರಾಬರ್ಟ್ ಈ ಹಿಂದೆ ತಿಳಿಸಿದ್ದರು.
‘ದಿ ಬ್ಯಾಟ್ಮ್ಯಾನ್’ ಚಿತ್ರದ ಟ್ರೈಲರ್ ಇಲ್ಲಿದೆ:
‘ದಿ ಬ್ಯಾಟ್ಮ್ಯಾನ್’ ಚಿತ್ರವನ್ನು ಮ್ಯಾಟ್ ರೀವ್ಸ್ ನಿರ್ದೇಶನ ಮಾಡಿದ್ದಾರೆ. ಕಳೆದ ವರ್ಷ ಚಿತ್ರದ ಮೊದಲ ಟೀಸರ್ ಬಿಡುಗಡೆ ಮಾಡಲಾಗಿತ್ತು. ಈ ವರ್ಷ ಚಿತ್ರದ ಬಿಡುಗಡೆಗೂ ಚಿತ್ರತಂಡ ಯೋಜನೆ ರೂಪಿಸಿತ್ತು. ಆದರೆ ಕೊರೊನಾ ಎರಡನೇ ಅಲೆಯ ಕಾರಣ, ಬಿಡುಗಡೆ ಮುಂದೂಡಲ್ಪಟ್ಟಿತ್ತು. ಇದೀಗ ಮುಂದಿನ ವರ್ಷದ ಮಾರ್ಚ್ನಲ್ಲಿ ಚಿತ್ರವನ್ನು ಬಿಡುಗಡೆಗೊಳಿಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.
ಇದನ್ನೂ ಓದಿ:
Yuvraj Singh arrested: ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಬಂಧನ
Vicky Kaushal: ಕತ್ರೀನಾ ಜೊತೆಗಿನ ಎಂಗೇಜ್ಮೆಂಟ್ ಕುರಿತು ಕೊನೆಗೂ ಮೌನ ಮುರಿದ ವಿಕ್ಕಿ ಕೌಶಲ್
ಶಸ್ತ್ರಚಿಕಿತ್ಸೆಗೆ ಒಳಗಾದ ಮೆಗಾಸ್ಟಾರ್ ಚಿರಂಜೀವಿ; ಚಿಂತೆಗೊಳಗಾದ ಫ್ಯಾನ್ಸ್