ಪಬ್​ನಲ್ಲಿ ಪಾತ್ರೆ ತೊಳೆಯುತ್ತಿದ್ದ ಯುವಕ ‘ಸ್ಪೈಡರ್​ ಮ್ಯಾನ್​’ ಆದ; ನಟ ಟಾಮ್​ ಹಾಲೆಂಡ್​ ಲೈಫ್​ ಸ್ಟೋರಿ

TV9 Digital Desk

| Edited By: ಮದನ್​ ಕುಮಾರ್​

Updated on: Oct 10, 2021 | 12:34 PM

ಹಾಲಿವುಡ್​ ಸಿನಿಮಾಗಳಲ್ಲಿ ದೊಡ್ಡ ಮಟ್ಟದ ಯಶಸ್ಸು ಸಿಗುವುದಕ್ಕಿಂತಲೂ ಮುನ್ನ ಟಾಮ್​ ಹಾಲೆಂಡ್ ಅವರು ತಮ್ಮೂರಿನ ಪಬ್​ವೊಂದರಲ್ಲಿ ಪಾತ್ರೆ ತೊಳೆಯುವ ಕೆಲಸ ಮಾಡಿಕೊಂಡಿದ್ದರು. ‘ಅದು ನಾನು ಮಾಡಿದ ಅತಿ ಕಳಪೆ ಕೆಲಸ’ ಎಂದು ಅವರು ಹೇಳಿಕೊಂಡಿದ್ದುಂಟು.

ಪಬ್​ನಲ್ಲಿ ಪಾತ್ರೆ ತೊಳೆಯುತ್ತಿದ್ದ ಯುವಕ ‘ಸ್ಪೈಡರ್​ ಮ್ಯಾನ್​’ ಆದ; ನಟ ಟಾಮ್​ ಹಾಲೆಂಡ್​ ಲೈಫ್​ ಸ್ಟೋರಿ
ಟಾಮ್ ಹಾಲೆಂಡ್
Follow us

ಹಾಲಿವುಡ್​ ನಟ ಟಾಮ್​ ಹಾಲೆಂಡ್​ ಅವರಿಗೆ ಜಗತ್ತಿನಾದ್ಯಂತ ಅಭಿಮಾನಿಗಳಿದ್ದಾರೆ. ‘ಸ್ಪೈಡರ್​ ಮ್ಯಾನ್​’ ಪಾತ್ರದ ಮೂಲಕ ಅವರು ಫೇಮಸ್​ ಆಗಿದ್ದಾರೆ. ಕ್ಯಾಪ್ಟನ್​ ಅಮೆರಿಕ: ಸಿವಿಲ್​ ವಾರ್​, ಸ್ಪೈಡರ್​ ಮ್ಯಾನ್​ ಹೋಮ್​ ಕಮಿಂಗ್​, ಅವೆಂಜರ್ಸ್​ ಇನ್ಫಿನಿಟಿ ವಾರ್​ ಸಿನಿಮಾಗಳಲ್ಲಿ ಸ್ಪೈಡರ್​ ಮ್ಯಾನ್​ ಪಾತ್ರ ಮಾಡುವ ಮೂಲಕ ಟಾಮ್​ ಹಾಲೆಂಡ್​ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.​ ಮುಂಬರುವ ‘ಸ್ಪೈಡರ್​ ಮ್ಯಾನ್​: ನೋ ವೇ ಹೋಮ್​’ ಚಿತ್ರದಲ್ಲೂ ಅವರು ನಟಿಸುತ್ತಿದ್ದಾರೆ. ಇಷ್ಟೆಲ್ಲ ಬೇಡಿಕೆ ಇರುವ ನಟ ಒಂದು ಕಾಲದಲ್ಲಿ ಪಾತ್ರ ತೊಳೆಯುವ ಕೆಲಸ ಮಾಡುತ್ತಿದ್ದರು ಎಂಬುದು ಅಚ್ಚರಿ ಸಂಗತಿ.

ಈ ಹಿಂದೆ ನೀಡಿದ ಸಂದರ್ಶನವೊಂದರಲ್ಲಿ ಟಾಮ್​ ಹಾಲೆಂಡ್​ ಈ ವಿಚಾರವನ್ನು ಹೇಳಿಕೊಂಡಿದ್ದರು. ಚಿಕ್ಕ ವಯಸ್ಸಿನಿಂದಲೇ ಅವರಿಗೆ ನಟನೆಯ ಗೀಳು ಇತ್ತು. ಹಾಲಿವುಡ್​ ಸಿನಿಮಾಗಳಲ್ಲಿ ದೊಡ್ಡ ಮಟ್ಟದ ಯಶಸ್ಸು ಸಿಗುವುದಕ್ಕಿಂತಲೂ ಮುನ್ನ ಅವರು ತಮ್ಮೂರಿನ ಪಬ್​ವೊಂದರಲ್ಲಿ ಪಾತ್ರೆ ತೊಳೆಯುವ ಕೆಲಸ ಮಾಡಿಕೊಂಡಿದ್ದರು. ‘ಅದು ನಾನು ಮಾಡಿದ ಅತಿ ಕಳಪೆ ಕೆಲಸ’ ಎಂದು ಅವರು ಹೇಳಿಕೊಂಡಿದ್ದುಂಟು. ಪಾತ್ರೆ ತೊಳೆಯುವ ಕೆಲಸ ಮಾಡುತ್ತಲೇ ಅವರು ಹಾಲಿವುಡ್​ ಸಿನಿಮಾಗಳಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದರು.

2008ರಿಂದಲೂ ನಾಟಕ ತಂಡಗಳ ಜೊತೆ ಗುರುತಿಸಿಕೊಂಡಿದ್ದ ಟಾಮ್​ ಹಾಲೆಂಟ್​ ಅವರಿಗೆ ಬಳಿಕ ಸಿನಿಮಾಗಳಲ್ಲಿ ಅವಕಾಶ ಸಿಗಲು ಆರಂಭವಾಯಿತು. ಆದರೆ 2014ರ ಸಂದರ್ಭದಲ್ಲಿ ಅವರಿಗೆ ಯಾವುದೇ ಅವಕಾಶ ಇರಲಿಲ್ಲ. ಆಗ ಅವರು ಬೇರೆ ಉದ್ಯೋಗ ನೋಡಿಕೊಳ್ಳಲು ನಿರ್ಧರಿಸಿದ್ದರು. ಆಗ ಟಾಮ್​ ಹಾಲೆಂಡ್​ ಅವರ ತಾಯಿ ಒಂದು ಪ್ಲ್ಯಾನ್​ ಮಾಡಿದ್ದರು. ನಟನೆ ಕೈಕೊಟ್ಟರೆ ಮಗ ಬೇರೆ ಏನಾದರೂ ಕೆಲಸ ಮಾಡಿ ಜೀವನ ಸಾಗಿಸಲಿ ಎಂಬುದು ತಾಯಿಯ ಆಲೋಚನೆ ಆಗಿತ್ತು. ಆಗ ಟಾಮ್​ ಹಾಲೆಂಡ್​ಗೆ 18ರ ಪ್ರಾಯ. ಅವರನ್ನು ಪೀಠೋಪಕರಣ ತಯಾರಿಸುವ ಬಡಗಿ ಕೆಲಸ ಕಲಿಸುವ ಶಾಲೆಗೆ ಸೇರಿಸಿದ್ದರು. ಆದರೆ ಆ ಕೆಲಸದಲ್ಲಿ ಮುಂದುವರಿಯಬೇಕಾದ ಪರಿಸ್ಥಿತಿ ಅವರಿಗೆ ಬರಲಿಲ್ಲ.

2016ರಲ್ಲಿ ತೆರೆಕಂಡ ‘ಕ್ಯಾಪ್ಟನ್​ ಅಮೆರಿಕ: ಸಿವಿಲ್​ ವಾರ್’ ಸಿನಿಮಾದಲ್ಲಿ ‘ಸ್ಪೈಡರ್​ಮ್ಯಾನ್​’ ಪಾತ್ರ ಮಾಡಿದ ಬಳಿಕ ಅವರ ಅದೃಷ್ಟ ಖುಲಾಯಿಸಿತು. ಬ್ಯಾಕ್​ ಟು ಬ್ಯಾಕ್​ ಹಾಲಿವುಡ್​ ಸಿನಿಮಾಗಳು ಟಾಮ್​ ಹಾಲೆಂಡ್​ ಕೈ ಹಿಡಿದವು. ಈಗ ಅವರಿಗೆ ಕೇವಲ 25 ವರ್ಷ ವಯಸ್ಸು. ಇಷ್ಟು ಚಿಕ್ಕ ವಯಸ್ಸಿನಲ್ಲೇ ಸೂಪರ್​ ಸ್ಟಾರ್​ ಆಗಿ ಅವರು ಮಿಂಚುತ್ತಿದ್ದಾರೆ.

ಇದನ್ನೂ ಓದಿ:

‘ನೆನಪಿರಲಿ’ ಪ್ರೇಮ್​ ಮುಂದಿನ ಚಿತ್ರಕ್ಕೆ 400 ಕೋಟಿ ರೂ. ಬಜೆಟ್​; ಹಾಲಿವುಡ್​ ಹಾದಿಯತ್ತ ‘ಲವ್ಲಿ ಸ್ಟಾರ್​’

ಸುಶಾಂತ್​ ಸಿಂಗ್​ ರಜಪೂತ್​ ಸಾವಿನ ಪ್ರಮುಖ ಆರೋಪಿ ರಿಯಾ ಚಕ್ರವರ್ತಿಗೆ ಹಾಲಿವುಡ್​ನಿಂದ ಆಫರ್​?

ತಾಜಾ ಸುದ್ದಿ

Related Stories

Click on your DTH Provider to Add TV9 Kannada