ದಾನಿಶ್​ ಸೇಠ್​ ಸಹೋದರಿ ಕುಬ್ರಾ ಸೇಠ್​ಗೆ ‘ಫೌಂಡೇಶನ್​’ ಅವಕಾಶ; ಹಾಲಿವುಡ್​ ಕಲಾವಿದರ ಜತೆ ನಟನೆ

‘ಫೌಂಡೇಶನ್’​ ವೆಬ್​ ಸರಣಿಯ ಈ ಪಾತ್ರಕ್ಕಾಗಿ ಬಹಳ ಹಿಂದೆಯೇ ಕುಬ್ರಾ ಸೇಠ್​ ಆಡಿಷನ್​ ನೀಡಿದ್ದರು. ಆದರೆ ಆ ವಿಚಾರವನ್ನು ಗುಟ್ಟಾಗಿ ಇರಿಸಲಾಗಿತ್ತು. ಅವರು ಆಯ್ಕೆಯಾಗಿದ್ದ ಸುದ್ದಿಯೂ ಕೂಡ ಗೌಪ್ಯವಾಗಿ ಉಳಿದಿತ್ತು.

ದಾನಿಶ್​ ಸೇಠ್​ ಸಹೋದರಿ ಕುಬ್ರಾ ಸೇಠ್​ಗೆ ‘ಫೌಂಡೇಶನ್​’ ಅವಕಾಶ; ಹಾಲಿವುಡ್​ ಕಲಾವಿದರ ಜತೆ ನಟನೆ
ಕುಬ್ರಾ ಸೇಠ್, ದಾನಿಶ್ ಸೇಠ್

ನಟನಾಗಿ, ನಿರೂಪಕನಾಗಿ, ಆರ್​ಸಿಬಿ ಇನ್​ಸೈಡರ್​ ಆಗಿ ದಾನಿಶ್​ ಸೇಠ್​ ಅವರು ಸಿಕ್ಕಾಪಟ್ಟೆ ಫೇಮಸ್​. ಅದೇ ರೀತಿ ಅವರ ಅಕ್ಕ ಕುಬ್ರಾ ಸೇಠ್​ ಕೂಡ ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದಾರೆ. ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ವೆಬ್​ ಸಿರೀಸ್​ ಲೋಕದಲ್ಲಿ ಅವರಿಗೆ ಸಖತ್ ಡಿಮ್ಯಾಂಡ್​ ಇದೆ. ನಿರೂಪಕಿಯಾಗಿ, ರೂಪದರ್ಶಿಯಾಗಿಯೂ ಕುಬ್ರಾ ಸೇಠ್​ ಕೆಲಸ ಮಾಡುತ್ತಾರೆ. ಇಷ್ಟೆಲ್ಲ ಬ್ಯುಸಿ ಆಗಿರುವ ಅವರು ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ಅದು ಸಾಧ್ಯವಾಗಿರುವುದು ‘ಫೌಂಡೇಶನ್​’ ವೆಬ್​ ಸಿರೀಸ್​ ಮೂಲಕ. ‘ಆ್ಯಪಲ್​ ಟಿವಿ ಪ್ಲಸ್​’ ಮೂಲಕ ಈ ವೆಬ್​ ಸರಣಿ ಪ್ರಸಾರ ಆಗುತ್ತಿದೆ. ಅದು ಕುಬ್ರಾಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ತಂದುಕೊಟ್ಟಿದೆ.

ಈ ಮೊದಲು ‘ಸೇಕ್ರೆಡ್​ ಗೇಮ್ಸ್​’ ವೆಬ್​ ಸರಣಿಯಲ್ಲಿ ಕುಬ್ರಾ ಸೇಠ್​ ಮಾಡಿದ್ದ ಕುಕೂ ಎಂಬ ಪಾತ್ರ ಗಮನ ಸೆಳೆದಿತ್ತು. ಅದಲ್ಲದೇ ‘ದಿ ವರ್ಡಿಕ್ಟ್​’, ‘ಇಲ್ಲೀಗಲ್​’ ಮುಂತಾದ ವೆಬ್​ ಸರಣಿಗಳಲ್ಲಿ ಅವರು ಬಣ್ಣ ಹಚ್ಚಿದ್ದರು. ಅದೆಲ್ಲವನ್ನೂ ಮೀರಿಸುವಂತಹ ಅವಕಾಶ ಸಿಕ್ಕಿದ್ದು ‘ಫೌಂಡೇಶನ್​’ ವೆಬ್​ ಸಿರೀಸ್​ ಮೂಲಕ. ಸೈನ್ಸ್​ ಫಿಕ್ಷನ್​ ಪ್ರಕಾರದ ಕಥೆಯುಳ್ಳ ಈ ವೆಬ್​ ಸರಣಿಯ ಮೂರನೇ ಎಪಿಸೋಡ್​ನ ಕೊನೆಯಲ್ಲಿ ಕುಬ್ರಾ ಸೇಠ್​ ಎಂಟ್ರಿ ನೀಡುತ್ತಾರೆ. ನಾಲ್ಕನೇ ಎಪಿಸೋಡ್​ನಲ್ಲಿ ಅವರ ಪಾತ್ರ ಗಮನ ಸೆಳೆಯಲಿದೆ.

ಬಹಳ ಹಿಂದೆಯೇ ಈ ಪಾತ್ರಕ್ಕಾಗಿ ಕುಬ್ರಾ ಸೇಠ್​ ಆಡಿಷನ್​ ನೀಡಿದ್ದರು. ಆದರೆ ಆ ವಿಚಾರವನ್ನು ಗುಟ್ಟಾಗಿ ಇರಿಸಲಾಗಿತ್ತು. ಅವರು ಆಯ್ಕೆಯಾಗಿದ್ದು ಕೂಡ ಗೌಪ್ಯವಾಗಿ ಉಳಿದಿತ್ತು. ‘ಫೌಂಡೇಶನ್’​ನಲ್ಲಿ ಕುಬ್ರಾ ನಟಿಸಿದ್ದಾರೆ ಎಂಬ ಸುದ್ದಿ ನಂತರ ಹೊರಬಿತ್ತು. ಇತ್ತೀಚೆಗಷ್ಟೇ ಇದರ ಕೆಲವು ಫೋಟೋಗಳನ್ನು ಹಂಚಿಕೊಂಡಿರುವ ಕುಬ್ರಾ ಅವರು ಸಖತ್​ ಹೆಮ್ಮೆ ಪಟ್ಟಿದ್ದಾರೆ.

‘ಫೌಂಡೇಶನ್​’ ಮೂಲಕ ಹಾಲಿವುಡ್​ನ ಕೆಲವು ಜನಪ್ರಿಯ ಕಲಾವಿದರ ಜೊತೆ ತೆರೆಹಂಚಿಕೊಳ್ಳುವ ಅವಕಾಶ ಕುಬ್ರಾ ಸೇಠ್​ಗೆ ಸಿಕ್ಕಿದೆ. ಅಲ್ಲಿನ ಕೆಲಸದ ವೈಖರಿಗೂ ಅವರು ಫಿದಾ ಆಗಿದ್ದಾರೆ. ಈ ವೆಬ್​ ಸರಣಿಯಲ್ಲಿ ಹೆಚ್ಚು ವಿಎಫ್​ಎಕ್ಸ್​ ದೃಶ್ಯಗಳಿದ್ದು, ಅಂಥ ಸೀನ್​ಗಳಲ್ಲಿ ನಟಿಸಿದ್ದು ಅವರಿಗೆ ಹೊಸ​ ಅನುಭವ ನೀಡಿದೆ. ಸೆ.24ರಿಂದ ‘ಫೌಂಡೇಶನ್​’ ಪ್ರಸಾರ ಆರಂಭಿಸಿದೆ. ಪ್ರತಿ ಶುಕ್ರವಾರ ಒಂದೊಂದು ಎಪಿಸೋಡ್​ ಬಿಡುಗಡೆ ಆಗುತ್ತಿದೆ.

ಇದನ್ನೂ ಓದಿ:

ದಾನಿಶ್​ ಸೇಠ್​ಗೆ ಕರೆ ಮಾಡಿ ಹೊಗಳಿದ ರಣಬೀರ್​ ಕಪೂರ್​; ಈ ವಿಡಿಯೋ ಅಪ್​ಲೋಡ್​ ಮಾಡಿದ್ದಕ್ಕೆ ಬೈದ ಬಾಲಿವುಡ್​ ನಟ

Danish Sait: ಅನ್ಯಾ ಜತೆ ರಿಜಿಸ್ಟರ್ ಮ್ಯಾರೇಜ್ ಆದ ದಾನಿಶ್​ ಸೇಠ್​; ಫೋಟೋ ವೈರಲ್

Read Full Article

Click on your DTH Provider to Add TV9 Kannada