ಮಾಸ್ ಕಮರ್ಷಿಯಲ್ ಶೈಲಿಯಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಹಾಗಾದರೆ ಈವರೆಗೂ ಎಷ್ಟು ಕಲೆಕ್ಷನ್ ಆಗಿರಬಹುದು ಎಂಬ ಕುತೂಹಲ ಸಹಜ. ಈ ಪ್ರಶ್ನೆಗೆ ನಿರ್ಮಾಪಕ ಕೆಪಿ ಶ್ರೀಕಾಂತ್ ಅವರು ಸದ್ಯಕ್ಕೆ ಉತ್ತರ ನೀಡಿಲ್ಲ. ವಿತರಕ ಜಯಣ್ಣ ಅವರ ಕಡೆಗೆ ಶ್ರೀಕಾಂತ್ ಕೈ ತೋರಿಸುತ್ತಾರೆ.
‘ಚಿತ್ರವನ್ನು ಜನರಿಗೆ ತಲುಪಿಸುವುದು ನನ್ನ ಕೆಲಸ. ಚಿತ್ರಮಂದಿರದಲ್ಲಿ ಏನಾದರೂ ತಾಂತ್ರಿಕ ಸಮಸ್ಯೆ ಇದ್ದರೆ ನೋಡಿಕೊಳ್ಳುತ್ತಿದ್ದೇನೆ. ಈ ಸಿನಿಮಾವನ್ನು ರಾಜ್ಯಾದ್ಯಂತ ರಿಲೀಸ್ ಮಾಡಿರುವುದು ಜಯಣ್ಣ ಫಿಲ್ಮ್ಸ್. ಕಲೆಕ್ಷನ್ ಎಷ್ಟಾಗಿದೆ ಎಂಬುದನ್ನು ಹೇಳಲು ಅವರೇ ಸೂಕ್ತ. ನಾನು ಆ ಬಗ್ಗೆ ಅವರಲ್ಲಿ ಕೇಳಿಲ್ಲ. ಸದ್ಯಕ್ಕೆ ಜನರು ಥಿಯೇಟರ್ಗೆ ಬರುತ್ತಿರುವುದನ್ನು ನೋಡಿ ಖುಷಿಪಡುತ್ತಿದ್ದೇನೆ. ಕಲೆಕ್ಷನ್ ಲೆಕ್ಕವನ್ನು ಜಯಣ್ಣ ಅವರಿಗೇ ನೀವು ಕೇಳಬೇಕು’ ಎಂದಿದ್ದಾರೆ ಶ್ರೀಕಾಂತ್.
ಈ ಸಿನಿಮಾದಲ್ಲಿ ದುನಿಯಾ ವಿಜಯ್ಗೆ ಜೋಡಿಯಾಗಿ ಸಂಜನಾ ಆನಂದ್ ಅಭಿನಯಿಸಿದ್ದಾರೆ. ಡಾಲಿ ಧನಂಜಯ, ಕಾಕ್ರೋಜ್ ಸುಧಿ, ಯಶ್ ಶೆಟ್ಟಿ, ಚನ್ನಕೇಶವ, ಶ್ರೀಧರ್, ಶ್ರೇಷ್ಠ ಮುಂತಾದವರ ನಟನೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ‘ಅಭಿಮಾನಿಗಳ ಆಶೀರ್ವಾದದಿಂದ ನಮ್ಮ ಚಿತ್ರ ಇಷ್ಟು ದೊಡ್ಡ ಮಟ್ಟಕ್ಕೆ ಗೆದ್ದಿದೆ. ಅದರ ಬಗ್ಗೆ ಖುಷಿ ಇದೆ. ನನ್ನ ಅಭಿಮಾನಿಗಳು ನನ್ನ ಕೈ ಬಿಡಲಿಲ್ಲ’ ಎಂದಿದ್ದಾರೆ ದುನಿಯಾ ವಿಜಯ್.
ಇದನ್ನೂ ಓದಿ:
‘ಕೋಟಿಗೊಬ್ಬ 3’ ವಿರುದ್ಧ ಷಡ್ಯಂತ್ರ ಆಗಿದೆ; ‘ಸಲಗ’ ತಂಡ ಇದರಲ್ಲಿ ಭಾಗಿ ಆಗಿಲ್ಲ: ಜಾಕ್ ಮಂಜು ಸ್ಪಷ್ಟನೆ
Salaga Movie Review: ‘ಸಲಗ’ ತುಂಬಾ ರಗಡ್ ಆಗಿದೆ ಎಚ್ಚರಿಕೆ! ದುನಿಯಾ ವಿಜಯ್ಗೆ ಮಾಸ್ ಪ್ರೇಕ್ಷಕರೇ ಟಾರ್ಗೆಟ್