Chiranjeevi Sarja: ಚಿರು ಹುಟ್ಟುಹಬ್ಬಕ್ಕೆ ಮೇಘನಾ ರಾಜ್ ವಿಶೇಷ ಫೋಟೋಶೂಟ್; ಇಲ್ಲಿದೆ ರಾಣಿ ಗೆಟಪ್ನ ಫೋಟೋ ಆಲ್ಬಂ
Meghana Raj: ಅಕ್ಟೋಬರ್ ತಿಂಗಳು ಎಂದರೆ ಚಿರಂಜೀವಿ ಸರ್ಜಾ ಅಭಿಮಾನಿಗಳಿಗೆ ಮತ್ತು ಮೇಘನಾ ರಾಜ್ ಕುಟುಂಬಕ್ಕೆ ತುಂಬ ವಿಶೇಷ. ಇಂದು (ಅ.17) ಚಿರು ಜನ್ಮದಿನ. ಆ ಪ್ರಯುಕ್ತ ಮೇಘನಾ ರಾಜ್ ವಿಶೇಷ ಫೋಟೋಶೂಟ್ ಮಾಡಿಸಿದ್ದಾರೆ.
Updated on: Oct 17, 2021 | 7:50 AM

Actress Meghana Raj new photoshoot on Chiranjeevi Sarja birthday

Actress Meghana Raj new photoshoot on Chiranjeevi Sarja birthday

ಮಹಾರಾಣಿಯ ಅವತಾರ ತಾಳಿರುವ ಮೇಘನಾ ರಾಜ್ ಅವರನ್ನು ಕಂಡು ಅಭಿಮಾನಿಗಳು ಕಣ್ಣರಳಿಸಿದ್ದಾರೆ. ಈ ಫೋಟೋಗಳ ಮೂಲಕ ಚಿರಂಜೀವಿ ಸರ್ಜಾಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಲಾಗಿದೆ.

ರೆಟ್ರೋ ವೇಷದಲ್ಲಿಯೂ ಮೇಘನಾ ಫೋಟೋಶೂಟ್ ಮಾಡಿಸಿದ್ದಾರೆ. ವಿಶೇಷ ಕಾನ್ಸೆಪ್ಟ್ನೊಂದಿಗೆ ಈ ಫೋಟೋಗಳನ್ನು ಸೆರೆ ಹಿಡಿಯಲಾಗಿದೆ. ಇಂದು ಮೇಘನಾ ರಾಜ್ ನಟನೆಯ ಹೊಸ ಸಿನಿಮಾ ಕೂಡ ಸೆಟ್ಟೇರುತ್ತಿದೆ.

ಚಿರು ನಿಧನರಾದ ಬಳಿಕ ಅಭಿಮಾನಿಗಳು ಸೆಲೆಬ್ರೇಟ್ ಮಾಡುತ್ತಿರುವ ಎರಡನೇ ವರ್ಷದ ಬರ್ತ್ಡೇ ಇದು. ಹುಟ್ಟುಹಬ್ಬದ ಸಂದರ್ಭದಲ್ಲಿ ಚಿರು ನೆನಪುಗಳನ್ನು ಮೆಲುಕು ಹಾಕಲಾಗುತ್ತಿದೆ.

ಚಿರಂಜೀವಿ ಸರ್ಜಾ ಜನ್ಮದಿನದ ಸಲುವಾಗಿ ವಿಶೇಷ ಪೋಸ್ಟರ್ ಕೂಡ ಬಿಡುಗಡೆ ಆಗದೆ. ಸರ್ಜಾ ಮತ್ತು ಸುಂದರ್ ರಾಜ್ ಕುಟುಂಬದವರು ಚಿರುಗೆ ಈ ಪೋಸ್ಟರ್ ಮೂಲಕ ಶುಭಾಶಯ ಕೋರಿದ್ದಾರೆ. ಅಭಿಮಾನಿಗಳು ಇದನ್ನು ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ.



















