ನಾಗ ಚೈತನ್ಯ ಮೇಲೆ ನಂಬಿಕೆ ಇಟ್ಟ ಸಮಂತಾಗೆ ಮಗುವೂ ಸಿಗಲಿಲ್ಲ; ಶಾರುಖ್​ ಜತೆ ಸಿನಿಮಾವೂ ಕೈ ಹಿಡಿಯಲಿಲ್ಲ

ನಟನೆಗೆ ಕೊಂಚ ಬ್ರೇಕ್​ ನೀಡಿ ನಾಗ ಚೈತನ್ಯ ಜೊತೆ ಮಗು ಪಡೆಯಬೇಕು ಎಂದು ಸಮಂತಾ ಪ್ಲ್ಯಾನ್​ ಮಾಡಿಕೊಂಡಿದ್ದರು. ಹಾಗಾಗಿ ಶಾರುಖ್​ ಖಾನ್​ ಜೊತೆ ನಟಿಸುವ ಅವಕಾಶವನ್ನೂ ತಳ್ಳಿ ಹಾಕಿದ್ದರು. ಆದರೆ ಕಡೆಗೆ ಆಗಿದ್ದೇ ಬೇರೆ.

ನಾಗ ಚೈತನ್ಯ ಮೇಲೆ ನಂಬಿಕೆ ಇಟ್ಟ ಸಮಂತಾಗೆ ಮಗುವೂ ಸಿಗಲಿಲ್ಲ; ಶಾರುಖ್​ ಜತೆ ಸಿನಿಮಾವೂ ಕೈ ಹಿಡಿಯಲಿಲ್ಲ
ಶಾರುಖ್ ಖಾನ್, ಸಮಂತಾ, ನಾಗ ಚೈತನ್ಯ

ಕಳೆದ ಕೆಲವು ತಿಂಗಳಿನಿಂದ ನಟಿ ಸಮಂತಾ ಅವರ ವೈಯಕ್ತಿಕ ಜೀವನದ ಬಗ್ಗೆ ಹಲವು ಸುದ್ದಿಗಳು ಹರಿದಾಡಿದವು. ಅವರು ನಾಗ ಚೈತನ್ಯಗೆ ಡಿವೋರ್ಸ್​ ನೀಡಿದ ನಂತರವೂ ಅದರ ಕುರಿತಾದ ಗಾಸಿಪ್​ಗಳಿಗೆ ಬ್ರೇಕ್​ ಬಿದ್ದಿಲ್ಲ. ಅಷ್ಟೊಂದು ಅನ್ಯೋನ್ಯವಾಗಿದ್ದ ಜೋಡಿ ಏಕಾಏಕಿ ವಿಚ್ಛೇದನದ ತೀರ್ಮಾನ ತೆಗೆದುಕೊಳ್ಳಲು ಕಾರಣ ಏನಿರಬಹುದು ಎಂಬುದನ್ನು ಗಾಸಿಪ್​ ಮಂದಿ ಕೆದಕುತ್ತಲೇ ಇದ್ದಾರೆ. ಈ ನಡುವೆ ಸಮಂತಾಗೆ ಆದ ಎರಡು ದೊಡ್ಡ ನಷ್ಟದ ಬಗ್ಗೆ ಈಗ ಗುಸುಗುಸು ಹಬ್ಬಿದೆ. ಮಗು ಪಡೆಯಬೇಕು ಎಂದುಕೊಂಡಿದ್ದ ಸಮಂತಾ ಆಸೆ ಮಣ್ಣು ಪಾಲಾಯಿತು. ಅವರಿಗೆ ಶಾರುಖ್​ ಜೊತೆ ನಟಿಸುವ ಅವಕಾಶವೂ ಕೈತಪ್ಪಿ ಹೋಯಿತು ಎಂಬ ಗಾಸಿಪ್​ ಕೇಳಿಬಂದಿದೆ.

ಬಾಲಿವುಡ್​ ನಟ ಶಾರುಖ್​ ಖಾನ್​ ಜೊತೆ ತಮಿಳಿನ ಖ್ಯಾತ ನಿರ್ದೇಶಕ ಅಟ್ಲಿ ಅವರು ಸಿನಿಮಾ ಮಾಡುತ್ತಿದ್ದಾರೆ. ಆ ಚಿತ್ರಕ್ಕೆ ನಯನತಾರಾ ನಾಯಕಿ. ಆದರೆ ಅವರಿಗಿಂತಲೂ ಮುಂಚೆ ಸಮಂತಾಗೆ ಆಫರ್ ನೀಡಲಾಗಿತ್ತು. ಅದನ್ನು ವೈಯಕ್ತಿಕ ಕಾರಣದಿಂದ ಸಮಂತಾ ರಿಜೆಕ್ಟ್​ ಮಾಡಿದ್ದರಂತೆ. ಏನು ಆ ವೈಯಕ್ತಿಕ ಕಾರಣ? ತಾಯಿಯಾಗುವ ಹಂಬಲ!

ಹೌದು, ನಟನೆಗೆ ಕೊಂಚ ಬ್ರೇಕ್​ ನೀಡಿ ನಾಗ ಚೈತನ್ಯ ಜೊತೆ ಮಗು ಪಡೆಯಬೇಕು ಎಂದು ಸಮಂತಾ ಪ್ಲ್ಯಾನ್​ ಮಾಡಿಕೊಂಡಿದ್ದರು. ಅದಕ್ಕಾಗಿಯೇ ಅವರು ‘ಶಾಕುಂತಲಂ’ ಚಿತ್ರದ ಶೂಟಿಂಗ್​ ಬೇಗ ಬೇಗ ಮುಗಿಯುವಂತೆ ಒತ್ತಾಯ ಹೇರಿದ್ದರು. ಶಾರುಖ್​ ಖಾನ್​ ಜೊತೆ ನಟಿಸುವ ಅವಕಾಶವನ್ನೂ ತಳ್ಳಿ ಹಾಕಿದ್ದರು. ಆದರೆ ಕಡೆಗೆ ಆಗಿದ್ದೇ ಬೇರೆ.

ನಾಗ ಚೈತನ್ಯ ಮತ್ತು ಸಮಂತಾ ನಡುವೆ ವೈಮನಸ್ಸು ಮೂಡಿತು. ಅದು ವಿಚ್ಛೇದನದಲ್ಲಿ ಕೊನೆಯಾಯಿತು. ಮಗು ಪಡೆಯಬೇಕು ಎಂಬ ಸಮಂತಾ ಆಸೆ ಈಡೇರಲೇ ಇಲ್ಲ. ಅತ್ತ, ಶಾರುಖ್​ ಜೊತೆ ನಟಿಸುವ ಅವಕಾಶವೂ ಕೈ ಹಿಡಿಯಲಿಲ್ಲ ಎಂದು ಗಾಸಿಪ್​ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಈ ಬಗ್ಗೆ ಸಮಂತಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಸದ್ಯ ಸಮಂತಾ ಮತ್ತೆ ಸಿನಿಮಾಗಳನ್ನು ಒಪ್ಪಿಕೊಳ್ಳುವತ್ತ ಗಮನ ಹರಿಸಿದ್ದಾರೆ. ‘ದಿ ಫ್ಯಾಮಿಲಿ ಮ್ಯಾನ್​ 2’ ಯಶಸ್ಸಿನ ಬಳಿಕ ಅವರಿಗೆ ಬೇಡಿಕೆ ಹೆಚ್ಚಿದೆ. ದಸರಾ ಹಬ್ಬದ ಪ್ರಯುಕ್ತ ಅವರ ಹೊಸ ಸಿನಿಮಾ ಅನೌನ್ಸ್​ ಆಗಿದ್ದು, ಶೀರ್ಷಿಕೆ ಇನ್ನೂ ಬಹಿರಂಗ ಆಗಿಲ್ಲ. ಇದು ವಿಚ್ಛೇದನದ ಬಳಿಕ ಅವರು ಒಪ್ಪಿಕೊಂಡ ಮೊದಲ ಸಿನಿಮಾ.

ಇದನ್ನೂ ಓದಿ:

ಡಿವೋರ್ಸ್​ ಬಳಿಕ ನಾಗ ಚೈತನ್ಯ ಅಭಿಮಾನಿಗಳಿಗೆ ಗುಡ್ ನ್ಯೂಸ್​: ಅ.22ಕ್ಕಾಗಿ ಎಲ್ಲರ ನಿರೀಕ್ಷೆ

‘ತಾಯಿ ಆಗಲು ಬಯಸಿದ್ರು ಸಮಂತಾ, ಆದರೆ..’; ನಾಗ ಚೈತನ್ಯ ಜತೆಗಿನ ಡಿವೋರ್ಸ್​ ಬಳಿಕ ನಿರ್ಮಾಪಕಿ ಅಚ್ಚರಿ ಹೇಳಿಕೆ

Click on your DTH Provider to Add TV9 Kannada