AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸ್ಪೈಡರ್​ ಮ್ಯಾನ್​’ ಅಭಿಮಾನಿಗಳಿಗೆ ಕಹಿ ಸುದ್ದಿ; ಸರಣಿ ಅಂತ್ಯವಾಗಲಿದೆ ಎಂದ ಟಾಮ್​ ಹಾಲೆಂಡ್​

Spider Man No Way Home: ಈವರೆಗೆ ಹಲವು ರೂಪದಲ್ಲಿ ಸ್ಪೈಡರ್ ಮ್ಯಾನ್​ ಪಾತ್ರ ಮೂಡಿಬಂದಿದೆ. ಈ ಸಿನಿಮಾ ಸರಣಿಗೆ ಅಂತ್ಯ ಹಾಡುವ ಕಾಲ ಬಂದಿದೆಯೇ? ನಟ ಟಾಮ್​ ಹಾಲೆಂಡ್​ ಮಾತುಗಳಿಂದ ಇಂಥ ಅನುಮಾನ ಮೂಡಿದೆ.

‘ಸ್ಪೈಡರ್​ ಮ್ಯಾನ್​’ ಅಭಿಮಾನಿಗಳಿಗೆ ಕಹಿ ಸುದ್ದಿ; ಸರಣಿ ಅಂತ್ಯವಾಗಲಿದೆ ಎಂದ ಟಾಮ್​ ಹಾಲೆಂಡ್​
ಸ್ಪೈಡರ್ ಮ್ಯಾನ್: ನೋ ವೇ ಹೋಮ್
TV9 Web
| Edited By: |

Updated on: Oct 17, 2021 | 12:49 PM

Share

ಸಿನಿಮಾ ಜಗತ್ತಿನ ಮೋಸ್ಟ್​ ಸೆಲೆಬ್ರೇಟೆಡ್​ ಸೂಪರ್​ ಹೀರೋಗಳಲ್ಲಿ ಸ್ಪೈಡರ್​ ಮ್ಯಾನ್​ ಹೆಸರು ಕೂಡ ಮುಂಚೂಣಿಯಲ್ಲಿದೆ. ಅನೇಕ ದಶಕಗಳಿಂದ ಈ ಪಾತ್ರವನ್ನು ತೆರೆಮೇಲೆ ನೋಡಿ ಜನರು ಎಂಜಾಯ್​ ಮಾಡುತ್ತಿದ್ದಾರೆ. ಅನೇಕ ಹೀರೋಗಳು ಸ್ಪೈಡರ್​ ಮ್ಯಾನ್​ ಅವತಾರ ತಾಳಿ ಜನರನ್ನು ರಂಜಿಸಿದ್ದಾರೆ. ಸಿನಿಮಾ ಮಾತ್ರವಲ್ಲದೇ, ಧಾರಾವಾಹಿ ರೂಪದಲ್ಲೂ ಸ್ಪೈಡರ್​ ಮ್ಯಾನ್​ ಫೇಮಸ್​. ಇತ್ತೀಚಿನ ವರ್ಷಗಳಲ್ಲಿ ತೆರೆಕಂಡ ಈ ಸರಣಿಯ ಸಿನಿಮಾಗಳಲ್ಲಿ ಸ್ಪೈಡರ್​ ಮ್ಯಾನ್​ ಪಾತ್ರವನ್ನು ಮಾಡುವ ಅವಕಾಶ ಟಾಮ್​ ಹಾಲೆಂಡ್​ ಅವರಿಗೆ ಸಿಕ್ಕಿತು. ಅವರು ಈಗೊಂದು ಶಾಕಿಂಗ್​ ನ್ಯೂಸ್​ ಹಂಚಿಕೊಂಡಿದ್ದಾರೆ.

2016ರಲ್ಲಿ ತೆರೆಕಂಡ ‘ಕ್ಯಾಪ್ಟನ್​ ಅಮೆರಿಕ: ಸಿವಿಲ್​ ವಾರ್’ ಸಿನಿಮಾದಲ್ಲಿ ‘ಸ್ಪೈಡರ್​ಮ್ಯಾನ್​’ ಪಾತ್ರ ಮಾಡುವ ಅವಕಾಶ ಟಾಮ್​ ಹಾಲೆಂಡ್​ ಅವರಿಗೆ ಒಲಿಯಿತು. ನಂತರ ಅವರು ‘ಸ್ಪೈಡರ್​ ಮ್ಯಾನ್​ ಹೋಮ್​ ಕಮಿಂಗ್​’, ‘ಸ್ಪೈಡರ್​ ಮ್ಯಾನ್: ಫಾರ್​ ಫ್ರಮ್​​ ಹೋಮ್’​, ‘ಅವೆಂಜರ್ಸ್​ ಇನ್ಫಿನಿಟಿ ವಾರ್​’ ಚಿತ್ರಗಳಲ್ಲಿ ಈ ಪಾತ್ರಕ್ಕೆ ಬಣ್ಣ ಹಚ್ಚಿದರು. ಇತ್ತೀಚೆಗೆ ಅವರು ‘ಸ್ಪೈಡರ್​ ಮ್ಯಾನ್​: ನೋ ವೇ ಹೋಮ್​’ ಚಿತ್ರದ ಕೊನೇ ದಿನದ ಶೂಟಿಂಗ್​ನಲ್ಲಿ ಭಾಗವಹಿಸಿದ್ದರು.

ಸ್ಪೈಡರ್​ ಮ್ಯಾನ್​ ಸರಣಿ ಸಿನಿಮಾಗಳಲ್ಲಿ ‘ಹೋಮ್​ ಕಮಿಂಗ್​’, ‘ಫಾರ್​ ಫ್ರಮ್​ ಹೋಮ್​’ ಮತ್ತು ‘ನೋ ವೇ ಹೋಮ್​’ ಚಿತ್ರಗಳು ಟ್ರಿಲಜಿ ರೀತಿ ಮೂಡಿಬಂದಿದೆ. ಈ ಸರಣಿ ಇಲ್ಲಿಗೆ ಅಂತ್ಯವಾಗಲಿದೆ ಎಂದು ಟಾಮ್​ ಹಾಲೆಂಡ್​ ಹೇಳಿದ್ದಾರೆ.

‘ಈ ಸಿನಿಮಾಗಳನ್ನು ನಾವು ಕಳೆದ 5 ವರ್ಷದಿಂದ ಮಾಡುತ್ತಾ ಬಂದೆವು. ನಮ್ಮ ನಡುವೆ ಒಳ್ಳೆಯ ಬಾಂಧವ್ಯ ಇತ್ತು. ಇದು ನಾವು ಕೊನೆ ಬಾರಿಗೆ ಜೊತೆಯಾಗಿ ನಟಿಸುತ್ತಿರುವುದು ಅನಿಸುತ್ತದೆ. ಬೇಜಾರಾಗುತ್ತದೆ, ಆದರೂ ಕೂಡ ಜೀವನದ ಮುಂದಿನ ಘಟ್ಟಕ್ಕೆ ನಾವು ಕಾಲಿಡುತ್ತಿದ್ದೇವೆ. ‘ಸ್ಪೈಡರ್​ ಮ್ಯಾನ್​: ನೋ ವೇ ಹೋಮ್​’ ಚಿತ್ರವನ್ನೇ ಈ ಸರಣಿಯ ಕೊನೇ ಸಿನಿಮಾ ಎಂಬಂತೆ ನಾವು ಪರಿಗಣಿಸುತ್ತಿದ್ದೇವೆ’ ಎಂದು ಟಾಮ್​ ಹಾಲೆಂಡ್​ ಹೇಳಿರುವುದರಿಂದ ಸ್ಪೈಡರ್​ ಮ್ಯಾನ್​ ಪಾತ್ರದ ಭವಿಷ್ಯವೇನು ಎಂಬ ಪ್ರಶ್ನೆ ಮೂಡಿದೆ.

ಇದನ್ನೂ ಓದಿ:

ಪಬ್​ನಲ್ಲಿ ಪಾತ್ರೆ ತೊಳೆಯುತ್ತಿದ್ದ ಯುವಕ ‘ಸ್ಪೈಡರ್​ ಮ್ಯಾನ್​’ ಆದ; ನಟ ಟಾಮ್​ ಹಾಲೆಂಡ್​ ಲೈಫ್​ ಸ್ಟೋರಿ

ದಾನಿಶ್​ ಸೇಠ್​ ಸಹೋದರಿ ಕುಬ್ರಾ ಸೇಠ್​ಗೆ ‘ಫೌಂಡೇಶನ್​’ ಅವಕಾಶ; ಹಾಲಿವುಡ್​ ಕಲಾವಿದರ ಜತೆ ನಟನೆ

ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ